Zomato Food Delivery scam: ಪ್ರಸ್ತುತ ನಮ್ಮ ಅಗತ್ಯ ವಸ್ತುಗಳೆಲ್ಲವೂ ನಮ್ಮ ಬೆರಳ ತುದಿಯಲ್ಲಿಯೇ ಲಭ್ಯವಿದೆ. ಇದಕ್ಕೆ ಆಹಾರ ಕೂಡ ಹೊರತಾಗಿಲ್ಲ. ಆದರೆ, ನೀವು ಟೆಕ್ ಕಂಪನಿ ಜೊಮಾಟೊದಿಂದ ಫುಡ್ ಆರ್ಡರ್ ಮಾಡುತ್ತಿದ್ದರೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ.  ಇಲ್ಲವೇ ಮೋಸ ಹೋಗಬಹುದು. ಪ್ರಸಿದ್ಧ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ ಆದ ಜೊಮಾಟೊದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದ್ದು ಭಾರೀ ಸಂಚಲನ ಸೃಷ್ಟಿಸಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಕೆಲವು ಡೆಲಿವರಿ ಏಜೆಂಟ್‌ಗಳು ಗ್ರಾಹಕರಿಗೆ ಫುಡ್ ವೆಚ್ಚದ 50 ಪ್ರತಿಶತದಷ್ಟು ಕಡಿಮೆ ಹಣವನ್ನು ಹೇಗೆ ಪಾವತಿಸಬೇಕೆಂದು ಹೇಳುತ್ತಿದ್ದಾರೆ. ಈ ಕುರಿತಂತೆ ಉದ್ಯಮಿ ವಿನಯ್ ಸತಿ ಎನ್ನುವವರು ತಮ್ಮ ಮತ್ತು ಜೊಮಾಟೊ ಡೆಲಿವರಿ ಮಾಡುವವರ ನಡುವಿನ ಸಂಭಾಷಣೆಯನ್ನು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. 


ಇದನ್ನೂ ಓದಿ- ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸರ್ಕಾರದ ಮಹತ್ವದ ನಿರ್ಧಾರ!


ಉದ್ಯಮಿ ವಿನಯ್ ಸತಿ ಅವರು ರೆಸ್ಟೋರೆಂಟ್‌ನಿಂದ ಕೆಲವು ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾರೆ. ಈ ಸಮಯದಲ್ಲಿ ಅವರು  ಆನ್‌ಲೈನ್‌ನಲ್ಲಿ ಹಣವನ್ನೂ ಪಾವತಿಸಿದ್ದಾರೆ. ಗ್ರಾಹಕರ ಆರ್ಡರ್ ಹೊತ್ತು ಮನೆ ಬಾಗಿಲಿಗೆ ತಲುಪಿದ ಜೊಮಾಟೊ ಫುಡ್ ಡೆಲಿವರಿ ಮ್ಯಾನ್ ಆನ್‌ಲೈನ್‌ನಲ್ಲಿ ಹಣ ಪಾವತಿಸದಂತೆ ಬದಲಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸುವಂತೆ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿನಯ್ ಸತಿ ಅವರು ಕಾರಣ ಏನೆಂದು ಕೇಳಿದಾಗ, ಆನ್‌ಲೈನ್‌ನಲ್ಲಿ  700 ಅಥವಾ 800 ರೂ.ಗೆ ಆರ್ಡರ್ ಮಾಡುವ ಫುಡ್ ದರ ಕೇವಲ 200 ರೂ.ಗಳು ಮಾತ್ರ ಎಂದು ಫುಡ್ ಡೆಲಿವರಿ ಮ್ಯಾನ್ ವಿವರಿಸಿದ್ದಾರೆ. ಇದನ್ನು ಕೇಳಿದ ವಿನಯ್ ಸತಿ ಅವರು ಅಚ್ಚರಿಗೊಂಡಿದ್ದಾರೆ. 


[[{"fid":"280423","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಈ ಪೋಸ್ಟ್ ಕೆಳಗೆ ಗಮನಿಸಿ :- ಇದೆಲ್ಲದರ ನಂತರ ನನಗೆ ಎರಡು ಆಯ್ಕೆಗಳಿದ್ದವು ಮೊದಲನೆಯದಾಗಿ, ನಾನು ಈ ಕೊಡುಗೆಯನ್ನು ಆನಂದಿಸುತ್ತಿದ್ದೆ. ಇಲ್ಲವೇ ಈ ಹಗರಣವನ್ನು ಬಯಲಿಗೆಳೆಯುತವುದು.
ಮತ್ತು ಉದ್ಯಮಿಯಾಗಿರುವುದರಿಂದ, ನಾನು ಎರಡನೇ ಆಯ್ಕೆಯನ್ನು ಆರಿಸಿದೆ ಎಂದು ವಿನಯ್ ಸತಿ ಬರೆದಿದ್ದಾರೆ.


[[{"fid":"280424","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]


ಇದನ್ನೂ ಓದಿ- Pension Scheme: ಪ್ರಧಾನಿ ಮೋದಿ ಸರ್ಕಾರದ ಉತ್ತಮ ಯೋಜನೆ, ನಿಮಗೆ ಉಪಯುಕ್ತವಾಗಬಹುದು


ಪೋಸ್ಟ್ ವೈರಲ್:
ಲಿಂಕ್ಡ್‌ಇನ್‌ನಲ್ಲಿ ಜೊಮಾಟೊ ಫುಡ್ ಡೆಲಿವರಿ ಕುರಿತ ಈ ವಿಷಯವನ್ನು ಶೇರ್ ಮಾಡುವಾಗ ವಿನಯ್ ಸತಿ ಅವರು ಜೊಮಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ದೀಪಿಂದರ್ ಗೋಯಲ್ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ 600 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ ಮತ್ತು ಈ ವರದಿಯನ್ನು ಪ್ರಕಟಿಸಿದ ಸಮಯದಲ್ಲಿ 18 ಬಾರಿ ಮರುಪೋಸ್ಟ್ ಮಾಡಲಾಗಿದೆ. ಇದು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರ ಗಮನವನ್ನೂ ಸೆಳೆದಿದೆ.  ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಜೊಮಾಟೊ ಸಿಇಒ ದೀಪೇಂದರ್ ಗೋಯಲ್, ಈ ಹಗರಣದ ಬಗ್ಗೆ ಅರಿವಿದ್ದು, ಲೋಪದೋಷಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.