ಬೆಂಗಳೂರು : ಭಾರತದಲ್ಲಿ ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿದಿನ ಹೊಸ ಹೊಸ ಮಾಲ್‌ವೇರ್‌ಗಳು ಮತ್ತು ಸ್ಪೈವೇರ್‌ಗಳು  ಹೊಸ ಹೊಸ ಸವಾಲುಗಳನ್ನು ತಂದೊಡ್ಡುತ್ತಿವೆ. ಇಂತಹ ಎರಡು ಹೊಸ ಸ್ಪೈವೇರ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಲಕ್ಷಾಂತರ ಭಾರತೀಯ ಬಳಕೆದಾರರ ಡೇಟಾವನ್ನು ಚೀನಾಕ್ಕೆ ಕಳುಹಿಸುತ್ತಿದೆ ಎನ್ನಲಾಗಿದೆ. ಈ ಸ್ಪೈವೇರ್ ಬಳಕೆದಾರರು ವೈರಸ್  ಅಟ್ಯಾಕ್ ಆಗಿರುವುದನ್ನು  ಪತ್ತೆಹಚ್ಚುವುದನ್ನು ತಡೆಯುತ್ತದೆ. ಫೈಲ್ ರಿಕವರಿ ಅಂಡ್ ಡೇಟಾ ರಿಕವರಿ ಮತ್ತು ಫೈಲ್ ಮ್ಯಾನೇಜರ್ ಎಂಬ ಎರಡು ಅಪ್ಲಿಕೇಶನ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ. 


COMMERCIAL BREAK
SCROLL TO CONTINUE READING

ಚೀನಾಕ್ಕೆ ಡೇಟಾವನ್ನು ಕಳುಹಿಸುತ್ತಿವೆ ಈ ಅಪ್ಲಿಕೇಶನ್‌ಗಳು : 
ಸೈಬರ್ ಸೆಕ್ಯುರಿಟಿ ಕಂಪನಿ ಪ್ರಡಿಯೊ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ  ಎರಡು ಅಪ್ಲಿಕೇಶನ್‌ಗಳ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಅಪ್ಲಿಕೇಶನ್‌ಗಳು ತಮ್ಮನ್ನು ಫೈಲ್ ಮ್ಯಾನೇಜ್‌ಮೆಂಟ್ ಟೂಲ್‌ಗಳೆಂದು ಹೇಳಿಕೊಳ್ಳುತ್ತವೆ. ಆದರೆ, ಅವುಗಳು ಬಳಕೆದಾರರ ಡೇಟಾವನ್ನು ಕದಿಯುತ್ತಿವೆ ಮತ್ತು ಅವುಗಳನ್ನು ಚೀನಾಕ್ಕೆ ಕಳುಹಿಸುತ್ತಿವೆ ಎನ್ನಲಾಗಿದೆ.  ಈ ಅಪ್ಲಿಕೇಶನ್‌ಗಳನ್ನು ಲಕ್ಷಾಂತರ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ.


ಇದನ್ನೂ ಓದಿ : Jio specila scheme : ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನೇ ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿಸಲು ಹೀಗೆ ಮಾಡಿ


ಫೈಲ್ ರಿಕವರಿ  ಅಂಡ್ ಡೇಟಾ ರಿಕವರಿ ಅಪ್ಲಿಕೇಶನ್‌ಗಳನ್ನು ವಾಸ್ತವವಾಗಿ ಬಳಕೆದಾರರ ಡೇಟಾವನ್ನು ಕದಿಯಲು ಬಳಸಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಅಪ್ಲಿಕೇಶನ್‌ಗಳು 10 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಮತ್ತು 5 ಲಕ್ಷ ಡೌನ್‌ಲೋಡ್‌ಗಳನ್ನು ಹೊಂದಿವೆ. ವಾಸ್ತವವಾಗಿ, ಈ ಅಪ್ಲಿಕೇಶನ್‌ಗಳು ತಾವು ಯಾವುದೇ ರೀತಿಯ ಡೇಟಾವನ್ನು ಕದಿಯುವುದಿಲ್ಲ ಎಂದು ಹೇಳಿಕೊಳ್ಳುತ್ತವೆ. ಆದರೆ ಪ್ರಡಿಯೊ (Pradeo) ವರದಿಯ ಪ್ರಕಾರ, ಈ ಅಪ್ಲಿಕೇಶನ್‌ಗಳು ಬಳಕೆದಾರರ ನೈಜ ಸಮಯದ ವಿವರಗಳು, ಸಾಮಾಜಿಕ ನೆಟ್‌ವರ್ಕ್‌ಗಳು, ಇಮೇಲ್‌ಗಳು, ಸಂಪರ್ಕಗಳು ಇತ್ಯಾದಿಗಳ ವೈಯಕ್ತಿಕ ಡೇಟಾವನ್ನು ಕದಿಯುತ್ತಿವೆ. ಈ ಡೇಟಾವನ್ನು ಈ ಅಪ್ಲಿಕೇಶನ್‌ಗಳಿಂದ ಚೈನೀಸ್ ಸರ್ವರ್‌ಗಳಿಗೆ ಕಳುಹಿಸಲಾಗುತ್ತಿದೆ.


ಅಪಾಯ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ : 
1.  ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. 
2. ಯಾವುದೇ ಅಪ್ಲಿಕೇಶನ್‌ ಬಳಸುವ ಮುನ್ನ ಅವುಗಳ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಓದಿ. 
3. ಅಪ್ಲಿಕೇಶನ್ ಅನುಮತಿಗಳನ್ನು ಕೇಳಿದರೆ, ಅವುಗಳನ್ನು ಲಭ್ಯವಾಗುವಂತೆ ಮಾಡಲು ಅಗತ್ಯವಾದ ಅನುಮತಿಗಳನ್ನು ಮಾತ್ರ ನೀಡಿ. 
4. ಭದ್ರತೆಗಾಗಿ, ನಿಮ್ಮ ಡಿವೈಸ್ ಗಳಲ್ಲಿ ಯಾವಾಗಲೂ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಇನ್ಸ್ಟಾಲ್ ಮಾಡಿಕೊಂಡಿರಬೇಕು. 
5. ಕಾಲಕಾಲಕ್ಕೆ ಅಧಿಕೃತ ಸಾಫ್ಟ್‌ವೇರ್ ಅಪ್ಡೇಟ್ ಗಳೊಂದಿಗೆ ನಿಮ್ಮ ಫೋನ್ ಅನ್ನು ಅಪ್ಡೇಟ್ ಮಾಡುತ್ತಿರಬೇಕು. 


ಇದನ್ನೂ ಓದಿ : 6 Airbag ಮತ್ತು ಸನ್ ರೂಫ್ ಇರುವ ಅಗ್ಗದ SUV ಇಂದು ಬಿಡುಗಡೆ !


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ