Jio specila scheme : ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನೇ ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿಸಲು ಹೀಗೆ ಮಾಡಿ

Jio Mobile Number Scheme:ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನು ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿ ಮಾಡಿಕೊಳ್ಳಬಹುದು. ಜಿಯೋದ ಈ ಹೊಸ ಯೋಜನೆ ಅಡಿಯಲ್ಲಿ, ನಿಮಗಿಷ್ಟವಾದ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬಹುದು. 

Written by - Ranjitha R K | Last Updated : Jul 10, 2023, 11:51 AM IST
  • ಜಿಯೋ ಹೊಸ ಯೋಜನೆ ಪ್ರಾರಂಭಿಸಿದ ಜಿಯೋ
  • ಆಯ್ಕೆಯ ಸಂಖ್ಯೆಯನ್ನು ಮೊಬೈಲ್ ಫೋನ್ ನಂಬರ್ ಆಗಿ ಪಡೆಯಬಹುದು.
  • ನಿಮಗಿಷ್ಟವಾದ ಸಂಖ್ಯೆಯನ್ನು ಪಡೆಯುವುದು ಹೇಗೆ ?
Jio specila scheme : ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನೇ ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿಸಲು ಹೀಗೆ ಮಾಡಿ title=

Jio Mobile Number Scheme : ಮೊಬೈಲ್ ನೆಟ್‌ವರ್ಕ್ ಪೂರೈಕೆದಾರ ಜಿಯೋ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ, ನಿಮ್ಮ ಆಯ್ಕೆಯ ಸಂಖ್ಯೆಯನ್ನು ಮೊಬೈಲ್ ಫೋನ್ ನಂಬರ್ ಆಗಿ ಪಡೆಯಬಹುದು. ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನು ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿ ಮಾಡಿಕೊಳ್ಳಬಹುದು. ಜಿಯೋದ ಈ ಹೊಸ ಯೋಜನೆ ಅಡಿಯಲ್ಲಿ, ನಿಮಗಿಷ್ಟವಾದ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್ ಸಂಖ್ಯೆಯು 10 ಅಂಕೆಗಳನ್ನು ಹೊಂದಿದೆ. ಅದರಲ್ಲಿ ಕೊನೆಯ 4 ರಿಂದ 6 ಸಂಖ್ಯೆಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ನೆಚ್ಚಿನ ಮೊಬೈಲ್ ಸಂಖ್ಯೆಯನ್ನು ಪಡೆಯಲು ಬಯಸುವುದಾದರೆ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.  

ನಿಮಗಿಷ್ಟವಾದ ಸಂಖ್ಯೆಯನ್ನು ಪಡೆಯುವುದು ಹೇಗೆ ? : 
ಜಿಯೋದ ಈ ಯೋಜನೆಯನ್ನು ಪಡೆದುಕೊಳ್ಳಲು, ಒಮ್ಮೆ 499 ಪಾವತಿಸಬೇಕಾಗುತ್ತದೆ. ಜಿಯೋದ ಈ ಆಫರ್ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಎರಡೂ ಬಳಕೆದಾರರಿಗೆ ಅನ್ವಯವಾಗುತ್ತದೆ. ಇದಕ್ಕಾಗಿ ಯಾರೂ  499 ಕ್ಕಿಂತ ಹೆಚ್ಚು  ಹಣವನ್ನು ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯ ಅಡಿಯಲ್ಲಿ, ಬಳಕೆದಾರರು ತಮ್ಮ ಆಯ್ಕೆಗೆ ಅನುಗುಣವಾಗಿ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಬಹುದು.  

ಇದನ್ನೂ ಓದಿ : 6 Airbag ಮತ್ತು ಸನ್ ರೂಫ್ ಇರುವ ಅಗ್ಗದ SUV ಇಂದು ಬಿಡುಗಡೆ !

ಈ ಹಂತಗಳನ್ನು ಅನುಸರಿಸಬೇಕು : 
-ಜಿಯೋದ ಈ ಯೋಜನೆಯ ಲಾಭ ಪಡೆಯಲು, ಮೊದಲು https://www.jio.com/selfcare/choice-number/ ವೆಬ್‌ಸೈಟ್‌ಗೆ ಭೇಟಿ ನೀಡಿ . 
- ನಂತರ  ಸೆಲ್ಫ್ ಕೇರ್ ವಿಭಾಗಕ್ಕೆ ಹೋಗಿ. 
-ಇದಲ್ಲದೆ, ಫೋನ್‌ನಲ್ಲಿ MyJio ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ನೀವು ಈ ಹಂತವನ್ನು ತಲುಪಬಹುದು.
-ನಂತರ ನೀವು ಮೊಬೈಲ್ ಸಂಖ್ಯೆ ಆಯ್ಕೆ ವಿಭಾಗಕ್ಕೆ ಹೋಗಿ.
- ಅಲ್ಲಿ ನೀವು ನಿಮ್ಮ ಅಸ್ತಿತ್ವದಲ್ಲಿರುವ ಸಂಖ್ಯೆಯನ್ನು ನಮೂದಿಸಿ. ಈಗ OTT ಮೂಲಕ ನಿಮ್ಮ ಸಂಖ್ಯೆಯನ್ನು ಪರಿಶೀಲಿಸಿ. 
- ಈಗ  ಮೊಬೈಲ್ ನಂಬರ್ ಸೆಲೆಕ್ಷನ್ ವಿಭಾಗಕ್ಕೆ ಹೋಗಿ.  
- ಈ ಆಯ್ಕೆಗೆ ಹೋಗುವ ಮೂಲಕ, ನಿಮ್ಮ ಇಚ್ಛೆಗೆ ಅನುಗುಣವಾಗಿ ಮೊಬೈಲ್ ಸಂಖ್ಯೆಯ ಕೊನೆಯ 4 ರಿಂದ 6 ಅಂಕೆಗಳನ್ನು ಆಯ್ಕೆ ಮಾಡುವುದು ಸಾಧ್ಯವಾಗುತ್ತದೆ. 
-ಆದ್ಯತೆಯ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿದ ನಂತರ,  ಪೇಮೆಂಟ್ ವಿಭಾಗಕ್ಕೆ ಹೋಗಿ 499 ರೂ.  ಪಾವತಿಸಬೇಕಾಗುತ್ತದೆ.
- ಹಣ ಪಾವತಿಸಿದ 24 ಗಂಟೆಗಳಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ಸಕ್ರಿಯಗೊಳಿಸಲಾಗುತ್ತದೆ. 

ಇದನ್ನೂ ಓದಿ : Tech News: ಭಾರತದಲ್ಲಿ ನಾಳೆ ಬಿಡುಗಡೆಯಾಗುತ್ತಿದೆ ಒಪ್ಪೋ ರೆನೊ 10 ಸರಣಿ, DSLR ಕ್ಯಾಮೆರಾ ಮರೆತ್ಹೋಗುವಿರಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News