Smartphone Buying Tips: ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಜೀವನಾಡಿ ಆಗಿದೆ. ಹೊಸ ಹೊಸ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಜನರು ಆಗಾಗ್ಗೆ ಸ್ಮಾರ್ಟ್‌ಫೋನ್ ಅನ್ನು ಬದಲಾಯಿಸಲು ಇಷ್ಟಪಡುತ್ತಾರೆ. ಸ್ಮಾರ್ಟ್‌ಫೋನ್ ಖರೀದಿಸುವಾಗ ಕೆಲವು ಅಂಶಗಳ ಬಗ್ಗೆ ನಿಗಾವಹಿಸುವುದು ಬಹಳ ಅಗತ್ಯ. ಅದರಲ್ಲೂ ನಿಮ್ಮ ಅಗತ್ಯತೆಗಳು ಮತ್ತು ಬಜೆಟ್‌ಗೆ ಅನುಗುಣವಾಗಿ ಸರಿಯಾದ ಸ್ಮಾರ್ಟ್‌ಫೋನ್ ಆಯ್ಕೆ ಮಾಡುವುದು ತುಂಬಾ ಮುಖ್ಯ.


COMMERCIAL BREAK
SCROLL TO CONTINUE READING

ಸ್ಮಾರ್ಟ್‌ಫೋನ್ ಖರೀದಿಸುವಾಗ ನೆನಪಿಡಬೇಕಾದ ಅಂತಹ ಐದು ಪ್ರಮುಖ ಅಂಶಗಳೆಂದರೆ:
ಬೆಜೆಟ್: 

ಮೊದಲನೆಯದಾಗಿ ನೀವು ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಖರೀದಿಸುವ ಬರದಲ್ಲಿ ನಿಮ್ಮ ಬಜೆಟ್ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬೇಡಿ. ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಲೆಯಲ್ಲಿಯೂ ಸಹ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳು ಲಭ್ಯವಿರುವುದರಿಂದ ಸ್ವಲ್ಪ ತಾಳ್ಮೆಯಿಂದ ನಿಮ್ಮ ಬಜೆಟ್‌ಗೆ ಅನುಗುಣವಾದ ಸ್ಮಾರ್ಟ್‌ಫೋನ್ ಖರೀದಿಸಿ. 


ಆಪರೇಟಿಂಗ್ ಸಿಸ್ಟಮ್: 
ಯಾವುದೇ ಸ್ಮಾರ್ಟ್‌ಫೋನ್ ಖರೀದಿಸುವಾಗ ಮೊದಲು ಅದರಲ್ಲಿ ಯಾವ ಆಪರೇಟಿಂಗ್ ಸಿಸ್ಟಮ್ ಅನ್ನು (Android ಮತ್ತು iOS) ಬಯಸುತ್ತೀರಿ ಎಂಬುದರ ಬಗ್ಗೆ ನಿರ್ಧರಿಸಿ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿಯೇ ಆಪರೇಟಿಂಗ್ ಸಿಸ್ಟಮ್ ಯಾವುದಿರಬೇಕು ಎಂದು ಆಯ್ಕೆ ಮಾಡುವುದು ಒಳ್ಳೆಯದು.


ಇದನ್ನೂ ಓದಿ- Jio Recharge: ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಜಿಯೋ ರಿಚಾರ್ಜ್ ಯೋಜನೆಗಳು


ಸ್ಕ್ರೀನ್ ಗಾತ್ರ, ರೆಸಲ್ಯೂಶನ್: 
ಸ್ಮಾರ್ಟ್‌ಫೋನ್ ಖರೀದಿಸುವಾದ ತಪ್ಪದೆ ಫೋನ್‌ನ ಸ್ಕ್ರೀನ್ ಮತ್ತು ಅದರ ರೆಸಲ್ಯೂಶನ್ ಬಗ್ಗೆ ಗಮನಹರಿಸಿ. ಕಾರಣ, ಇವೆರಡೂ ಸಹ ಸ್ಮಾರ್ಟ್‌ಫೋನ್ ಉಪಯುಕ್ತತೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ದೊಡ್ಡ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಲ್ಟಿಮೀಡಿಯಾವನ್ನು ಬಳಸುವ ಜನರಿಗೆ ಹೆಚ್ಚು ಉಪಯುಕ್ತವಾಗಿದೆ. 


ಕ್ಯಾಮರಾ: 
ಕೆಲವರಿಗೆ ಫೋಟೋಗ್ರಫಿ ಬಗ್ಗೆ ಹೆಚ್ಚಿನ ಒಲವಿರುತ್ತದೆ. ಅಂತಹವರಿಗೆ ಫೋನ್‌ನ ಕ್ಯಾಮೆರಾ ತುಂಬಾ ಪ್ರಮುಖವಾಗಿದೆ. ನೀವು ಹೈ  ರೆಸಲ್ಯೂಶನ್, ದ್ಯುತಿರಂಧ್ರ, ಸಂವೇದಕ ಗಾತ್ರ ಮತ್ತು ಆಟೋಫೋಕಸ್ ವ್ಯವಸ್ಥೆಯನ್ನು ಹೊಂದಿರುವ ಫೋನ್ ಅನ್ನು ಖರೀದಿಸುವುದು ನಿಮಗೆ ಅತ್ಯುತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು. 


ಇದನ್ನೂ ಓದಿ- ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಯಲ್ಲಿ ಖರೀದಿಸುವ ಅವಕಾಶ


ಬ್ಯಾಟರಿ:
ಯಾವುದೇ ಸ್ಮಾರ್ಟ್‌ಫೋನ್ ಖರೀದಿಸುವಾಗ ಅದರ ಬ್ಯಾಟರಿ ಬಾಳಿಕೆ ಬಗ್ಗೆ ತಪ್ಪದೇ ಪರಿಶೀಲಿಸಿದೆ. ಆ ಸ್ಮಾರ್ಟ್‌ಫೋನ್ ಫುಲ್ ಚಾರ್ಜ್‌ನಲ್ಲಿ ಎಷ್ಟು ಗಂಟೆ ಅಥವಾ ದಿನಗಳವರೆಗೆ ಬಾಳಿಕೆ ಬರುತ್ತದೆ ಎಂಬುದನ್ನೂ ಅದರ mAh ಸಹಾಯದಿಂದ ಕಂಡು ಹಿಡಿಯಿರಿ. ಮಾತ್ರವಲ್ಲ, ಈ ಫೋನ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆಯೇ ಎಂಬುದನ್ನೂ ಕೂಡ ಪರಿಶೀಲಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.