Jio Recharge: ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಜಿಯೋ ರಿಚಾರ್ಜ್ ಯೋಜನೆಗಳು

Jio Recharge Plans: ಟೆಲಿಕಾಂ ಜಗತ್ತಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಅತಿ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಪರಿಚರಿಸಿದೆ. 

Written by - Yashaswini V | Last Updated : Apr 6, 2023, 06:52 AM IST
  • ರಿಲಯನ್ಸ್ ಜಿಯೋ ಬಜೆಟ್‌ಗೆ ಸರಿಹೊಂದುವ ಕೆಲವು ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.
  • ವಿಶೇಷವೆಂದರೆ ಈ ಅಗ್ಗದ ಯೋಜನೆಗಳಲ್ಲಿ ನೀವು ದುಬಾರಿ ರಿಚಾರ್ಜ್ ಯೋಜನೆಗಳಲ್ಲಿ ಪಡೆಯುವ ಕೆಲವು ಸೌಲಭ್ಯಗಳು ಕೂಡ ಲಭ್ಯವಾಗಲಿವೆ.
  • ಈ ಅಗ್ಗದ ರೀಚಾರ್ಜ್ ಯೋಜನೆಗಳು ಯಾವುವು ಎಂದು ತಿಳಿಯೋಣ
Jio Recharge: ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಜಿಯೋ ರಿಚಾರ್ಜ್ ಯೋಜನೆಗಳು  title=

Reliance Jio's Cheapest Prepaid Recharge Plans: ನೀವು ಜಿಯೋ ಪ್ರಿಪೇಯ್ಡ್ ಗ್ರಾಹಕರಾಗಿದ್ದರೆ ರಿಲಯನ್ಸ್ ಜಿಯೋ ಕಂಪನಿಯು ನಿಮಗಾಗಿ ಹಲವು   ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 

ವಿಶೇಷವೆಂದರೆ, 200 ರೂ.ಗಳಿಗಿಂತ ಕಡಿಮೆ ಬೆಳೆಗೆ ಲಭ್ಯವಿರುವ ಈ  ಅಗ್ಗದ ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ನೀವು ದುಬಾರಿ ಯೋಜನೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಹ ಪಡೆಯುತ್ತೀರಿ. ಯಾವುದೀ ಯೋಜನೆ? ಅದರಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಳಿವೆ ಎಂದು ತಿಳಿಯೋಣ... 

ಇದನ್ನೂ ಓದಿ- WhatsApp New Feature: ಈಗ ಬೇರೆಯವರು ನಿಮ್ಮ ಮೇಲೆ ಕಣ್ಣಿಡುವುದು ಅಷ್ಟು ಸುಲಭವಲ್ಲ

ಬಜೆಟ್‌ಗೆ ಸರಿಹೊಂದುವ ಅಗ್ಗದ ಪ್ರಿಪೇಯ್ಡ್ ಯೋಜನೆಗಳೆಂದರೆ...
149 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ: 
ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ರೀಚಾರ್ಜ್ ಪೋರ್ಟ್‌ಫೋಲಿಯೊದಲ್ಲಿ ಗ್ರಾಹಕರಿಗೆ 149ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತದೆ. ಇದರ ಪ್ರಯೋಜನಗಳೆಂದರೆ 
* ಇದರಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ನಿತ್ಯ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಾಗಲಿದೆ. 
* ಈ ಯೋಜನೆಯ ಮಾನ್ಯತೆಯು ಪೂರ್ಣ 20 ದಿನಗಳವರೆಗೆ ಇರುತ್ತದೆ
* ಈ ಸಂದರ್ಭದಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ ಡೇಟಾವನ್ನು ನೀಡಲಾಗುತ್ತದೆ. 

ಇದನ್ನೂ ಓದಿ- ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ 5G Smartphone!Galaxy F14 5G ಎಲ್ಲಕ್ಕಿಂತ ಅಗ್ಗದ ಫೋನ್

179 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ:
179 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯು 24 ದಿನಗಳವರೆಗಿನ ಮಾನ್ಯತೆಯೊಂದಿಗೆ ಲಭ್ಯವಾಗಲಿದೆ. 
>> ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಸಿಗುತ್ತದೆ.
>>  ನಿತ್ಯ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಾಗಲಿದೆ. 
>> ನಿತ್ಯ 1 ಜಿಬಿ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News