ನವದೆಹಲಿ: Behavioural Science - ನಿಷ್ಠೆ ಎಂಬ ಪದದಿಂದ ನೀವು ಏನು ಅರ್ಥಮಾಡಿಕೊಂಡಿದ್ದೀರಿ? ಇದು ವಿಭಿನ್ನ ಅರ್ಥಗಳು ಮತ್ತು ವ್ಯಾಖ್ಯಾನಗಳನ್ನು ಹೊಂದಿರಬಹುದು. ನಿಮ್ಮ ಸಂಸ್ಥೆ (Office) ಮತ್ತು ಕೆಲಸ (Work) ಎರಡಕ್ಕೂ ನಿಷ್ಠರಾಗಿರುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಅದನ್ನು ಯಾರೂ ಕೂಡ ನಿರಾಕರಿಸುವಂತಿಲ್ಲ.  ಈ ಸನ್ನಿವೇಶದಲ್ಲಿ, ಹೆಚ್ಚು ನಿಷ್ಠರಾಗಿರುವುದು (Loyalty) ಮತ್ತು ಕಣ್ಣು ಮುಚ್ಚಿ ನಿಷ್ಥೆಯನ್ನು (Blind Faith)  ಪ್ರದರ್ಶಿಸುವುದು ಈ ಎರಡು ಸಂಗತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.


COMMERCIAL BREAK
SCROLL TO CONTINUE READING

ಹೆಚ್ಚು ನಿಷ್ಠಾವಂತ ಜನರಲ್ಲಿ ತಮ್ಮ ನೌಕರಿ ಹಾಗೂ ಹಿತಾಸಕ್ತಿಗಳನ್ನು ಉಳಿಸಲು ಸಂಸ್ಥೆಯಲ್ಲಿ ತಪ್ಪು ಕೆಲಸಗಳನ್ನು ಮಾಡುವ ಸಾಧ್ಯತೆ ಹೆಚ್ಚು ಎಂದು ಹಾರ್ವರ್ಡ್ ಬಿಸ್ನೆಸ್ ರೀವ್ಯೂ ಹೋಮ್ (Harvard Business Review Home)  ವರದಿ ಬಹಿರಂಗಪಡಿಸಿದೆ. ಅಷ್ಟೇ ಅಲ್ಲ ಕಚೇರಿಯಲ್ಲಿ ಇಂತಹ ಜನರು ಕಿರುಕುಳಕ್ಕೊಳಗಾಗುವ ಸಾಧ್ಯತೆಗಳೂ ಕೂಡ ಇತರರಿಗಿಂತ ಜಾಸ್ತಿಯಾಗಿರುತ್ತದೆ ಎಂದು ವರದಿ ಹೇಳಿದೆ.


ನೀವೇನು ಮಾಡಬಹುದು?
ಇಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ಅನೇಕ ಅಪಾಯಗಳನ್ನು ತಗ್ಗಿಸಲು ನಿಷ್ಠೆಯ ಲಾಭವನ್ನು ಪಡೆಯಲು ಏನು ಮಾಡಬೇಕು? ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ಇದರಲ್ಲಿ ಮೊದಲನೆಯದಾಗಿ ನೀವು ನೀವು ನಿಷ್ಠೆಯ ಸಾಧಕ-ಬಾಧಕ ಗಳನ್ನುನೀವು ಅರ್ಥ ಮಾಡಿಕೊಳ್ಳಬೇಕು. ಈ ಕುರಿತು ಹಾರ್ವರ್ಡ್ ವಿಶ್ವವಿದ್ಯಾಲಯ ಇತ್ತೀಚಿಗೆ ತನ್ನ ವಿಮರ್ಶಾ ವರದಿ ಬಿಡುಗಡೆ ಮಾಡಿದೆ.


ನಿಷ್ಠೆಯಿಂದ ಇರುವುದರ ಲಾಭಗಳು
ಉದ್ಯೋಗಿಗಳು ನಿಷ್ಠರಾಗಿರುವಾಗ, ಅವರು ಮತ್ತು ಅವರ ಸಂಸ್ಥೆಗಳು ಲಾಭ ಪಡೆಯುತ್ತವೆ. ನಿಷ್ಠೆಯ 'ಬಾಧ್ಯತೆಯಾ ಪರಿಣಾಮ' ದಿಂದಾಗಿ  ನೌಕರರು ಇತರರೊಂದಿಗೆ ಬಲವಾದ ಬಾಂಧವ್ಯ ಹೊಂದಿರುತ್ತಾರೆ. ಒಂದು ಸಂಸ್ಥೆಯ ಗುರಿಗಳನ್ನು ಪೂರೈಸಲು ಇದು ಬಹಳ ಮುಖ್ಯವಾಗಿದೆ. ನಿಮ್ಮ ಉದ್ಯೋಗದಾತರಿಗೆ ನಿಷ್ಠಾವಂತರಾಗಿರುವುದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಉದ್ಯೋಗ ಸಂಬಂಧಿತ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದೇ ರೀತಿ ನೀವು ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಹೊಸ ಅವಕಾಶಗಳನ್ನು ಸಹ ಕಂಡುಕೊಳ್ಳಬಹುದು. ನೀವು ಕಚೇರಿಗೆ ನಿಷ್ಠೆಯನ್ನು ತೋರಿಸಿದಾಗ, ಬಡ್ತಿಯ ಸಾಧ್ಯತೆಗಳು ಹೆಚ್ಚಾಗುತ್ತವೆ ಅಥವಾ ವಿಶೇಷ ಕೆಲಸದ ಸಂದರ್ಭಗಳಲ್ಲಿ ನಿಮಗೆ ವಿಶೇಷ ಮತ್ತು ಅನಿರೀಕ್ಷಿತ ಉಡುಗೊರೆಗಳು ಕೂಡ ಸಿಗುತ್ತವೆ. ಇಂತಹ ಸನ್ನಿವೇಶದಲ್ಲಿ, ನೀವು ಇತರರಿಗಿಂತ ನಿಮ್ಮ ಕೆಲಸದಲ್ಲಿ ಹೆಚ್ಚು ತೃಪ್ತಿ ಮತ್ತು ಸಂತೋಷವನ್ನು ಹೊಂದಿರಬಹುದು. ಇದರಿಂದ ಮಾನಸಿಕ ನೆಮ್ಮದಿಯ  ಲಾಭಗಳೂ ಇವೆ.


ಇದನ್ನೂ ಓದಿ-Viral Video: ಮೂತ್ರ ವಿಸರ್ಜನೆಗೆ ಸಾರ್ವಜನಿಕ ಶೌಚಾಲಯಕ್ಕೆ ಎಂಟ್ರಿ ಕೊಟ್ಟ ಸಿಂಹ..!


ಆದರೆ ಅಧಿಕ ನಿಷ್ಟಾವಂತರಾಗಿರುವುದು ಕೂಡ ಅಪಾಯಕಾರಿ
ನಿಮ್ಮ ಸಂಸ್ಥೆಗೆ ನೀವು ನಿಷ್ಠರಾಗಿರುವಾಗ, ಸಾಮಾನ್ಯವಾಗಿ ನೀವು ಮತ್ತು ನಿಮ್ಮ ಸಂಸ್ಥೆ ಇಬ್ಬರೂ  ಅದರಿಂದ ಲಾಭ ಪಡೆಯುವಿರಿ. ಇದೇ ವೇಳೆ, ಈ 'ನಿಷ್ಠೆಯನ್ನು' ಸರಿಯಾಗಿ ಅನುಷ್ಠಾನಗೊಳಿಸದಿದ್ದರೆ, ಅದು ಅನೈತಿಕ ನಡವಳಿಕೆಯನ್ನು ಉತ್ತೇಜಿಸುತ್ತದೆ ಎಂಬುದಂತೂ ಸತ್ಯ. ಉದಾಹರಣೆಗೆ, ತಮ್ಮ ಸಂಸ್ಥೆಗಳಿಗೆ ಹೆಚ್ಚು ನಿಷ್ಠರಾಗಿರುವ ಉದ್ಯೋಗಿಗಳ ಭ್ರಷ್ಟಾಚಾರದ ಮೇಲೆ ಸಂಸ್ಥೆಯ ಕಡಿಮೆ ಗಮನಹರಿಯುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.


ಇದನ್ನೂ ಓದಿ-Facebook, WhatsApp and Instagram Server Down: ಬರೀ 1 ಗಂಟೆ ಫೇಸ್​ಬುಕ್​, ವಾಟ್ಸ್​ಅಪ್ ಇನ್​ಸ್ಟಾಗ್ರಾಮ್​ ಸರ್ವರ್​ ಬಂದ್ ಆಗಿದ್ರಿಂದ ನಷ್ಟ ಎಷ್ಟಾಗಿದೆ ಗೊತ್ತಾ?


ಕಛೇರಿಯಲ್ಲಿ ಈ ಸಂಗತಿಗಳ ಮೇಲೂ ಕೂಡ ಗಮನ ಕೇಂದ್ರೀಕರಿಸಿ
ಇದಕ್ಕಾಗಿ ನೀವು ನಿಮ್ಮ ನಿಷ್ಠೆಯ ಮಟ್ಟವನ್ನು (Are You Too Loyal To Your Organization) ಸರಿಯಾಗಿ ನಿರ್ವಹಿಸಿ. ನೀವು ಅನೈತಿಕ ಅಥವಾ ತಪ್ಪು ಏನನ್ನಾದರೂ ನೋಡಿದರೆ, ತಕ್ಷಣವೇ ನಿಮ್ಮ ಧ್ವನಿ ಎತ್ತಿ. ಕೆಲಸದಲ್ಲಿ ಸ್ಪರ್ಧೆಯ ಮನೋಭಾವಕ್ಕಿಂತ ಪರಸ್ಪರ ಸಹಕಾರದತ್ತ ಗಮನ ಹರಿಸಿ. ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿ. ನೀವು ಕೂಡ ಈ ವಿಷಯಗಳನ್ನು ನೋಡಿಕೊಂಡು ನಿಮ್ಮ ವೃತ್ತಿಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ.


ಇದನ್ನೂ ಓದಿ-Viral News: ಹುಡುಗಿಯರ ಬಟ್ಟೆಗಳ ಬಗ್ಗೆ ಪ್ರೇಯಸಿಗೆ ಕೇಳುತ್ತಿದ್ದ ಬಾಯ್​ಫ್ರೆಂಡ್, ಏನು ಮಾಡಿದ್ದಾನೆ ನೋಡಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.