Viral Video: ಮೂತ್ರ ವಿಸರ್ಜನೆಗೆ ಸಾರ್ವಜನಿಕ ಶೌಚಾಲಯಕ್ಕೆ ಎಂಟ್ರಿ ಕೊಟ್ಟ ಸಿಂಹ..!

ಈ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಕೆಲವರು ‘ಜಂಗಲ್ ಸಫಾರಿ ವೇಳೆ ನಾವು ಸಾರ್ವಜನಿಕ ಶೌಚಾಲಯವನ್ನೇ ಬಳಸುವುದಿಲ್ಲ’ ಅಂತಾ ಹೇಳಿದ್ದಾರೆ.

Written by - Puttaraj K Alur | Last Updated : Oct 5, 2021, 01:11 PM IST
  • ಸಾರ್ವಜನಿಕ ಶೌಚಾಲಯಕ್ಕೆ ಎಂಟ್ರಿ ಕೊಟ್ಟ ಕಾಡಿನ ರಾಜ ಸಿಂಹ
  • ಶೌಚಾಲಯದಲ್ಲಿ ಸಿಂಹದ ದರ್ಶನ ಪಡೆದ ಪ್ರವಾಸಿಗರಿಗೆ ಅಚ್ಚರಿ!
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ವಿಡಿಯೋ
Viral Video: ಮೂತ್ರ ವಿಸರ್ಜನೆಗೆ ಸಾರ್ವಜನಿಕ ಶೌಚಾಲಯಕ್ಕೆ ಎಂಟ್ರಿ ಕೊಟ್ಟ ಸಿಂಹ..! title=
ಶೌಚಾಲಯದಲ್ಲಿ ದರ್ಶನ ನೀಡಿದ ಸಿಂಹ

ನವದೆಹಲಿ: ಸಾರ್ವಜನಿಕ-ವಸತಿ ಪ್ರದೇಶಗಳಿಗೆ ಕಾಡು ಪ್ರಾಣಿಗಳು(Wild Animals) ನುಗ್ಗಿ ಅವಾಂತರ ಸೃಷ್ಟಿಸಿದ ಅನೇಕ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಈ ರೀತಿಯ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ವೈರಲ್ ಆಗಿವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇಂಟರ್ ನೆಟ್ ಲೋಕದಲ್ಲಿ ಕಾಣಿಸಿಕೊಂಡು ಸದ್ದು ಮಾಡುತ್ತಿದೆ. ಸಿಂಹವೊಂದು ರಾಜಾರೋಷವಾಗಿ ಸಾರ್ವಜನಿಕ ಶೌಚಾಲಯದೊಳಗೆ ಪ್ರವೇಶಿಸಿ ಕೆಲಕಾಲ ಆತಂಕ ಮೂಡಿಸಿದೆ.

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಸಿಂಹವೊಂದು ಸಾರ್ವಜನಿಕ ಶೌಚಾಲಯ(Public Toilet)ದಿಂದ ಹೊರಬರುವುದನ್ನು ತೋರಿಸಲಾಗಿದೆ. 1 ನಿಮಿಷವಿರುವ ಈ ವಿಡಿಯೋವನ್ನು ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಫಾರಿ ಸಮಯದಲ್ಲಿ ಸಿಂಹವು ವಾಶ್‌ರೂಂನಿಂದ ಹೊರಬರುವುದನ್ನು ಜನರ ಗುಂಪೊಂದು ಗುರುತಿಸಿದೆ. ಇದ್ಯಾಕೆ ಶೌಚಾಲಯದೊಳಗೆ ಹೋಯಿತು, ಮೂತ್ರ ವಿಸರ್ಜನೆಗೇನಾದರೂ ಅಲ್ಲಿ ಹೋಯಿತೇ ಎಂದು ಅನೇಕರು ಹಾಸ್ಯ ಚಟಾಕಿ ಹಾರಿಸಿದ್ದಾರೆ.  

ಇದನ್ನೂ ಓದಿ: Viral News: ಹುಡುಗಿಯರ ಬಟ್ಟೆಗಳ ಬಗ್ಗೆ ಪ್ರೇಯಸಿಗೆ ಕೇಳುತ್ತಿದ್ದ ಬಾಯ್​ಫ್ರೆಂಡ್, ಏನು ಮಾಡಿದ್ದಾನೆ ನೋಡಿ..!

ಗಮನಿಸಬೇಕಾದ ಅಂಶವೆಂದರೆ ಇದು ಗಂಡು ಸಿಂಹ. ಅದು ಹೋಗಿರುವುದು ಕೂಡ ಪುರುಷರ ಶೌಚಾಲಯ(Gents Toilet)ಕ್ಕೆ. ಹೀಗೆ ಶೌಚಾಲಯ ಪ್ರವೇಶಿಸಿದ ಸಿಂಹ ಕಂಡು ಅನೇಕರು ಅಚ್ಚರಿಯ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಯಾರಾದರೂ ಶೌಚಾಲಯಕ್ಕೆ ಹೋಗಿದ್ದರೆ ಅವರ ಕಥೆ ಏನಾಗಬೇಡ ಅಂತಾ ಭಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದಿರುವ ಯಾವುದೋ ಕಾಡಿನಲ್ಲಿ. ಪ್ರವಾಸಿಗರು ಸಫಾರಿ ಸಂದರ್ಭದಲ್ಲಿ ಕಾರಿನೊಳಗೆ ಸಂಚರಿಸುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಶೌಚಾಲಯ ಹೊಕ್ಕ ಸಿಂಹ ಕೆಲಹೊತ್ತು ಅಲ್ಲಿ ಸುತ್ತಾಡಿ ನಂತರ ಹೊರಬಂದಿದೆ.

ಕಾಡಿನ ರಾಜ ಸಿಂಹ(Jungle King Lion)ವು ಶೌಚಾಲಯದೊಳಗೆ ದರ್ಶನ ನೀಡಿರುವುದನ್ನುಕಂಡು ಪ್ರವಾಸಿಗರಿಗೆ ಒಂದು ಕ್ಷಣ ರೋಮಾಂಚನವಾಗಿದೆ. ಈ ವಿಡಿಯೋವನ್ನು ಭಾರತದಲ್ಲಿ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ WildLense Eco Foundation ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಶೇರ್ ಮಾಡಿದೆ. ‘ಮೂತ್ರ ವಿಸರ್ಜನಾ ಸ್ಥಳ ಯಾವಾಗಲೂ ಮನುಷ್ಯರಿಗೆ ಸುರಕ್ಷಿತವಲ್ಲ. ಕೆಲವೊಮ್ಮೆ ಶೌಚಾಲಯವನ್ನು ಇತರರು ಕೂಡ ಬಳಸಬಹದು’ ಎಂದು ಕ್ಯಾಪ್ಶನ್ ನೀಡಿ ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಜಮೀನಿನಲ್ಲಿ ಎಲೆಕೋಸು ಕೀಳುವ ಕೆಲಸಕ್ಕೆ ಬರೋಬ್ಬರಿ 63 ಲಕ್ಷ ರೂ. ಸಂಬಳ..!

ಶೌಚಾಲಯದಿಂದ ಹೊರಬಂದ ಸಿಂಹ ಸ್ವಲ್ಪ ಹೊತ್ತು ಅತ್ತ ಇತ್ತ ನೋಡಿ ತನ್ನಸಮೀಪ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಕಾಡಿನತ್ತ ಮುಖ ಮಾಡಿದೆ. ಈ ವೇಳೆ ಹತ್ತಿರದಿಂದ ‘ಕಾಡಿನ ರಾಜ’ನ ದರ್ಶನ ಮಾಡಿದ ಸಫಾರಿ ಪ್ರವಾಸಿಗರು ಮಾತನಾಡುತ್ತಾ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನು ನೋಡಿ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ‘ಜಂಗಲ್ ಸಫಾರಿ ವೇಳೆ ನಾವು ಸಾರ್ವಜನಿಕ ಶೌಚಾಲಯವನ್ನೇ ಬಳಸುವುದಿಲ್ಲ’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News