ಸೊಳ್ಳೆ ಬತ್ತಿ, ಲಿಕ್ವಿಡ್ ಅಗತ್ಯವೇ ಇಲ್ಲ ! ಸೊಳ್ಳೆ ಕಾಟದಿಂದ ಮುಕ್ತಿ ನೀಡಲು ಈ App ಸಾಕು
Mosquito Killer Smartphone Apps: ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವ ಅಪ್ಲಿಕೇಶನ್‌ಗಳು ಕಾರ್ಯ ನಿರ್ವಹಿಸುತ್ತವೆ.
Mosquito Killer Smartphone Apps: ಮಳೆಗಾಲದಲ್ಲಿ ಸೊಳ್ಳೆ, ನೊಣಗಳ ಕಾಟ ತುಂಬಾ ಹೆಚ್ಚುತ್ತದೆ. ಮಳೆಗಾಲದಲ್ಲಿ ಮನೆ ತುಂಬಾ ನೊಣಗಳು ಗುಂಯಿ ಎಂದು ಸದ್ದು ಮಾಡುತ್ತಾ ಹಾರುತ್ತಿರುತ್ತವೆ. ರಾತ್ರಿಯಾಗುತ್ತಿದ್ದಂತೆಯೇ ಸೊಳ್ಳೆ ಕಾಟ ಬೇರೆ. ಮನೆಯಲ್ಲಿ ಸೊಳ್ಳೆಗಳು ಇರುವುದರಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುವ ಅಪಾಯ ಕೂಡಾ ಕಾಡುತ್ತದೆ. ಸಾಮಾನ್ಯವಾಗಿ ಸೊಳ್ಳೆ ಕಾಟದಿಂದ ತಪ್ಪಿಸಲು ಸೊಳ್ಳೆ ಕಾಯಿಲ್, ಲಿಕ್ವಿಡ್ ಬಳಸಲಾಗುತ್ತದೆ. ಆದರೆ ಇದರಿಂದ ನಮ್ಮ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. ಅಲರ್ಜಿ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಈಗ ಹೊಗೆ ಇಲ್ಲದೆ ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುವ ಗ್ಯಾಜೆಟ್‌ಗಳು ಬಂದಿವೆ. ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವ ಅಪ್ಲಿಕೇಶನ್‌ಗಳು ಕಾರ್ಯ ನಿರ್ವಹಿಸುತ್ತವೆ.
ಯಾವುವು ಆ ಅಪ್ಲಿಕೇಶನ್ ಗಳು :
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಿವಿಧ ಅಪ್ಲಿಕೇಶನ್‌ಗಳು ಲಭ್ಯವಿದ್ದು, ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತವೆ. ಇಲ್ಲಿ ನೀವು ಸೊಳ್ಳೆ ಕಿಲ್ಲರ್, ಸೊಳ್ಳೆ ಸೌಂಡ್, ಫ್ರೀಕ್ವೆನ್ಸಿ ಜನರೇಟರ್ ಮುಂತಾದ ಅನೇಕ ಅಪ್ಲಿಕೇಶನ್‌ಗಳನ್ನು ಕಾಣಬಹುದು. ಈ ಅಪ್ಲಿಕೇಶನ್‌ಗಳು ವಿಭಿನ್ನ ಆವರ್ತನದ ಧ್ವನಿಯನ್ನು ಉತ್ಪಾದಿಸುತ್ತವೆ. ಈ ಧ್ವನಿಯ ಮೂಲಕವೇ ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ವೇದಾಂತಾ ಜೊತೆಗಿನ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಹಿಂದಕ್ಕೆ ಸರಿದ ಫಾಕ್ಸ್ ಕಾನ್, ಸರ್ಕಾರ ಹೇಳಿದ್ದೇನು?
ಇನ್ನು ಈ ಅಪ್ಲಿಕೇಶನ್ ನಿಂದ ಹೊರ ಬರುವ ಧ್ವನಿಯು ಬಹಳ ಸಣ್ಣದಾಗಿರುತ್ತದೆ. ಹಾಗಾಗಿ ಕಿರಿ ಕಿರಿಯಾಗುತ್ತದೆ ಎನ್ನುವ ಯೋಚನೆ ಇರುವುದಿಲ್ಲ. ಆದರೆ ಈ ಧ್ವನಿಯು ಸೊಳ್ಳೆಗಳಿಗೆ ಕಿರಿ ಕಿರಿ ಉಂಟು ಮಾಡಿ ಅವುಗಳನ್ನು ಅಲ್ಲಿಂದ ಓಡಿಸಲು ಸಹಾಯ ಮಾಡುತ್ತದೆ. ಈ ಆ್ಯಪ್‌ಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. ಲಕ್ಷಾಂತರ ಬಳಕೆದಾರರು ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಈ ಅಪ್ಲಿಕೇಶನ್‌ಗಳು ಎಷ್ಟು ಪರಿಣಾಮಕಾರಿ? :
ಬೇರೆ ಬೇರೆ ಬಳಕೆದಾರರು ಈ ಅಪ್ಲಿಕೇಶನ್‌ಗಳಿಗೆ ಬೇರೆ ಬೇರೆ ರೀತಿಯಲ್ಲಿ ರೇಟಿಂಗ್ ನೀಡಿದ್ದಾರೆ. ಕೆಲವು ಬಳಕೆದಾರರ ಪ್ರಕಾರ ಈ ಅಪ್ಲಿಕೇಶನ್‌ಗಳು ಸಹಾಯಕವಾಗಿ ಸಾಬೀತಾಗಿದೆ. ಇದರಿಂದ ಉತ್ತಮ ಫಲಿತಾಂಶಗಳನ್ನು ಸಿಗುತ್ತದೆ. ಇನ್ನು ಕೆಲವು ಬಳಕೆದಾರರು ಈ ಅಪ್ಲಿಕೇಶನ್‌ಗಳಿಗೆ ಕೇವಲ 2 ಅಥವಾ 3 ರೇಟಿಂಗ್‌ಗಳನ್ನು ನೀಡಿದ್ದಾರೆ. ಕೆಲವರ ಪ್ರಕಾರ ಈ ಅಪ್ಲಿಕೇಶನ್‌ಗಳು ಸೊಳ್ಳೆಗಳನ್ನು ಸಂಪೂರ್ಣವಾಗಿ ಓಡಿಸಲು ಸಾಧ್ಯವಾಗುವುದಿಲ್ಲ. ಆದರೂ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಪ್ರಯತ್ನಿಸಬಹುದು ಎನ್ನುತ್ತಾರೆ.
ಇದನ್ನೂ ಓದಿ : ಬಳಕೆದಾರರ ಡೇಟಾ ಕದಿಯುತ್ತಿದೆ ಈ ಎರಡು app!ನಿಮ್ಮ ಮೊಬೈಲ್ ನಲ್ಲೂ ಇದೆಯಾ ಈ ಅಪ್ಲಿಕೇಶನ್ ?
ಈ ಆ್ಯಪ್‌ಗಳಲ್ಲಿ ಜಾಹೀರಾತುಗಳ ಸಂಖ್ಯೆಯೂ ಹೆಚ್ಚಿದೆ. ಈ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿದ ನಂತರ ಪದೇ ಪದೇ ಜಾಹೀರಾತುಗಳ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ