ನವದೆಹಲಿ : ಇಂದಿನ ಕಾಲದಲ್ಲಿ ಎಲ್ಲದಕ್ಕೂ ಒಂದು ಆ್ಯಪ್ ಇದೆ. ಶಾಪಿಂಗ್‌ನಿಂದ ಹಿಡಿದು ವೈದ್ಯರ ಅಪ್ಪೊಯಿಂಟ್ ಮೆಂಟ್ ಪಡೆಯುವವರೆಗೂ ಎಲ್ಲದಕ್ಕೂ ಒಂದಲ್ಲ ಒಂದು ಆಪ್ ಇದೆ.   ಒಂದೇ ಒಂದು  ಕ್ಲಿಕ್‌ನಲ್ಲಿ ಎಲ್ಲಾ ಕೆಲಸವೂ ನಡೆದು ಹೋಗುತ್ತದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯು ಹೆಚ್ಚಾಗುತ್ತಿದ್ದಂತೆ, ಅನೇಕ ಜನರು ಒಂದೇ ಕೆಲಸಕ್ಕಾಗಿ ಆಪ್‌ಗಳನ್ನು (app) ತಯಾರಿಸುತ್ತಿದ್ದಾರೆ. ನಮ್ಮ ದೇಶವೂ ಈ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆ. ಮೇಕ್ ಇನ್ ಇಂಡಿಯಾವನ್ನು (make in India) ಪ್ರಚಾರ ಮಾಡುತ್ತಿರುವಾಗ, ವಿದೇಶಿ ಆಪ್‌ಗಳ ಬದಲಾಗಿ, ಹಲವು ಆಪ್‌ಗಳನ್ನು ಭಾರತದಲ್ಲಿ ತಯಾರಿಸಲಾಗಿದೆ. ಇದೀಗ ಕಾಲರ್ ಐಡಿ ಆಪ್ ಟ್ರೂಕಾಲರ್ ನೊಂದಿಗೆ ಸ್ಪರ್ಧಿಸಲು ಭಾರತ ನಿರ್ಮಿತ ಭಾರತ್ ಕಾಲರ್ ಆಪ್ (Bharat Caller App) ಅನ್ನು ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15, 2021 ರಂದು,ಈ ಆಪ್‌ ಅನ್ನು ಬಿಡುಗಡೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಭಾರತ್ ಕಾಲರ್ ಆಪ್ :
ಭಾರತ್ ಕಾಲರ್ ಆಪ್ (Bharat Caller App)  ಭಾರತದ ಕೆಲವು ಎಂಜಿನಿಯರ್ ಗಳು ಮಾಡಿದ ಕಾಲರ್ ಐಡಿ ಆಪ್ (Caller ID App) ಆಗಿದೆ. ಈ ಆಪ್ ಅನ್ನು  ಟ್ರೂಕಾಲರ್ ಗೆ ಪರ್ಯಾಯವಾಗಿ ಭಾರತದಲ್ಲಿ ಪರಿಗಣಿಸಬಹುದು. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಬೆಂಗಳೂರಿನ ಐಐಎಂನ (IIM) ಹಳೆ ವಿದ್ಯಾರ್ಥಿ ಮತ್ತು ಆಪ್ ನಿರ್ಮಾಣ ತಂಡದ ಪ್ರಮುಖ ಸದಸ್ಯ ಪ್ರಜ್ವಲ್ ಸಿನ್ಹಾ ಹೇಳಿದ್ದಾರೆ.  ಕೆಲವು ಸಮಯದ ಹಿಂದೆ ಭಾರತೀಯ ಸೇನೆಯು ಟ್ರೂಕಾಲರ್ ಅನ್ನು ಭಾರತದಲ್ಲಿ ನಿಷೇಧಿಸಿತ್ತು. ಆ ಸಮಯದಲ್ಲಿ ಭಾರತವು ತನ್ನದೇ ಆದ ಕಾಲರ್ ಐಡಿ ಆಪ್ ಅನ್ನು ಹೊಂದುವಂತಾಗಬೇಕು ಎಂದು ಕೊಂಡು, ಪ್ರಜ್ವಲ್ ಮತ್ತು ಆತನ ಸ್ನೇಹಿತರು ಈ ಆಪ್ ಮಾಡಲು ನಿರ್ಧರಿಸಿದ್ದರಂತೆ. 


ಇದನ್ನೂ ಓದಿ : Alert!ನಿಮ್ಮ ಫೋನ್ ನಿಂದಲು ಕೂಡ ತಕ್ಷಣಕ್ಕೆ ಡಿಲೀಟ್ ಮಾಡಿ ಈ 8 Dangerous Apps


ಭಾರತ್ ಕಾಲರ್ ಆಪ್ ನಲ್ಲಿ ಏನಿದೆ ವಿಶೇಷ:
ಈ ಆಪ್ ಇತರ ಆಪ್‌ಗಳಿಗಿಂತ (App) ಭಿನ್ನವಾಗಿದೆ.  ಇದು ಬಳಕೆದಾರರ  ಸಂಪರ್ಕಗಳನ್ನು ಮತ್ತು ಕಾಲ್ ಲಾಗ್‌ಗಳನ್ನು ತನ್ನ  ಸರ್ವರ್‌ನಲ್ಲಿ ಸೇವ್ ಮಾಡಿಕೊಳ್ಳುವುದಿಲ್ಲ. ಅಲ್ಲದೆ, ಈ ಆಪ್‌ನ ಎಲ್ಲಾ ಡೇಟಾ ಎನ್‌ಕ್ರಿಪ್ಟ್ ಫಾರ್ಮಾಟ್ ನಲ್ಲಿ ಸೇವ್ ಆಗಿರುತ್ತದೆ.  ಅದರ ಸರ್ವರ್ ಅನ್ನು ಭಾರತದ ಹೊರಗಿನ ಯಾರಿಗೂ ಬಳಸಲಾಗುವುದಿಲ್ಲ. ಹಾಗಾಗಿ ಭಾರತ್ ಕಾಲರ್ ಆಪ್ ಸಂಪೂರ್ಣ ಸುರಕ್ಷಿತ ಮತ್ತು ಯುಸರ್ ಫ್ರೆಂಡ್ಲಿ ಆಗಿರುತ್ತದೆ. 


ಭಾರತ್ ಕಾಲರ್ ಅನ್ನು ಇಂಗ್ಲಿಷ್, ಹಿಂದಿ (Hindi), ತಮಿಳು, ಗುಜರಾತಿ, ಬಾಂಗ್ಲಾ, ಮರಾಠಿ ಮುಂತಾದ ವಿವಿಧ ಭಾರತೀಯ ಭಾಷೆಗಳಲ್ಲಿ ಆರಂಭಿಸಲಾಗಿದೆ. ಪ್ರತಿಯೊಬ್ಬ ಭಾರತೀಯನು ತನ್ನ  ಆಯ್ಕೆಯ ಭಾಷೆಯನ್ನು ಆರಿಸಿಕೊಂಡು ಆ ಭಾಷೆಯಲ್ಲಿ ಆಪ್ ಅನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್  (IOS) ಬಳಕೆದಾರರು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.


ಇದನ್ನೂ ಓದಿ WhatsApp ಬಳಕೆ ಮಾಡುವಾಗ ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ತೊಂದರೆ ಎದುರಾದೀತು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ