Alert!ನಿಮ್ಮ ಫೋನ್ ನಿಂದಲು ಕೂಡ ತಕ್ಷಣಕ್ಕೆ ಡಿಲೀಟ್ ಮಾಡಿ ಈ 8 Dangerous Apps

Dangerous Apps - ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್‌ಗಳ (Cryptocurrency Mining Apps) ರೂಪದಲ್ಲಿ ಇದ್ದ 8 ಅಪಾಯಕಾರಿ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ತೆಗೆದುಹಾಕಲಾಗಿದೆ. ಈ ಆಪ್‌ಗಳು ಬಳಕೆದಾರರಿಗೆ ಕ್ಲೌಡ್-ಮೈನಿಂಗ್ (Cloud Mining) ಕಾರ್ಯಾಚರಣೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಭಾರೀ ಲಾಭ ಗಳಿಸುವುದಾಗಿ ಭರವಸೆ ನೀಡುತ್ತಿದ್ದವು.

Written by - Nitin Tabib | Last Updated : Aug 22, 2021, 05:31 PM IST
  • ತನ್ನ ಪ್ಲೇ ಸ್ಟೋರ್ ನಿಂದ 8 ಅಪಾಯಕಾರಿ ಆಪ್ ಗಳನ್ನು ತೆಗೆದುಹಾಕಿದ ಗೂಗಲ್.
  • ಈ ಆಪ್ ಗಳು ಕ್ಲೌಡ್ ಮೈನಿಂಗ್ ಹೆಸರಿನಡಿ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದರು
  • ನಿಮ್ಮ ಮೊಬೈಲ್ ನಲ್ಲಿಯೂ ಈ ಆಪ್ ಗಳಿದ್ದರೆ ತಕ್ಷಣ ಅನ್ ಇನ್ಸ್ಟಾಲ್ ಮಾಡಿ
Alert!ನಿಮ್ಮ ಫೋನ್ ನಿಂದಲು ಕೂಡ ತಕ್ಷಣಕ್ಕೆ ಡಿಲೀಟ್ ಮಾಡಿ ಈ 8 Dangerous Apps title=
Dangerous Apps (File Photo)

ನವದೆಹಲಿ: Dangerous Apps - ಕ್ರಿಪ್ಟೋಕರೆನ್ಸಿ ಮೈನಿಂಗ್ ಕಳೆದ ಕೆಲವು ತಿಂಗಳುಗಳಲ್ಲಿ ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ, ಹ್ಯಾಕರ್‌ಗಳು ತಮ್ಮ ಸಾರ್ವಜನಿಕ ಆಸಕ್ತಿಯನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ಬಳಸುತ್ತಾರೆ, ಮುಗ್ಧ ಜನರನ್ನು ತಮ್ಮ ಮಾಲ್‌ವೇರ್ ಮತ್ತು ಆಡ್‌ವೇರ್ ಹೊಂದಿರುವ ಆಪ್‌ಗಳನ್ನು ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿ ಮೊಸಗೊಲಿಸುತ್ತಿದ್ದಾರೆ. ಒಳ್ಳೆಯ ವಿಷಯವೆಂದರೆ ಈ ಮಾಲ್‌ವೇರ್ ಮತ್ತು ಆಡ್‌ವೇರ್ ಅಪ್ಲಿಕೇಶನ್‌ಗಳನ್ನು ಗುರುತಿಸಲಾಗಿದೆ ಮತ್ತು ಗೂಗಲ್ ಈಗ ಅವುಗಳನ್ನು ತೆಗೆದುಹಾಕಿದೆ.ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್‌ಗಳ (Cryptocurrency Mining Apps) ರೂಪದಲ್ಲಿ ಇದ್ದ 8 ಅಪಾಯಕಾರಿ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ತೆಗೆದುಹಾಕಲಾಗಿದೆ. ಈ ಆಪ್‌ಗಳು ಬಳಕೆದಾರರಿಗೆ ಕ್ಲೌಡ್-ಮೈನಿಂಗ್ (Bitcoin Cloud Mining) ಕಾರ್ಯಾಚರಣೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಭಾರೀ ಲಾಭ ಗಳಿಸುವುದಾಗಿ ಭರವಸೆ ನೀಡುತ್ತಿದ್ದವು.

ಭದ್ರತಾ ಸಂಸ್ಥೆ ಟ್ರೆಂಡ್ ಮೈಕ್ರೋ ವರದಿಯ ಪ್ರಕಾರ, ಈ ಅಪಾಯಕಾರಿ 8 ಆಪ್‌ಗಳು ಬಳಕೆದಾರರನ್ನು ಜಾಹೀರಾತುಗಳನ್ನು ನೋಡುವಂತೆ ಆಗ್ರಹಿಸಿ ಮೊಸಗೊಳಿಸುತ್ತಿದ್ದವು, ಉವುಗಳಲ್ಲಿ ತಿಂಗಳಿಗೆ ಸುಮಾರು 1,115 ರೂ.ಗಳು ನೀಡಿ ಬಳಕೆದಾರರಿಗೆ ತಮ್ಮ ಮೈನಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಹೋಗುತ್ತಿದ್ದರು ಮತ್ತು ಪ್ರತಿಯಾಗಿ, ಬಳಕೆದಾರರಿಗೆ ಏನೂ ಸಿಗುತ್ತಿರಲಿಲ್ಲ. 

ಟ್ರೆಂಡ್ ಮೈಕ್ರೋ ತಾನು ಮಾಡಿದ ಈ ಸಂಶೋಧನೆಗಳನ್ನು Google Playಗೆ ವರದಿ ಮಾಡಿತ್ತು. ನಂತರ ಅವುಗಳನ್ನು ತಕ್ಷಣವೇ Google ನಿಂದ ತೆಗೆದುಹಾಕಲಾಗಿದೆ. ಪ್ಲೇ ಸ್ಟೋರ್‌ನಿಂದ ಗೂಗಲ್ ಅವುಗಳನ್ನು ತೆಗೆದು ಹಾಕಿದರೂ ಕೂಡ ಒಂದು ಸಮಸ್ಯೆಯೂ ಇದೆ, ಅದೇನೆಂದರೆ ಈ ಆಪ್‌ಗಳನ್ನು ಈಗಾಗಲೇ ನೀವು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿರಬಹುದು. ಇಂತಹ ಸಂದರ್ಭದಲ್ಲಿ ನೀವು ಇಂತಹ ಆಪ್ ಗಳನ್ನು ತಕ್ಷಣವೇ ನಿಮ್ಮ ಮೊಬೈಲ್ ನಿಂದ ಅನ್ ಇನ್ಸ್ಟಾಲ್ ಮಾಡಿ. ಈ ಆಪ್ ಗಳ ಪಟ್ಟಿ ಕೆಳಗಿನಂತಿದೆ.

— BitFunds – Crypto Cloud Mining.
— Bitcoin Miner – Cloud Mining.
— Bitcoin (BTC) – Pool Mining Cloud Wallet.
— Crypto Holic – Bitcoin Cloud Mining.
— Daily Bitcoin Rewards – Cloud Based Mining System.
— Bitcoin 2021.
— MineBit Pro – Crypto Cloud Mining & btc miner.
— Ethereum (ETH) – Pool Mining Cloud

ಇದನ್ನೂ ಓದಿ- WhatsApp ಬಳಕೆ ಮಾಡುವಾಗ ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ತೊಂದರೆ ಎದುರಾದೀತು!

ಈ ಪಟ್ಟಿಯಲ್ಲಿ ಎರಡು ಆಪ್ ಗಳು ಪೇಡ್ ಆಪ್ ಗಳಾಗಿದ್ದು, ಅವುಗಳನ್ನು ಬಳಕೆದಾರರು ಖರೀದಿಸಬೇಕು. Crypto Holic – Bitcoin Cloud Mining ಆಪ್ ಗೆ ಬಳಕೆದಾರರು ರೂ.966 ರೂ. ಪಾವತಿಸಬೇಕು ಮತ್ತು Daily Bitcoin Rewards – Cloud Based Mining ಸಿಸ್ಟಮ್ ಆಪ್ ಗೆ ಬಳಕೆದಾರರು 445 ರೂ. ನೀಡಬೇಕು.

ಇದನ್ನೂ ಓದಿ-Realme: ಈ ಫೋನಿನಲ್ಲಿ ಕೇವಲ 5% ಬ್ಯಾಟರಿಯಲ್ಲೂ 2 ಗಂಟೆಗಳ ಕಾಲ ಯೂಟ್ಯೂಬ್ ನೋಡಬಹುದಂತೆ!

ಇದಲ್ಲದೆ ಟ್ರೆಂಡ್ ಮೈಕ್ರೋ ವರದಿಯ ಪ್ರಕಾರ, ಸರಿ ಸುಮಾರು 120 ಕ್ಕೂ ಅಧಿಕ ನಕಲಿ ಕ್ರಿಪ್ಟೋ ಕರೆನ್ಸಿ ಮೈನಿಂಗ್ ಆಪ್ ಗಳು ಆನ್ಲೈನ್ ನಲ್ಲಿ ಲಭ್ಯವಿದ್ದು, ಈ ಕುರಿತು ಬ್ಲಾಗ್ ವೊಂದರಲ್ಲಿ ಬರದುಕೊಂಡಿರುವ ಕಂಪನಿ, 'ಈ ಅಪ್ಲಿಕೇಶನ್‌ಗಳು ಕ್ರಿಪ್ಟೋಕರೆನ್ಸಿ ಮೈನಿಂಗ್ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ ಮತ್ತು ಜಾಹೀರಾತುಗಳನ್ನು ನೋಡುವಂತೆ ಬಳಕೆದಾರರನ್ನು ಆಗ್ರಹಿಸಿ ಮೋಸಗೊಳಿಸುತ್ತವೆ. ಇಂತಹ ಆಪ್‌ಗಳು ಜುಲೈ 2020 ರಿಂದ ಜುಲೈ 2021 ರವರೆಗೆ ಜಾಗತಿಕವಾಗಿ 4,500 ಕ್ಕೂ ಹೆಚ್ಚು ಬಳಕೆದಾರರ ಮೇಲೆ ಪರಿಣಾಮ ಬೀರಿವೆ' ಎಂದು ಹೇಳಿದೆ.

ಇದನ್ನೂ ಓದಿ-ಅಕ್ಟೋಬರ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ OnePlus 9 RT ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News