ನವದೆಹಲಿ: ಅಮೆಜಾನ್‌ನಲ್ಲಿ ಮೊಬೈಲ್ ಸೇವಿಂಗ್ ಡೇಸ್ ಸೇಲ್(Amazon Mobile Saving Days) ನಡೆಯುತ್ತಿದೆ, ಇದು ಇಂದು ಕೊನೆಗೊಳ್ಳಲಿದೆ. ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳಿವೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದೇ ಸರಿಯಾದ ಅವಕಾಶ. Redmi, Oppo, Nokia ಸೇರಿದಂತೆ ಹಲವು ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಇಲ್ಲಿ ರೆಡ್‌ಮಿ ಸ್ಮಾರ್ಟ್‌ಫೋನ್‌ಗೆ ಭಾರಿ ರಿಯಾಯಿತಿ ಇದೆ. ನೀವು ಕೇವಲ 499 ರೂ.ಗಳಲ್ಲಿ 17 ಸಾವಿರ ಬೆಲೆಯ Redmi Note 10S ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಇದು ಹೇಗೆಂದು ತಿಳಿಯಿರಿ.


COMMERCIAL BREAK
SCROLL TO CONTINUE READING

Redmi Note 10S ಕೊಡುಗೆ ಮತ್ತು ರಿಯಾಯಿತಿ


Redmi Note 10S ಸ್ಮಾರ್ಟ್‌ಫೋನ್‌(Redmi Note 10S Smartphone)ನ ಬಿಡುಗಡೆಯ ಬೆಲೆ 16,998 ರೂ. ಆಗಿದೆ. ಆದರೆ ಈ ಫೋನ್ ಅಮೆಜಾನ್ ಮಾರಾಟದಲ್ಲಿ 14,999 ರೂ.ಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ 1,999 ರೂ. ರಿಯಾಯಿತಿ ನೀಡಲಾಗುತ್ತಿದೆ. ಇದರ ನಂತರ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಇವೆ. ಇದರಿಂದ ಫೋನ್‌ನ ಬೆಲೆ ತುಂಬಾ ಕಡಿಮೆಯಾಗುತ್ತದೆ.


ಇದನ್ನೂ ಓದಿ: South Africa vs India: ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲಿಸಿದ ಕೋಚ್ ರಾಹುಲ್ ದ್ರಾವಿಡ್


Redmi Note 10S ಬ್ಯಾಂಕ್ ಆಫರ್


ನೀವು Redmi Note 10S ಸ್ಮಾರ್ಟ್‌ಫೋನ್‌(Redmi Note 10s) ಅನ್ನು ಖರೀದಿಸಲು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿದರೆ, 1,250 ರೂ.ಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಆಗ ಈ ಫೋನ್ ಬೆಲೆ 13,749 ರೂ. ಆಗುತ್ತದೆ. ಬಳಿಕ ನೀವು ವಿನಿಮಯ ಕೊಡುಗೆಯನ್ನು ಸಹ ತೆಗೆದುಕೊಳ್ಳಬೇಕು.


Redmi Note 10S ಎಕ್ಸ್ ಚೇಂಜ್ ಆಫರ್


Redmi Note 10S ಸ್ಮಾರ್ಟ್‌ಫೋನ್‌(Smartphone) ನಲ್ಲಿ 13,250 ರೂ.ಗಳ ಎಕ್ಸ್‌ ಚೇಂಜ್ ಆಫ್ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮಾಡಿಕೊಂಡರೆ ನಿಮಗೆ ಇಷ್ಟು ರಿಯಾಯಿತಿ ಸಿಗಲಿದೆ. ನಿಮ್ಮ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನೀವು 13,250 ರೂ.ಗಳ ವಿನಿಮಯ ಆಫರ್ ಪ್ರಯೋಜನ ಪಡೆಯುತ್ತೀರಿ. ಈ ಎಲ್ಲಾ ಆಫರ್  ಕ್ಲೈಮ್ ಮಾಡಿದಾಗ ಈ ಫೋನ್ ನಿಮಗೆ ಕೇವಲ 499 ರೂ.ಗೆ ಸಿಗಲಿದೆ.


ಇದನ್ನೂ ಓದಿ: Virat Kohli:ರಾಷ್ಟ್ರಗೀತೆಗೆ ಅಗೌರವ ತೋರಿದ್ದಕ್ಕಾಗಿ ಟ್ರೋಲ್ ಆದ ವಿರಾಟ್​ ಕೊಹ್ಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.