ನವದೆಹಲಿ : ಭಾರತದಲ್ಲಿ ಜಿಯೋ (Jio) ಇನ್ನೂ 5G ಸೇವೆಗಳನ್ನು ಪ್ರಾರಂಭಿಸದಿದ್ದರೂ, ಜಿಯೋದ ಅಂಗಸಂಸ್ಥೆ ಎಸ್ಟೋನಿಯಾ (Estonia) ಈಗಾಗಲೇ 6G ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ. 6G ನೆಟ್‌ವರ್ಕ್‌ಗಳನ್ನು ಅನ್ವೇಷಿಸಲು University of Oulu ಜೊತೆಗೆ ಕೆಲಸ ಮಾಡುವುದಾಗಿ ಜಿಯೋ ಎಸ್ಟೋನಿಯಾ (JIO Estonia) ಘೋಷಿಸಿದೆ. ಇದು ವ್ಯಾಪಕ ಶ್ರೇಣಿಯ ಬಳಕೆದಾರರ ಅಗತ್ಯತೆಗಳಿಗಾಗಿ ಭವಿಷ್ಯದ ವೈರ್‌ಲೆಸ್ ಎಂಡ್-ಟು-ಎಂಡ್ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ. 6G 5G ಗಿಂತ 100 ಪಟ್ಟು ಹೆಚ್ಚು ವೇಗವನ್ನು ಹೊಂದಿರುತ್ತದೆ.
6G 5G ಗಿಂತ 100 ಪಟ್ಟು ವೇಗ :
ಕಂಪನಿಯು ತನ್ನ ಮುಂದಿನ ಯೋಜನೆಗಳನ್ನು ಬಹಿರಂಗಪಡಿಸಲಿಲ್ಲ. ಆದರೆ "ಈ ಪಾಲುದಾರಿಕೆಯು ವೈಮಾನಿಕ ಮತ್ತು ಬಾಹ್ಯಾಕಾಶ ಸಂವಹನ, ಹೊಲೊಗ್ರಾಫಿಕ್ ಬೀಮ್‌ಫಾರ್ಮಿಂಗ್, ಸೈಬರ್ ಭದ್ರತೆ, ಮೈಕ್ರೋ-ಎಲೆಕ್ಟ್ರಾನಿಕ್ಸ್ ಮತ್ತು ಫೋಟೊನಿಕ್ಸ್‌ನಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಎರಡರಲ್ಲೂ 3D ಸಂಪರ್ಕಿತ ಇಂಟೆಲಿಜೆನ್ಸ್ ಅನ್ನು ಉತ್ತೇಜಿಸಲಿದೆ. 5Gಗೆ ಹೋಲಿಸಿದರೆ 6G 100 ಪಟ್ಟು ಹೆಚ್ಚು ವೇಗವನ್ನು ಹೊಂದಿರಲಿದೆ. ಅಂದರೆ ತಡೆರಹಿತ ಡೇಟಾ ಪ್ರಸರಣಕ್ಕಾಗಿ ಡೌನ್‌ಲಿಂಕ್ ವೇಗವು 1,000 Gbps ವರೆಗೆ ಇರುತ್ತದೆ.
ಇದನ್ನೂ ಓದಿ : Flipkart Sale: ಫ್ಲಿಪ್‌ಕಾರ್ಟ್‌ನಲ್ಲಿ OPPO 5G ಸ್ಮಾರ್ಟ್‌ಫೋನ್ ಅನ್ನು ಕೇವಲ 300 ರೂ.ಗೆ ಖರೀದಿಸಲು ಸುವರ್ಣಾವಕಾಶ
ಈ ಕ್ಷೇತ್ರಗಳತ್ತ ಗಮನ :
Jio 6G ಉತ್ಪಾದನೆ, ರಕ್ಷಣಾ ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಮೇಲೂ ಪರಿಣಾಮ ಬೀರುತ್ತದೆ. ಈ ನೆಟ್‌ವರ್ಕ್ 5G ಯೊಂದಿಗೆ ಇರುತ್ತದೆ ಮತ್ತು ವ್ಯಾಪಕ ಶ್ರೇಣಿಯ ಗ್ರಾಹಕರು ಮತ್ತು ಉದ್ಯಮಗಳನ್ನು ಒಳಗೊಂಡಿರಲಿದೆ. ತಂತ್ರಜ್ಞಾನದ ವಿಷಯದಲ್ಲಿ, 6G 5G ಗಿಂತ ಉತ್ತಮವಾಗಿರುತ್ತದೆ.
ಹಲವು ದೇಶಗಳಲ್ಲಿ ನಡೆಯುತ್ತಿದೆ ಸಂಶೋಧನೆ :
"ಓಲು ವಿಶ್ವವಿದ್ಯಾನಿಲಯದೊಂದಿಗೆ (University of Oulu) 6G ಸಂಶೋಧನೆ ಮತ್ತು ಸಾಮರ್ಥ್ಯಗಳಲ್ಲಿನ ಆರಂಭಿಕ ಹೂಡಿಕೆಯು 5G ಯಲ್ಲಿ ಜಿಯೋ ಲ್ಯಾಬ್‌ನ (Jio Lab) ಸಾಮರ್ಥ್ಯಗಳನ್ನು ಪೂರೈಸುತ್ತದೆ ಎಂದು ಜಿಯೋ ಪ್ಲಾಟ್‌ಫಾರ್ಮ್‌ಗಳ ಹಿರಿಯ ಉಪಾಧ್ಯಕ್ಷ ಆಯುಷ್ ಭಟ್ನಾಗರ್ ತಿಳಿಸಿದ್ದಾರೆ. 6G ವೇಗವು 5G ಗಿಂತ 100 ಪಟ್ಟು ವೇಗವಾಗಿರುತ್ತದೆ ಎಂದು ಹೇಳಲಾಗಿದೆ. ಮುಂದಿನ ಪೀಳಿಗೆಯ ನೆಟ್‌ವರ್ಕ್‌ಗಾಗಿ ಸ್ಯಾಮ್‌ಸಂಗ್ 1,000 Gbps ವರೆಗಿನ ವೇಗವನ್ನು ಕಲ್ಪಿಸಿದೆ. ಇದರ ಸಂಶೋಧನೆ ಮತ್ತು ಅಭಿವೃದ್ಧಿ ಈಗಾಗಲೇ ಚೀನಾ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಪ್ರಾರಂಭವಾಗಿದೆ.
ಇದನ್ನೂ ಓದಿ : Child Security:ಈ Smart School Bag ನಿಂದ ಪೋಷಕರು ತಮ್ಮ ಮನೆಯಿಂದಲೇ ಮಕ್ಕಳ ಮೇಲೆ ನಿಗಾವಹಿಸಬಹುದು
2025ರ ವೇಳೆಗೆ 6G ಬಿಡುಗಡೆ :
ಕನಿಷ್ಠ 2025 ರವರೆಗೆ 6G ಲಾಂಚ್ ಅನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಭಾರತವು 2023 ಅಥವಾ 2024 ರ ಅಂತ್ಯದ ವೇಳೆಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 6G ತಂತ್ರಜ್ಞಾನವನ್ನು ನಿಯೋಜಿಸುವ ವಿಶ್ವಾಸ ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.