Flipkart Big Bachat Dhamaal Sale: ನಡೆಯುತ್ತಿದೆ. ಈ ಸೇಲ್  ಮಾರ್ಚ್ 3 ರಿಂದ ಆರಂಭಗೊಂಡಿದೆ ಮತ್ತು ಮಾರ್ಚ್ 5 ರಂದು ಕೊನೆಗೊಳ್ಳಲಿದೆ. ಈ ಸೆಲ್‌ನಲ್ಲಿ, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಸೆಲ್ ನಿಮಗೆ ಭಾರಿ ಸಹಕಾರಿಯಾಗಲಿದೆ. ಇತ್ತೀಚೆಗೆ Realme 10 Pro 5G ಅನ್ನು Realme 10 ಸರಣಿಯಡಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಯೂ ಕೂಡ ಕೈಗೆಟಕುವ ದರಕ್ಕೆ ಇರಿಸಲಾಗಿದೆ. ಆದರೆ, 20 ಸಾವಿರ ರೂಪಾಯಿ ಮೌಲ್ಯದ ಈ ಫೋನ್ ಅನ್ನು ಕೇವಲ 649 ರೂಪಾಯಿಗೆ ಖರೀದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಶೀಘ್ರದಲ್ಲೇ 300 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ!


Realme 10 Pro 5G ಮೇಲೆ ನೀಡಲಾಗುವ ಕೊಡುಗೆಗಳು
Realme 10 Pro 5G (128 GB) ಬಿಡುಗಡೆಯ ಬೆಲೆ ರೂ 20,999 ಆಗಿದೆ, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮೇಲೆ ಶೇ. 9 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂದರೆ ಇದನ್ನು ನೀವು ರೂ 18,999ಕ್ಕೆ ಖರೀದಿಸಬಹುದು. ಇದಾದ ಬಳಿಕ ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ, ಇದು ಫೋನ್‌ನ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-Ola ಪಾರುಪತ್ಯಕ್ಕೆ ಬ್ರೇಕ್ ಹಾಕಲು ಬಂತು 'ಹಮಾರಾ ಬಜಾಜ್' ಚೇತಕ್ ಇವಿ, ರೇಂಜ್ ಎಷ್ಟು ಗೊತ್ತಾ?


Realme 10 Pro 5G ಎಕ್ಸ್‌ಚೇಂಜ್ ಆಫರ್
Realme 10 Pro 5G ನಲ್ಲಿ 18,350 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 18,350 ರೂಗಳ ಸಂಪೂರ್ಣ ವಿನಿಮಯ ನಿಮಗೆ ಲಭ್ಯವಿರಲಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.