BSNL ಭರ್ಜರಿ ಯೋಜನೆ: ಕೇವಲ 5 ರೂ.ಗೆ ಸಿಗುತ್ತೆ ಪ್ರತಿದಿನ 2ಜಿಬಿ ಡೇಟಾ
BSNL Best Prepaid Plans: ಬಿಎಸ್ಎನ್ಎಲ್ ಮೂರು ಪವರ್ಫುಲ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಒಂದು ಯೋಜನೆಯಲ್ಲಿ ಕೇವಲ 5 ರೂ.ಗೆ ಪ್ರತಿದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಈ ಯೋಜನೆಗಳ ಬಗ್ಗೆ ತಿಳಿಯೋಣ...
ಬಿಎಸ್ಎನ್ಎಲ್ ಅತ್ಯುತ್ತಮ ಪ್ರಿಪೇಯ್ಡ್ ಪ್ಲಾನ್‌ಗಳು: ದೇಶಾದ್ಯಂತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಮಿತವ್ಯಯಕಾರಿ ಯೋಜನೆಗಳನ್ನೂ ಪರಿಚಯಿಸುತ್ತಿವೆ. ಅಂದರೆ ಕಡಿಮೆ ಬೆಲೆಯಲ್ಲಿ ಅದ್ಭುತ ಪ್ರಯೋಜನಗಳನ್ನು ಒದಗಿಸುತ್ತಿವೆ. ಈ ಸಂದರ್ಭದಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮೂರು ಪವರ್ಫುಲ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅದರ ಬೆಲೆ 100 ರೂ.ಗಿಂತ ಕಡಿಮೆ. ಈ ಯೋಜನೆಗಳಲ್ಲಿ ಒಂದು ಯೋಜನೆಯಲ್ಲಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಪ್ರತಿದಿನ ಕೇವಲ 5 ರೂ.ಗೆ 2 ಜಿಬಿ ಡೇಟಾ ಪ್ರಯೋಜನವನ್ನು ಒದಗಿಸುತ್ತಿದೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ.
ಬಿಎಸ್ಎನ್ಎಲ್ 5 ರೂಪಾಯಿಗೆ ನೀಡುತ್ತಿದೆ 2ಜಿಬಿ ದೈನಂದಿನ ಡೇಟಾ ಲಾಭ :
ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಕೇವಲ 5 ರೂ.ಗಳಿಗೆ ಪ್ರತಿದಿನ 2ಜಿಬಿ ಡೇಟಾ ಲಾಭವನ್ನು ನೀಡುತ್ತಿದೆ. ವಾಸ್ತವವಾಗಿ ಇದು 97 ರೂ.ಗಳ ಬಿಎಸ್ಎನ್ಎಲ್ ಪ್ರಿಪೇಯ್ಡ್ ಯೋಜನೆ ಆಗಿದೆ. 18 ದಿನಗಳ ಮಾನ್ಯತೆ ಜೊತೆಗೆ ಬರುವ ಈ ಯೋಜನೆಯಲ್ಲಿ ನೀವು ಕೇವಲ 5 ರೂಗಳಲ್ಲಿ ಪ್ರತಿದಿನ 2ಜಿಬಿ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನೂ ಒದಗಿಸುತ್ತದೆ.
ಇದನ್ನೂ ಓದಿ- ಕೇವಲ 200 ರೂ.ಗೆ ಖರೀದಿಸಿ ಪೋರ್ಟಬಲ್ ಮಿನಿ ಫ್ಯಾನ್
ಬಿಎಸ್ಎನ್ಎಲ್ 87 ರೂ.ಗಳ ಯೋಜನೆ :
ಈ ಯೋಜನೆಯು 100 ರೂ.ಗಿಂತ ಕಡಿಮೆ ಇರುವ ಮೂರು ಯೋಜನೆಗಳಲ್ಲಿ ಅತ್ಯಂತ ಅಗ್ಗದ ಯೋಜನೆ ಆಗಿದೆ ಮತ್ತು ಇದರ ಬೆಲೆ 87 ರೂ. ಈ ಯೋಜನೆಯಡಿಯಲ್ಲಿ, ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ 14 ದಿನಗಳವರೆಗೆ 1ಜಿಬಿ ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ ಪ್ರಯೋಜನಗಳನ್ನು ನೀಡುತ್ತಿದೆ. ಈ ಯೋಜನೆಗಳು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯದೊಂದಿಗೆ ಬರುತ್ತವೆ.
ಇದನ್ನೂ ಓದಿ- ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಸಿ ಅಂತಹ ಹವಾ ನೀಡುವ ಫ್ಯಾನ್
ಬಿಎಸ್ಎನ್ಎಲ್ 99 ರೂ.ಗಳ ಯೋಜನೆ :
ಈ ಮೂರು ಯೋಜನೆಗಳಲ್ಲಿ ಇದು ಅತ್ಯಂತ ದುಬಾರಿ ಯೋಜನೆ. ಇದರ ಬೆಲೆ 99 ರೂ. ಬಿಎಸ್ಎನ್ಎಲ್ ನ ಈ ಯೋಜನೆಯನ್ನು ಖರೀದಿಸುವ ಬಳಕೆದಾರರು 18 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಅದರಲ್ಲಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಯೋಜನೆಯಲ್ಲಿ, ನಿಮ್ಮ ಆಯ್ಕೆಯ ಕಾಲರ್ ಟ್ಯೂನ್ ಅನ್ನು ಸಹ ನೀವು ಹೊಂದಿಸಬಹುದು ಆದರೆ ಇದು ಡೇಟಾ ಮತ್ತು ಎಸ್ಎಂಎಸ್ ನ ಪ್ರಯೋಜನಗಳನ್ನು ಒಳಗೊಂಡಿರುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.