ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಸಿ ಅಂತಹ ಹವಾ ನೀಡುವ ಫ್ಯಾನ್

Mist Sprinkler Fan Cool Like AC: ಎಸಿಯಂತಹ ತಂಪಾದ ಗಾಳಿ ನೀಡುವ ಟೇಬಲ್ ಫ್ಯಾನ್ ಬಗ್ಗೆ ಎಂದಾದರೂ ಕೇಳಿದ್ದೀರಾ. ಈ ಫ್ಯಾನ್ ಇತರ ಫ್ಯಾನ್‌ಗಳಿಗಿಂತ ಬಹಳ ವಿಶಿಷ್ಟವಾಗಿದೆ. 

Written by - Yashaswini V | Last Updated : Jul 5, 2022, 09:54 AM IST
  • ಇದು ಉತ್ತಮ ಕೂಲಿಂಗ್ ಫ್ಯಾನ್ ಆಗಿದೆ.
  • ಇದು ನೀರನ್ನು ಸಿಂಪಡಿಸುವ ಮೂಲಕ ಬಿಸಿ ಗಾಳಿಯನ್ನು ತಂಪಾಗಿಸುತ್ತದೆ.
  • ಈ ಫ್ಯಾನ್ ಮನೆಯ ಒಳಗೆ ಮತ್ತು ಹೊರಗೆ ಉತ್ತಮ ಗಾಳಿಯನ್ನು ನೀಡುತ್ತದೆ.
ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಸಿ ಅಂತಹ ಹವಾ ನೀಡುವ ಫ್ಯಾನ್  title=
Mist Sprinkler Fan

ಎಸಿಯಂತೆ ಕಾರ್ಯನಿರ್ವಹಿಸುವ ಮಿಸ್ಟ್ ಸ್ಪ್ರಿಂಕ್ಲರ್ ಫ್ಯಾನ್: ಬದಲಾಗುತ್ತಿರುವ ಹವಾಮಾನದಿಂದಾಗಿ ಮನೆಯಲ್ಲಿ ಕೆಲವು ವಸ್ತುಗಳು ಅತ್ಯಗತ್ಯವಾಗಿವೆ. ಇವುಗಳಲ್ಲಿ ಫ್ಯಾನ್ ಸಹ ಒಂದು. ಆದರೆ, ಹಲವು ಬಾರಿ ದಿನವಿಡೀ ಫ್ಯಾನ್ ಚಲಾಯಿಸುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುವುದರ ಜೊತೆಗೆ ಬಿಸಿ ಗಾಳಿ ಕೂಡ ಬರುತ್ತದೆ. ನಿಮಗೂ ಈ ರೀತಿಯ ಅನುಭವವಾಗಿದ್ದರೆ ಇಲ್ಲಿದೆ ಸರಳ ಪರಿಹಾರ. ಈ ಲೇಖನದಲ್ಲಿ ನಾವು ಕಡಿಮೆ ವೆಚ್ಚದ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಸಿಯಂತಹ ತಂಪಾದ ಗಾಳಿ ನೀಡುವಂತಹ ಫ್ಯಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಫ್ಯಾನ್ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್‌ಗಿಂತ ಭಿನ್ನವಾಗಿದೆ. ಇದು ನೀರಿನ ಸ್ಪ್ಲಾಶ್ ಜೊತೆಗೆ ತಂಪಾದ ಗಾಳಿಯನ್ನು ನೀಡುತ್ತದೆ. 

ಮಿಸ್ಟ್ ಸ್ಪ್ರಿಂಕ್ಲರ್ ಫ್ಯಾನ್: 
ಮಾರುಕಟ್ಟೆಯಲ್ಲಿ ಹಲವು ವಿಧದ ಮಿಸ್ಟ್ ಸ್ಪ್ರಿಂಕ್ಲರ್ ಫ್ಯಾನ್‌ಗಳು ಲಭ್ಯವಿದ್ದು, ಅದನ್ನು ನೀವು ಖರೀದಿಸಬಹುದು. ಮಿಸ್ಟ್ ಸ್ಪ್ರಿಂಕ್ಲರ್ ಫ್ಯಾನ್ ನಿಮಗೆ ತಂಪಾದ ಗಾಳಿಯನ್ನು ನೀಡಲು ಗಾಳಿ ಮತ್ತು ನೀರನ್ನು ಸಂಯೋಜಿಸುತ್ತದೆ. ಸಾಮಾನ್ಯವಾಗಿ ನೀವು ಈ ರೀತಿಯ ಫ್ಯಾನ್ ಅನ್ನು ಮದುವೆ ಅಥವಾ ಯಾವುದಾದರು ಪಾರ್ಟಿಯಲ್ಲಿ ನೋಡಿರಬಹುದು.

ಇದನ್ನೂ ಓದಿ- ಕೇವಲ 200 ರೂ.ಗೆ ಖರೀದಿಸಿ ಪೋರ್ಟಬಲ್ ಮಿನಿ ಫ್ಯಾನ್

ಬಿಸಿ ಗಾಳಿಯನ್ನು ತಂಪಾಗಿಸುತ್ತದೆ ಈ ಫ್ಯಾನ್:
ಇದು ಉತ್ತಮ ಕೂಲಿಂಗ್ ಫ್ಯಾನ್ ಆಗಿದೆ. ಇದು ನೀರನ್ನು ಸಿಂಪಡಿಸುವ ಮೂಲಕ ಬಿಸಿ ಗಾಳಿಯನ್ನು ತಂಪಾಗಿಸುತ್ತದೆ. ಈ ಫ್ಯಾನ್ ಮನೆಯ ಒಳಗೆ ಮತ್ತು ಹೊರಗೆ ಉತ್ತಮ ಗಾಳಿಯನ್ನು ನೀಡುತ್ತದೆ. ವಾಸ್ತವವಾಗಿ, ಈ ಫ್ಯಾನ್ ನೀರಿನ ಟ್ಯಾಪ್‌ಗೆ ಸಂಪರ್ಕ ಹೊಂದಿದೆ, ಫ್ಯಾನ್‌ನಲ್ಲಿ ಸಣ್ಣ ರಂಧ್ರಗಳಿವೆ. ನೀರಿನ ಟ್ಯಾಪ್ ಅನ್ನು ಆನ್ ಮಾಡಿ ನಂತರ, ನೀವು ಫ್ಯಾನ್ ಅನ್ನು ಆನ್ ಮಾಡಿದರೆ ಅದು ನೀರಿನ ಶವರ್ನೊಂದಿಗೆ ಬಲವಾದ ಗಾಳಿಯನ್ನು ನೀಡುತ್ತದೆ. ವಿಶೇಷವೆಂದರೆ ನಿಮಗೆ ಎಷ್ಟು ಸ್ಪ್ರಿಂಕ್ಲರ್ ಬೇಕು ಎಂಬುದನ್ನು ನೀವು ಹೊಂದಿಸಬಹುದು. ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದು. 

ಇದನ್ನೂ ಓದಿ- Solar Charging Smartwatch: ಬಿಸಿಲಲ್ಲಿ ಚಾರ್ಜ್ ಆಗುವ ಸ್ಮಾರ್ಟ್ ವಾಚ್ ಬಿಡುಗಡೆ, ಇದರಂತಹ ವೈಶಿಷ್ಟ್ಯ ಬೇರೆ ವಾಚ್ ನಲ್ಲಿಲ್ಲ

ಅಮೆಜಾನ್‌ನಲ್ಲಿ ಲಭ್ಯ:
ಡಿಐವೈ ಕ್ರಾಫ್ಟರ್ಸ್ ಫ್ಯಾನ್  ಅಮೆಜಾನ್‌ನಲ್ಲಿ ಲಭ್ಯವಿದೆ. ಈ ಫ್ಯಾನ್‌ನ ಬೆಲೆ 4,197 ರೂ ಆಗಿದ್ದರೂ, ನೀವು ಇದನ್ನು ಅಮೆಜಾನ್‌ನಿಂದ 2,587 ರೂ.ಗಳಿಗೆ ಖರೀದಿಸಬಹುದು. ಇದರೊಂದಿಗೆ ಪೈಪ್, ಟ್ಯಾಪ್ ಕನೆಕ್ಟರ್  ಕೂಡ ಲಭ್ಯವಿರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News