ನವದೆಹಲಿ: BSNL Masterstroke Offer - ಒಂದು ವೇಳೆ ನೀವೂ ಕೂಡ ಅಗ್ಗದ ದರದಲ್ಲಿ ಇಡೀ ತಿಂಗಳ ಪೂರ್ತಿ ಅನಿಯಮಿತ ಕಾಲಿಂಗ್ ಹಾಗೂ ನಿತ್ಯ 1 ಜಿಬಿ ಇಂಟರ್ನೆಟ್ ಲಾಭ ಪಡೆಯಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗಷ್ಟೇ  ತನ್ನ ಅತ್ಯಂತ ಅಗ್ಗದ ಬೆಲೆಯ ಪ್ರೀಪೇಡ್ ರಿಚಾರ್ಜ್ ಪ್ಲಾನ್ ಬಿಡುಗಡೆಗೊಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಭಾರತ ಸರ್ಕಾರದಿಂದ ನಿಜವಾಗಿಯೂ ಸಿಗುತ್ತಿದೆಯೇ 3 ತಿಂಗಳ FREE Internet? ಇಲ್ಲಿದೆ ಸತ್ಯಾಸತ್ಯತೆ


ಕೇವಲ ರೂ.47 ಸಿಗುತ್ತಿದೆ ಈ ರಿಚಾರ್ಜ್ ಪ್ಲಾನ್ (Cheapest Recharge Plan)
ಕೇವಲ 47 ರೂ.ಗಳಿಗೆ ಲಭ್ಯವಿರುವ ಈ ಯೋಜನೆಯ ಅಡಿ  ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ನಿತ್ಯ 1 ಜಿಬಿ ಡೇಟಾ, 100 SMS ಹಾಗೂ ಅನಿಯಮಿತ ಕರೆಗಳ ಸೌಲಭ್ಯ ಒಂದು ತಿಂಗಳ ಅವಧಿಗೆ ಸಿಗಲಿದೆ.  ಬಿಎಸ್‌ಎನ್‌ಎಲ್‌ನ ಈ ಸಣ್ಣ ರೀಚಾರ್ಜ್ ಕೂಪನ್ ಏರ್‌ಟೆಲ್(Airtel), ಜಿಯೋ(Jio) ಮತ್ತು ವೊಡಾಫೋನ್-ಐಡಿಯಾ (Vi) ಗಳಿಗೆ ಸ್ಪರ್ಧೆಯನ್ನು ಹೆಚ್ಚಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲವರು ಬಿಎಸ್‌ಎನ್‌ಎಲ್‌ನ ಈ ಪ್ರಸ್ತಾಪವನ್ನು ಮಾಸ್ಟರ್‌ಸ್ಟ್ರೋಕ್ ಎಂದೂ ಕರೆಯುತ್ತಿದ್ದಾರೆ.


ಇದನ್ನೂ ಓದಿ- ನೀವೂ Paytm ಬಳಸುತ್ತೀರಾ? ಹಾಗಾದ್ರೆ ಮನೆಯಲ್ಲಿಯೇ ಕುಳಿತು ನೀವು ಎರಡು ಲಕ್ಷ ರೂ. ಪಡೆಯಬಹುದು


ರಿಚಾರ್ಜ್ ಚಾರ್ಟ್ ಮೇಲೆ ಒಮ್ಮೆ ನೀವು ನಿಮ್ಮ ದೃಷ್ಟಿ ಬೀರಿದರೆ, ರೂ.100 ಕ್ಕಿಂತ ಕಡಿಮೆ ಬೆಲೆಗೆ ಏರ್ಟೆಲ್ ಒಟ್ಟು ಎರಡು(ರೂ.79 ಹಾಗೂ ರೂ.49) ಪ್ರೀ ಪೇಡ್ ಪ್ಲಾನ್ ಗಳನ್ನು ನೀಡುತ್ತದೆ. ಈ ಎರಡೂ ಪ್ಲಾನ್ ಗಳಲ್ಲಿ ಬಳಕೆದಾರರಿಗೆ ಕೇವಲ ರೂ.200 ಎಂಬಿ ಡೇಟಾ ಸಿಗುತ್ತದೆ. ಜಿಯೋ ಕೂಡ ರೂ.51 ಹಾಗೂ ರೂ.21 ಬೆಲೆಯ ರಿಚಾರ್ಜ್ ಪ್ಲಾನ್ ಆಫರ್ ಮಾಡುತ್ತದೆ. ಆದರೆ, ಈ ಎರಡೂ ಪ್ಲಾನ್ ಗಳು ಟಾಪ್ ಅಪ್ ಪ್ಲಾನ್ ಗಳಾಗಿವೆ. ಇವೆರಡರಲ್ಲಿ ಯಾವುದೇ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಇದೇ ರೀತಿ Vi ಕೂಡ ರೂ.48 ಹಾಗೂ ರೂ.98 ಬೆಲೆಯ ಎರಡೂ ಪ್ಲಾನ್ ಗಳನ್ನು ನೀಡುತ್ತಿದೆ. ಇವೆರಡರಲ್ಲಿ ಕೂಡ ಸೀಮಿತ ಸೌಲಭ್ಯಗಳನ್ನು ನೀಡಲಾಗಿದೆ.


ಇದನ್ನೂ ಓದಿ-Jio IPL 2021 Recharge Plan : Jio ಬಳಕೆದಾರರಿಗೆ ಭರ್ಜರಿ ಆಫ಼ರ್ : ಈ ಪ್ಲಾನ್ ನಲ್ಲಿ ಫ್ರೀ ಯಾಗಿ ವೀಕ್ಷಿಸಬಹುದು IPL


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.