ಭಾರತ ಸರ್ಕಾರದಿಂದ ನಿಜವಾಗಿಯೂ ಸಿಗುತ್ತಿದೆಯೇ 3 ತಿಂಗಳ FREE Internet? ಇಲ್ಲಿದೆ ಸತ್ಯಾಸತ್ಯತೆ

ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳು ಭಾರತ ಸರ್ಕಾರ ಉಚಿತ ಇಂಟರ್ನೆಟ್ ಒದಗಿಸುತ್ತದೆ ಎಂಬ ಸಂದೇಶ ಇತ್ತೀಚೆಗೆ ವೈರಲ್ ಆಗಿದೆ. ಸುಮಾರು 100 ಮಿಲಿಯನ್ ಬಳಕೆದಾರರು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಸುದ್ದಿಯಲ್ಲಿ ಬರೆಯಲಾಗಿದೆ.

Written by - Yashaswini V | Last Updated : Apr 10, 2021, 01:45 PM IST
  • ನೀವು ನಿಜವಾಗಿಯೂ ಉಚಿತ ಇಂಟರ್ನೆಟ್ ಸೇವೆಯನ್ನು ಪಡೆಯುತ್ತೀರಾ?
  • ಮುಂದಿನ ಮೂರು ತಿಂಗಳು ಭಾರತ ಸರ್ಕಾರ ಉಚಿತ ಇಂಟರ್ನೆಟ್ ಒದಗಿಸುತ್ತದೆ ಎಂಬ ಸಂದೇಶ ಇತ್ತೀಚೆಗೆ ವೈರಲ್ ಆಗಿದೆ
  • ಈ ಸುದ್ದಿಯ ವಾಸ್ತವತೆಯನ್ನು ತಿಳಿಯಿರಿ
ಭಾರತ ಸರ್ಕಾರದಿಂದ ನಿಜವಾಗಿಯೂ ಸಿಗುತ್ತಿದೆಯೇ 3 ತಿಂಗಳ FREE Internet? ಇಲ್ಲಿದೆ ಸತ್ಯಾಸತ್ಯತೆ title=
3 Months Free Internet

ನವದೆಹಲಿ: ಈ ದಿನಗಳಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಿಂದಾಗಿ ಯಾವುದೇ ಸುದ್ದಿಯಾದರೂ ಬೇಗ ವೈರಲ್ ಆಗುತ್ತವೆ. ಇದೇ ರೀತಿ ಇತ್ತೀಚಿಗೆ ಸುದ್ದಿಯೊಂದು ಬಹಳ ವೈರಲ್ ಆಗುತ್ತಿದ್ದು ಇದರಲ್ಲಿ ಭಾರತ ಸರ್ಕಾರವು ಮುಂದಿನ ಮೂರು ತಿಂಗಳುಗಳವರೆಗೆ ಕೋಟ್ಯಾಂತರ ಜನರಿಗೆ ಉಚಿತ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ನಾವಿಂದು ತಿಳಿಸಲಿದ್ದೇವೆ...

ಏನಿದು ವಿಷಯ?
ಕರೋನಾವೈರಸ್ ಕಾರಣದಿಂದಾಗಿ ಇನ್ನೂ ಕೆಲ ತಿಂಗಳವರೆಗೆ ಆನ್‌ಲೈನ್ ತರಗತಿಗಳು ಮುಂದುವರೆಯಲಿದ್ದು, ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳು ಭಾರತ ಸರ್ಕಾರ ಉಚಿತ ಇಂಟರ್ನೆಟ್ (Free Internet) ಒದಗಿಸುತ್ತದೆ ಎಂಬ ಸಂದೇಶ ಇತ್ತೀಚೆಗೆ ವೈರಲ್ ಆಗಿದೆ. ಸುಮಾರು 100 ಮಿಲಿಯನ್ ಬಳಕೆದಾರರು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಅದೇ ಸುದ್ದಿಯಲ್ಲಿ ಕೆಳಗೆ ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದೆ, ಇದರಲ್ಲಿ ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ರೀಚಾರ್ಜ್ ಪಡೆಯಬಹುದು ಎಂದು ಹೇಳಲಾಗಿದೆ. ಇದಲ್ಲದೆ ಜನರನ್ನು ಪ್ರಚೋದಿಸಲು ಪ್ರಸ್ತಾಪವು ಸೀಮಿತ ಜನರಿಗೆ ಮಾತ್ರ ಲಭ್ಯವಾಗಲಿದೆ.  ಅಂದರೆ, ತಡವಾಗಿ ಕ್ಲಿಕ್ ಮಾಡುವವರಿಗೆ ಈ ಅವಕಾಶ ಸಿಗುವುದಿಲ್ಲ ಎಂದು ಈ ಸಂದೇಶದಲ್ಲಿ ಹೇಳಲಾಗುತ್ತಿದೆ.

ಇದನ್ನೂ ಓದಿ - ಅರೆ ವಾಹ್ ! ಮೂರು ತಿಂಗಳುಗಳ ಉಚಿತ ಇಂಟರ್ನೆಟ್ ಪ್ಲಾನ್, ಹೇಗೆ ಲಾಭ ಪಡೆಯಬೇಕು?

ಈ ಸಂದೇಶದ ವಾಸ್ತವತೆ ಇದು:
ಈ ಸುದ್ದಿ ವೈರಲ್ ಆದ ಕೂಡಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪಿಐಬಿ ಫ್ಯಾಕ್ಟ್ ಚೆಕ್ (Fact Check) ಈ ವೈರಲ್ ಸುದ್ದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಅಂತಹ ಯಾವುದೇ ಘೋಷಣೆಯನ್ನು ಭಾರತ ಸರ್ಕಾರ ಮಾಡಿಲ್ಲ. ಈ ವಾಟ್ಸಾಪ್ ಸಂದೇಶ ನಿಜವಲ್ಲ ಎಂದು ಇಲಾಖೆ ಟ್ವೀಟ್ ಮೂಲಕ ಜನರಿಗೆ ಮಾಹಿತಿ ಒದಗಿಸಿದೆ.

ಇದನ್ನೂ ಓದಿ - ಇನ್ಮುಂದೆ ವಿಮಾನದಲ್ಲಿಯೂ ENJOY ಮಾಡಿ FREE WI-FI ಸೇವೆ

ನೀವೂ ಮೋಸ ಹೋಗಬಹುದು ಎಚ್ಚರ:
ಈ ದಿನಗಳಲ್ಲಿ ಜನರಿಗೆ ಇಂತಹ ಸಂದೇಶಗಳನ್ನು ಕಳುಹಿಸುವ ಮೂಲಕ, ಸೈಬರ್ ಕ್ರಿಮಿನಲ್ಸ್ ಬ್ಯಾಂಕ್ ಖಾತೆಗೆ ಖನ್ನಾ ಹಾಕುತ್ತಿದ್ದಾರೆ.  ಇತ್ತೀಚೆಗೆ, ಅಮೆಜಾನ್ ಉಚಿತ ಸ್ಮಾರ್ಟ್ಫೋನ್ಗಳನ್ನು ನೀಡುತ್ತದೆ ಎಂಬ ಸುದ್ದಿ ತುಂಬಾ ವೈರಲ್ ಆಗಿತ್ತು. ನಂತರ, ಅಮೆಜಾನ್ ಸ್ವತಃ ಆ ವೈರಲ್ ಸಂದೇಶವನ್ನು ನಿರಾಕರಿಸಿತು. ಅನೇಕ ಸೈಬರ್ ಅಪರಾಧಿಗಳು ಜನರ ವೈಯಕ್ತಿಕ ಮಾಹಿತಿ ಮತ್ತು ಫೋನ್‌ಗಳನ್ನು ಹ್ಯಾಕ್ ಮಾಡಲು ಇಂತಹ ಮೋಸಗೊಳಿಸುವ ಸಂದೇಶಗಳನ್ನು ಬಳಸುತ್ತಿದ್ದಾರೆ. ಸಾರ್ವಜನಿಕರು ಇಂತಹ ಮೋಸದ ಜಾಲಗಳಿಂದ ಎಚ್ಚರವಾಗಿರಬೇಕು ಎಂದು ಆಗಾಗ್ಗೆ ಬ್ಯಾಂಕುಗಳು, ಸರ್ಕಾರಗಳು ಜನರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಲೇ ಇರುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News