Jio IPL 2021 Recharge Plan : Jio ಬಳಕೆದಾರರಿಗೆ ಭರ್ಜರಿ ಆಫ಼ರ್ : ಈ ಪ್ಲಾನ್ ನಲ್ಲಿ ಫ್ರೀ ಯಾಗಿ ವೀಕ್ಷಿಸಬಹುದು IPL

Disney+ Hotstar ನಲ್ಲಿ IPL 2021 live streaming ನಡೆಯಲಿದೆ. ನೀವು  ಜಿಯೋ ಬಳಕೆದಾರರಾಗಿದ್ದರೆ, ನಿಮ್ಮ ಮೊಬೈಲ್ ಫೋನ್‌ನಲ್ಲಿಯೇ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು.  

Written by - Ranjitha R K | Last Updated : Apr 9, 2021, 04:10 PM IST
  • ಮೊಬೈಲ್ ಫೋನ್‌ನಲ್ಲಿಯೇ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು
  • ಜಿಯೋದ ರೀಚಾರ್ಜ್ ಯೋಜನೆಗಳನ್ನು ಬಳಸಿದರೆ, ಐಪಿಎಲ್‌ನ ಪಂದ್ಯಗಳನ್ನು ವೀಕ್ಷಿಸಬಹುದು
  • ಪ್ಲಾನ್ ಗಳಲ್ಲಿ ಸಿಗಲಿದೆ Disney+ Hotstar ವಿಐಪಿಯ ಚಂದಾದಾರಿಕೆ
Jio IPL 2021 Recharge Plan : Jio ಬಳಕೆದಾರರಿಗೆ ಭರ್ಜರಿ ಆಫ಼ರ್ : ಈ ಪ್ಲಾನ್ ನಲ್ಲಿ ಫ್ರೀ ಯಾಗಿ ವೀಕ್ಷಿಸಬಹುದು IPL

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2021 ಇಂದಿನಿಂದ ಪ್ರಾರಂಭವಾಗುತ್ತಿದೆ. ಐಪಿಎಲ್‌ನ 14 ನೇ ಸೀಜನ್ ನ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.   ನೀವು ಜಿಯೋ ಗ್ರಾಹಕರಾಗಿದ್ದರೆ,  ನಿಮ್ಮ ಮೊಬೈಲ್ ಫೋನ್‌ನಲ್ಲಿಯೇ ಎಲ್ಲಾ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.   

Disney+ Hotstar ನಲ್ಲಿ IPL 2021 live streaming ನಡೆಯಲಿದೆ. ನೀವು  ಜಿಯೋ ಬಳಕೆದಾರರಾಗಿದ್ದರೆ, ನಿಮ್ಮ ಮೊಬೈಲ್ ಫೋನ್‌ನಲ್ಲಿಯೇ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು.  ಜಿಯೋದ ಆಯ್ದ ರೀಚಾರ್ಜ್ ಯೋಜನೆಗಳನ್ನು (Recharge Plan) ಬಳಸಿದರೆ, ಐಪಿಎಲ್‌ನ (IPL) ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದು. ಇದರೊಂದಿಗೆ ನಿಮಗೆ ಪ್ರತಿದಿನ ಫೋನ್ ಕರೆ, ಇಂಟರ್ನೆಟ್ ಮತ್ತು ಸಂದೇಶಗಳನ್ನು ಕಳುಹಿಸುವ ಸೌಲಭ್ಯಗಳನ್ನು ಸಹ ನೀಡಲಾಗುವುದು.

ಇದನ್ನೂ ಓದಿ : BSNL: 450 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪಡೆಯಿರಿ 3300 ಜಿಬಿ ಡೇಟಾ

ಜಿಯೋ ರೂ 401 ಪ್ರಿಪೇಯ್ಡ್ ಯೋಜನೆ : 
ಜಿಯೋ ಬಳಕೆದಾರರು 401 ರೂಪಾಯಿ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದರೆ, ದಿನಕ್ಕೆ 3 ಜಿಬಿ ಡೇಟಾ, ಅನಿಯಮಿತ ಕರೆಯೊಂದಿಗೆ (Unlimited calls),  100 ಸಂದೇಶಗಳು ಮತ್ತು 6 ಜಿಬಿ ಹೆಚ್ಚುವರಿ ಇಂಟರ್ನೆಟ್ ಡೇಟಾ ನೀಡಲಾಗುವುದು. ಅಲ್ಲದೆ, ನಿಮಗೆ 28 ​​ದಿನಗಳವರೆಗೆ Disney+ Hotstar ವಿಐಪಿಯ ಉಚಿತ ಚಂದಾದಾರಿಕೆಯನ್ನು ನೀಡಲಾಗುವುದು.

ಜಿಯೋ ರೂ 598 ರಿಂದ ರೀಚಾರ್ಜ್:
ಈ ರೀಚಾರ್ಜ್‌ ಪ್ಲಾನ್ ನಲ್ಲಿ ಬಳಕೆದಾರರಿಗೆ ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಸಂದೇಶಗಳು ಮತ್ತು Disney+ Hotstar ವಿಐಪಿಯ  ಒಂದು ವರ್ಷದ ಉಚಿತ ಚಂದಾದಾರಿಕೆ ನೀಡಲಾಗುವುದು. ಇದರ ವ್ಯಾಲಿಡಿಟಿ (Validity) 56 ದಿನಗಳವರೆಗೆ ಇರುತ್ತದೆ.  

ಇದನ್ನೂ ಓದಿ : ಈ App ಇದ್ದರೆ ಸುಲಭವಾಗಿ ಪತ್ತೆ ಮಾಡಬಹುದು ಕಳೆದುಹೋದ Gadget

777 ರೂಗಳ ರೀಚಾರ್ಜ್ ಪ್ಲಾನ್ : 
ಈ ರೀಚಾರ್ಜ್‌ನಲ್ಲಿ, ದಿನಕ್ಕೆ 1.5 ಜಿಬಿ ಇಂಟರ್ನೆಟ್ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಸಂದೇಶಗಳು ಮತ್ತು 5 ಜಿಬಿ ಹೆಚ್ಚುವರಿ ಇಂಟರ್ನೆಟ್ ಡೇಟಾ ನೀಡಲಾಗುವುದು. ಅಲ್ಲದೆ, ವರ್ಷಪೂರ್ತಿ ವ್ಯಾಲಿಡಿಟಿಯೊಂದಿಗೆ  Disney+ Hotstar ವಿಐಪಿ ಉಚಿತ ಚಂದಾದಾರಿಕೆ ನೀಡುತ್ತದೆ. 

2599 ರಿಂದ ರೀಚಾರ್ಜ್ : 
ಜಿಯೋನ (Jio) ಈ ಯೋಜನೆಯಲ್ಲಿ, ನೀವು ದಿನಕ್ಕೆ 2 ಜಿಬಿ ಡೇಟಾ, 10 ಜಿಬಿ ಹೆಚ್ಚುವರಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಸಂದೇಶಗಳನ್ನು ಕಳುಹಿಸಬಹುದು. ಅಲ್ಲದೆ, Disney+ Hotstar ವಿಐಪಿಗೆ ವರ್ಷಕ್ಕೆ ಉಚಿತ ಚಂದಾದಾರಿಕೆ ನೀಡಲಾಗುವುದು. ಈ ರೀಚಾರ್ಜ್ ಯೋಜನೆಯ ಸಿಂಧುತ್ವವು ಒಂದು ವರ್ಷ ಇರಲಿದೆ. 

ಇದನ್ನೂ ಓದಿ BSNL Plans : ಕೇವಲ 47 ಪ್ಲಾನ್ ನಲ್ಲಿ ಸಿಗಲಿದೆ unlimited calls ಜೊತೆ ಪ್ರತಿದಿನ 1 GB Data

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News