ನವದೆಹಲಿ : ನೀವೂ ಬಿಎಸ್‌ಎನ್‌ಎಲ್ ಗ್ರಾಹಕರಾಗಿದ್ದರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಈ ಸುದ್ದಿ ನಿಮಗೆ ಖುಷಿ ನೀಡಲಿದೆ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ BSNL ಮುಂಬರುವ ಎರಡು ವಾರಗಳಲ್ಲಿ 200 ಸ್ಥಳಗಳಲ್ಲಿ 4G ಸೇವೆಯನ್ನು ಒದಗಿಸಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇಷ್ಟು ಮಾತ್ರವಲ್ಲ ಇನ್ನು ಐದು ತಿಂಗಳಲ್ಲಿ  5G ಸೇವೆ ಕೂಡಾ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

BSNL ನ 4G ಸೇವೆಯು ಎರಡು ವಾರಗಳಲ್ಲಿ ಪ್ರಾರಂಭ : 
ಎರಡು ವಾರಗಳಲ್ಲಿ ಬಿಎಸ್‌ಎನ್‌ಎಲ್‌ನ 4ಜಿ ಸೇವೆ ಆರಂಭವಾಗಲಿದೆ ಎಂದು  ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದರೊಂದಿಗೆ ಪ್ರಸಕ್ತ ವರ್ಷ ಅಂದರೆ 2023ರ ನವೆಂಬರ್-ಡಿಸೆಂಬರ್ ವೇಳೆಗೆ ಬಿಎಸ್‌ಎನ್‌ಎಲ್‌ನ 4ಜಿ ನೆಟ್‌ವರ್ಕ್ ಅನ್ನು 5ಜಿಗೆ ಅಪ್‌ಗ್ರೇಡ್ ಮಾಡಲಾಗುವುದು ಎಂದು ಕೂಡಾ ಅವರು ತಿಳಿಸಿದ್ದಾರೆ. BSNL 4G ನೆಟ್‌ವರ್ಕ್‌ಗಾಗಿ TCS ಮತ್ತು ITI ಗೆ 19,000 ಕೋಟಿ ರೂ.ಗಿಂತ ಹೆಚ್ಚಿನ  ಅಡ್ವಾನ್ಸ್ ಆರ್ಡರ್ ನೀಡಲಾಗಿದೆ. ದೇಶಾದ್ಯಂತ 1.23 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುವುದು.


ಇದನ್ನೂ ಓದಿ : ಏರ್‌ಟೆಲ್‌ನ ಅಗ್ಗದ ಯೋಜನೆಯಲ್ಲಿ ಫುಲ್ ಫ್ರೀ ಆಗಿ ಸಿಗಲಿದೆ Amazon Prime, Disney+ Hotstar


ಒಂದು ದಿನದಲ್ಲಿ 200 ಸ್ಥಳಗಳಲ್ಲಿ ನೆಟ್‌ವರ್ಕ್ ಅಳವಡಿಕೆ : 
ಕೇಂದ್ರ ಸರ್ಕಾರ 'ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಅನ್ನು ಹೊಂದಿಸುವ ವೇಗವನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಮೂರು ತಿಂಗಳ ಕಾಲ ಪ್ರಯೋಗವನ್ನು ನಡೆಸಿದ ನಂತರ, ಒಂದು ದಿನದಲ್ಲಿ 200 ಸ್ಥಳಗಳಲ್ಲಿ ನೆಟ್‌ವರ್ಕ್ ಅನ್ನು ಹೊಂದಿಸಲಾಗುತ್ತಿದೆ. ಆರಂಭದಲ್ಲಿ ಈ ನೆಟ್‌ವರ್ಕ್ 4G ಆಗಿ ಕಾರ್ಯನಿರ್ವಹಿಸಲಿದೆ. ಇದಾದ ಬಳಿಕ  ನವೆಂಬರ್-ಡಿಸೆಂಬರ್ ವೇಳೆಗೆ ಇದನ್ನು ಕೆಲವು ಸಾಫ್ಟ್‌ವೇರ್ ನವೀಕರಣಗಳೊಂದಿಗೆ 5Gಗೆ ಪರಿವರ್ತಿಸಲಾಗುವುದು. ಈ ವಿಷಯವನ್ನು ಕೂಡಾ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. 


ಗಂಗೋತ್ರಿಯಲ್ಲಿ 5ಜಿ ನೆಟ್‌ವರ್ಕ್ ಆರಂಭ : 
ಮತ್ತೊಂದೆಡೆ ಬುಧವಾರ ಗಂಗೋತ್ರಿಯಲ್ಲಿ 5ಜಿ ನೆಟ್‌ವರ್ಕ್ ಆರಂಭವಾಗಿದೆ. ಇದರೊಂದಿಗೆ ದೇಶದಲ್ಲಿ 5ಜಿ ನೆಟ್‌ವರ್ಕ್ ಹೊಂದಿರುವ ಸ್ಥಳಗಳ ಸಂಖ್ಯೆ 2 ಲಕ್ಷವನ್ನು  ಮೀರಿಸಿದೆ.  ಗಂಗೋತ್ರಿಯಲ್ಲಿ 5G ಸೈಟ್ ಅನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೈಷ್ಣವ್ ಮಾತನಾಡಿದ ಅಶ್ವಿನಿ ವೈಷ್ಣವ್ , 'ಪ್ರತಿ ನಿಮಿಷಕ್ಕೊಂದು 5ಜಿ ಸೈಟ್ ಆಕ್ಟಿವೇಟ್ ಆಗುತ್ತಿದೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ : ಎನ್‌ವಿಎಸ್-01 ಉಪಗ್ರಹ ಉಡಾವಣೆ : ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ತರಲಿದೆ ಕ್ರಾಂತಿಕಾರಿ ಬದಲಾವಣೆ  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ