Automatic Cars: ಇವೇ ನೋಡಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಕಾರುಗಳು

Automatic Cars: ಪ್ರಸ್ತುತ ಎಲ್ಲೆಡೆ ಆಟೋಮ್ಯಾಟಿಕ್ ಕಾರುಗಳ ಒಲವು ಹೆಚ್ಚಾಗುತ್ತಿದೆ. ಟ್ರಾಫಿಕ್ ದಟ್ಟಣೆಯಲ್ಲಿಯೂ ಕೂಡ ಸುಲಭವಾಗಿ ಚಲಾಯಿಸಬಹುದಾದ್ದರಿಂದ ನಗರ ಪ್ರದೇಶಗಳಲ್ಲಿ ಈ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಹೆಚ್ಚಾಗಿದೆ. ನೀವೂ ಕೂಡ ಕಾರ್ ಖರೀದಿಸಲು ಯೋಚಿಸುತ್ತಿದ್ದರೆ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳ ಬಗ್ಗೆ ತಿಳಿಯೋಣ... 

Written by - Yashaswini V | Last Updated : May 23, 2023, 01:56 PM IST
  • ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸ್ವಯಂಚಾಲಿತ ಕಾರುಗಳು ಹೆಚ್ಚು ಜನಪ್ರಿಯವಾಗುತ್ತಿವೆ.
  • ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರುಗಳಿಗೆ ಕ್ಲಚ್ ಪೆಡಲ್ ಅಥವಾ ಮ್ಯಾನ್ಯುವಲ್ ಗೇರ್ ಶಿಫ್ಟಿಂಗ್ ಅಗತ್ಯವಿರುವುದಿಲ್ಲ.
  • ಹಾಗಾಗಿಯೇ, ಭಾರೀ ದಟ್ಟಣೆಯಲ್ಲೂ ಸ್ವಯಂಚಾಲಿತ ಕಾರುಗಳನ್ನು ಓಡಿಸುವುದು ಬಲು ಸುಲಭ.
Automatic Cars: ಇವೇ ನೋಡಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಕಾರುಗಳು  title=
Affordable Automatic Cars

Affordable Automatic Cars: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸ್ವಯಂಚಾಲಿತ ಕಾರುಗಳು ಎಂದರೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ವಾಸ್ತವವಾಗಿ, ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಕ್ಲಚ್ ಪೆಡಲ್ ಅಥವಾ ಮ್ಯಾನ್ಯುವಲ್ ಗೇರ್ ಶಿಫ್ಟಿಂಗ್ ಅಗತ್ಯವಿರುವುದಿಲ್ಲ. ಹಾಗಾಗಿ ಎಂತಹ ಟ್ರಾಫಿಕ್ ನಲ್ಲಿಯೂ ಕೂಡ ಆರಾಮವಾಗಿ ಡ್ರೈವ್ ಮಾಡಬಹುದು ಎಂಬುದೇ ಇದರ ಜನಪ್ರಿಯತೆ ಬಲು ಮುಖ್ಯ ಕಾರಣವಾಗಿದೆ. 

ನೀವೂ ಕೂಡ ಆಟೋಮ್ಯಾಟಿಕ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರುಗಳ ಬಗ್ಗೆ ತಿಳಿಯೋಣ... 
ಮಾರುತಿ ಸುಜುಕಿ ಆಲ್ಟೊ ಕೆ10:

ಮಾರುತಿ ಸುಜುಕಿ ಆಲ್ಟೊ ಕೆ10 ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರ್ ಆಗಿದೆ. 1.0-ಲೀಟರ್ NA ಪೆಟ್ರೋಲ್ ಎಂಜಿನ್ ಜೊತೆಗೆ ಬರುವ ಈ ಕಾರ್ 65.7bhp ಮತ್ತು 89Nm ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು AMT (AGS) ಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದರ ಸ್ವಯಂಚಾಲಿತ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 5.59 ಲಕ್ಷ ರೂಪಾಯಿಗಳು. 

ಮಾರುತಿ ಸುಜುಕಿ ಎಸ್-ಪ್ರೆಸ್ಸೊ: 
ಮಾರುತಿ ಕಂಪನಿಯ ಮತ್ತೊಂದು ಪ್ರಸಿದ್ದ ಹಾಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಕಾರ್ ಎಂದರೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ. ಈ ಕಾರ್ 1.0-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು AMT (AGS) ಆಯ್ಕೆಯೊಂದಿಗೆ ಸಂಯೋಜಿಸುತ್ತದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊದ ಸ್ವಯಂಚಾಲಿತ ರೂಪಾಂತರ ಕಾರ್ ನ ಎಕ್ಸ್ ಶೋ ರೂಂ ಬೆಲೆ 5.76 ಲಕ್ಷ ರೂ.ಗಳು. 

ಇದ್ನನೂ ಓದಿ- Automatic Car ಖರೀದಿಸುವ ಮುನ್ನ ಅದರ ಅನುಕೂಲ, ಅನಾನುಕೂಲಗಳ ಬಗ್ಗೆ ತಪ್ಪದೇ ತಿಳಿಯಿರಿ

Renault Kwid: 
Renault Kwid ಎಂಬ ಹೆಸರಿನ ಆಟೋಮ್ಯಾಟಿಕ್ ಕಾರ್ ಡಬಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 800cc ಯುನಿಟ್ ಮತ್ತು 1.0-ಲೀಟರ್ ಯುನಿಟ್ ಜೊತೆಗೆ ಲಭ್ಯವಿರುವ ಈ ಕಾರ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಚಿಕ್ಕ ಎಂಜಿನ್‌ನೊಂದಿಗೆ ಬರಲಿದೆ. ದೊಡ್ಡ ಎಂಜಿನ್‌ನಲ್ಲಿ AMT ಆಯ್ಕೆಯನ್ನು ಅಳವಡಿಸಲಾಗಿದೆ. ರೆನಾಲ್ಟ್ ಕ್ವಿಡ್‌ನ ಸ್ವಯಂಚಾಲಿತ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 6.12 ಲಕ್ಷ ರೂಪಾಯಿ ಆಗಿದೆ. 

ಮಾರುತಿ ಸುಜುಕಿ ವ್ಯಾಗನ್ಆರ್: 
ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಕಾರ್ ಎಂದೇ ಖ್ಯಾತಿ ಪಡೆದಿರುವ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ಕಾರ್ ಎಂದರೆ ಮಾರುತಿ ಸುಜುಕಿ ವ್ಯಾಗನ್ಆರ್. ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುವ ಈ ಕಾರ್ 1.0-ಲೀಟರ್ ಘಟಕ ಮತ್ತು 1.2-ಲೀಟರ್ ಘಟಕಗಳನ್ನು ಹೊಂದಿದೆ. ಕಾರು 5-ಸ್ಪೀಡ್ MT ಮತ್ತು AMT ಆಯ್ಕೆಯನ್ನು ಪಡೆಯುತ್ತದೆ. ಮಾರುತಿ ಸುಜುಕಿ ವ್ಯಾಗನ್‌ಆರ್‌ನ ಸ್ವಯಂಚಾಲಿತ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 6.55 ಲಕ್ಷ ರೂಪಾಯಿಗಳಾಗಿದೆ. 

ಇದನ್ನೂ ಓದಿ- Top Selling Cars in Pakistan: ಪಾಕಿಸ್ತಾನದಲ್ಲಿ ಮಾರಾಟವಾಗುವ ಟಾಪ್ 5 ಕಾರುಗಳಲ್ಲಿ ಮೂರು ಭಾರತೀಯ ಕಾರುಗಳು 

ಟಾಟಾ ಟಿಯಾಗೊ:
ಮಾರುತಿ ಕಂಪನಿಯ ಕಾರುಗಳನ್ನು ಬಿಟ್ಟರೆ ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರ್ ಎಂದರೆ ಅದುವೇ ಟಾಟಾ ಟಿಯಾಗೊ. ಟಾಟಾ ಟಿಯಾಗೊ ಕಾರ್ 1.2-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು 84bhp ಮತ್ತು 113Nm ಅನ್ನು ಉತ್ಪಾದಿಸುತ್ತದೆ. ಎಂಜಿನ್‌ನೊಂದಿಗೆ 5-ವೇಗದ MT ಮತ್ತು AMT ಆಯ್ಕೆಯನ್ನು ಹೊಂದಿರುವ ಈ ಆಟೋಮ್ಯಾಟಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆ 6.92 ಲಕ್ಷ ರೂಪಾಯಿಗಳಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News