ನವದೆಹಲಿ : ಕೇಂದ್ರ ಬಜೆಟ್ (Budget 2021) ಮಂಡಿಸಲು ಸರ್ಕಾರದ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರತಿ ವರ್ಷದಂತೆ ಕೇಂದ್ರ ಹಣಕಾಸು ಸಚಿವರ ಸಮ್ಮುಖದಲ್ಲಿ  ಹಲ್ವಾ ಸಮಾರಂಭವನ್ನು ನಡೆಸಲಾಯಿತು. ಇದೀಗ ಬಜೆಟ್ ತಯಾರಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಸಂದರ್ಭದಲ್ಲಿ ಹಣಕಾಸು ಸಚಿವರು 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' (Union Budget Mobile App)  ಅನ್ನು ಲಾಂಚ್ ಮಾಡಿದರು. ಈ ಮೊಬೈಲ್ ಅಪ್ಲಿಕೇಶನ್‌ನ ಪರಿಚಯದೊಂದಿಗೆ ಕಾಗದರಹಿತ ಬಜೆಟ್ ಪ್ರಾರಂಭವಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಲಾಗುತ್ತಿದೆ. 'ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್' ಮೂಲಕ ಸಾರ್ವಜನಿಕರಿಗೆ ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ದಾಖಲೆಗಳು ಮತ್ತು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಸರ್ಕಾರದ ಮಹತ್ವದ ನಿರ್ಧಾರ :
ಈ ವರ್ಷ ಕರೋನಾ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಾಗದ ರಹಿತ ಬಜೆಟ್ ಮಂಡಿಸಲು ನಿರ್ಧರಿಸಿದೆ. ಇದಲ್ಲದೆ ಆರ್ಥಿಕ ಸಮೀಕ್ಷೆಯ  (Economic survey) ಮುದ್ರಣವೂ ಇರುವುದಿಲ್ಲ. ಆರ್ಥಿಕ ವಿಮರ್ಶೆಯನ್ನು ಜನವರಿ 29 ರಂದು ಸಂಸತ್ತಿನ ಕೋಷ್ಟಕದಲ್ಲಿ ಇಡಲಾಗುವುದು. ಈ ವರ್ಷ ಈ ಎರಡೂ ದಾಖಲೆಗಳನ್ನು ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾಗುವುದು.


ಇದನ್ನೂ ಓದಿ -  Budget 2021: ಏನಿದು ಹಲ್ವಾ ಸೆರೆಮನಿ? ಬಜೆಟ್ ಪೇಪರ್ ಹೇಗೆ ಮುದ್ರಿಸಲಾಗುತ್ತದೆ?


ಮೊಬೈಲ್ ಅಪ್ಲಿಕೇಶನ್‌ನ ಅನುಕೂಲಗಳು ಇವು :


  • ಈ ಮೊಬೈಲ್ ಅಪ್ಲಿಕೇಶನ್ ಎಲ್ಲಾ ಬಜೆಟ್ (Budget 2021) ದಾಖಲೆಗಳನ್ನು ಒಳಗೊಂಡಿದೆ. ಇದು ವಾರ್ಷಿಕ ಹಣಕಾಸು ಹೇಳಿಕೆ, ಅನುದಾನಕ್ಕಾಗಿ ಬೇಡಿಕೆ, ಹಣಕಾಸು ಮಸೂದೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ.

  • ಈ ಅಪ್ಲಿಕೇಶನ್ ಡೌನ್‌ಲೋಡ್, ಮುದ್ರಣ, ಹುಡುಕಾಟ, ಜೂಮ್ ಇನ್ ಮತ್ತು ಔಟ್, ಬಾಹ್ಯ ಲಿಂಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಇಂಟರ್ಫೇಸ್ ಬಳಕೆದಾರ ಸ್ನೇಹಿಯಾಗಿದೆ.

  • ಈ ಅಪ್ಲಿಕೇಶನ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

  • ಈ ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್ www.indiabudget.gov.in ನಿಂದ ಸಹ ಡೌನ್‌ಲೋಡ್ ಮಾಡಬಹುದು.

  • ಸಂಸತ್ತಿನಲ್ಲಿ ಹಣಕಾಸು ಸಚಿವರು ಮಾಡಿದ ಬಜೆಟ್ ಭಾಷಣ ಪೂರ್ಣಗೊಂಡ ನಂತರ, ಈ ಅಪ್ಲಿಕೇಶನ್‌ನಲ್ಲಿ ಬಜೆಟ್ ದಾಖಲೆಗಳು ಲಭ್ಯವಿರುತ್ತವೆ.


ಇದನ್ನೂ ಓದಿ - Union Budget 2021: ಕೇಂದ್ರದ ಬಜೆಟ್ ಮಂಡನೆಗೆ 'ಮುಹೂರ್ತ ಫಿಕ್ಸ್': ಹಲವು ಸಂಪ್ರದಾಯಗಳಿಗೆ ಬ್ರೇಕ್!


ಬಜೆಟ್ ಅಧಿವೇಶನವು ಜನವರಿ 29 ರಿಂದ ಪ್ರಾರಂಭವಾಗಲಿದೆ :
ಬಜೆಟ್ ಅಧಿವೇಶನದ ಮೊದಲ ಹಂತ ಜನವರಿ 29 ರಿಂದ ಪ್ರಾರಂಭವಾಗಲಿದ್ದು ಫೆಬ್ರವರಿ 15 ಕ್ಕೆ ಕೊನೆಗೊಳ್ಳಲಿದೆ. ಬಜೆಟ್‌ನ ಎರಡನೇ ಅಧಿವೇಶನ ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ರಾಷ್ಟ್ರಪತಿ ಭಾಷಣದೊಂದಿಗೆ ಜನವರಿ 29 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಫೆಬ್ರವರಿ 1 ರಂದು ಬಜೆಟ್ ಮಂಡಿಸಲಾಗುವುದು. ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಎರಡನೇ ಹಂತದ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ. ಅಧಿವೇಶನದಲ್ಲಿ ಕೋವಿಡ್ -19 (Covid 19) ಪ್ರೋಟೋಕಾಲ್ಗೆ ಸರಿಯಾದ ಗಮನ ನೀಡಲಾಗುವುದು ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.