ನವದೆಹಲಿ: ಹಲವು ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಇದೀಗ ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಾಗುವುದು. ಪ್ರತಿ ವರ್ಷದಂತೆ ಈ ವರ್ಷವೂ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಬಾರಿಯ ಬಜೆಟ್(Budget) ಅತ್ಯಂತ ಸವಾನಿಲಿದ್ದಾಗಿದೆ. ಕಾರಣ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಬಜೆಟ್ ಇದಾಗಿದೆ. ಇಷ್ಟೇ ಅಲ್ಲ, ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿರುವ ಈ ಸಂದರ್ಭದಲ್ಲಿ ಬಜೆಟ್ ಮಂಡನೆ ಅತ್ಯಂತ ಸವಾಲನಿಂದ ಕೂಡಿದೆ.
Rahul Gandhi: ಕೇಂದ್ರ ಸರ್ಕಾರದ ವಿರುದ್ಧ 'ವಾಗ್ದಾಳಿ' ನಡೆಸಿದ ರಾಹುಲ್ ಗಾಂಧಿ..!
ಈ ಬಾರಿಯ ಬಜೆಟ್ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ. ದೇಶದ ಆರ್ಥಿಕತೆ ಗಮನದಲ್ಲಿಟ್ಟುಕೊಂಡು ಅತ್ಯಂತ ಸೂಕ್ಷ್ಮ ವಿಚಾರಗಳನ್ನುಚರ್ಚಿಸಿ ಬಡೆಟ್ ಮಂಡಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೃಷಿ ಕಾನೂನುಗಳ ಕುರಿತಾದ ಸುಪ್ರೀಂ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್ ಹೇಳಿದ್ದೇನು?
ಕೊರೋನಾ ವೈರಸ್ ಕಾರಣ ಈ ಬಾರಿ ಬಜೆಟ್ ಪ್ರತಿ ಪ್ರಿಂಟ್ ಮಾಡುತ್ತಿಲ್ಲ. ಹೀಗಾಗಿ ಇ ಕಾಪಿ ಮೂಲಕ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. 2017ರಿಂದ ಕೇಂದ್ರ ಸರ್ಕಾರ ಕೇಂದ್ರದ ಬಜೆಟ್ ಜೊತೆ ರೈಲ್ವೇ ಬಜೆಟ್ ಕೂಡ ವಿಲೀನ ಮಾಡಿದೆ. ಹೀಗಾಗಿ ಕಳೆದ 4 ವರ್ಷಗಳಂತೆ ಈ ಬಾರಿಯೂ ಪ್ರತ್ಯೇಕ ರೈಲ್ವೇ ಬಜೆಟ್ ಇರುವುದಿಲ್ಲ.
BJP: 'ಮುಂದಿನ ತಿಂಗಳು 50 TMC ಶಾಸಕರು ಬಿಜೆಪಿ ಸೇರ್ಪಡೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ