Maruti Brezza SUV  : ಭಾರತದಲ್ಲಿ ಸಬ್-4 ಮೀಟರ್ ಎಸ್‌ಯುವಿ  ಸೆಗ್ಮೆಂಟ್ ನ ಬೇಡಿಕೆ  ಬಹಳಷ್ಟು ಹೆಚ್ಚಾಗಿದೆ. ಈ ವಿಭಾಗದಲ್ಲಿ SUV ಗಳ ಮಾರಾಟ ಕೂಡಾ ಉತ್ತಮವಾಗಿದೆ. ಮಾರುತಿ ಸುಜುಕಿ ಬ್ರೆಝಾ ಈ ವಿಭಾಗದ SUV ಆಗಿದ್ದು, ಉತ್ತಮ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ವರ್ಷ, ಮಾರುತಿ ಸುಜುಕಿ ಬ್ರೆಜ್ಜಾದ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದಾದ ನಂತರ ಈ ಕಾರಿನ ಮಾರಾಟದಲ್ಲಿ ಗಣನೀಯ ಮಟ್ಟದ ಏರಿಕೆ ಕಂಡು ಬಂದಿದೆ. ಕಂಪನಿಯು ಬ್ರೆಝಾ SUV ಅನ್ನು ಬಿಡುಗಡೆ ಮಾಡಿದಾಗಿನಿಂದ, ಇದು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಬ್ರೆಜ್ಜಾದ 2022 ರ ಫೇಸ್‌ಲಿಫ್ಟ್ ಆವೃತ್ತಿಯನ್ನು ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆ ಸುಮಾರು 8 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಆದರೆ, ಈಗ ಕೇವಲ  3.8 ಲಕ್ಷ ರೂಪಾಯಿಗಳಿಗೆ ಈ ಕಾರನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಸೆಕೆಂಡ್ಸ್ ಬ್ರೆಝಾಗಳನ್ನು ನ ಮಾರಾಟಕ್ಕೆ ಇಡಲಾಗಿದೆ.  ಇವುಗಳ ಬೆಲೆ 3.8 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.


COMMERCIAL BREAK
SCROLL TO CONTINUE READING

ಇಲ್ಲಿ ಲಿಸ್ಟ್ ಮಾಡಲಾದ 2017 ಮಾಡೆಲ್ ಮಾರುತಿ ವಿಟಾರಾ ಬ್ರೆಝಾ VDI ಗಾಗಿ 380,000 ರೂಪಾಯಿ ದರವನ್ನು ನಿಹಡಿ ಮಾಡಲಾಗಿದೆ. ಇದು  ಫಸ್ಟ್ ಓನರ್ car ಆಗಿದ್ದು, ಒಟ್ಟು 254684 ಕಿಮೀ ಕ್ರಮಿಸಿದೆ. ಇದು ಡೀಸೆಲ್ ಎಂಜಿನ್ ಕಾರು.


ಇದನ್ನೂ ಓದಿ : BSNL: ಮುಂದಿನ 24 ಗಂಟೆಗಳಲ್ಲಿ ನಿಷ್ಕ್ರೀಯಗೊಳ್ಳಲಿವೆಯಂತೆ ಬಿಎಸ್ಎನ್ಎಲ್ ಸಿಮ್ ಗಳು! ನಿಜಾನಾ?


ಇನ್ನು 2018 ಮಾಡೆಲ್ Vitara Brezza LDI ಅನ್ನು ಕೂಡಾ ಮಾರಾಟಕ್ಕೆ ಇಡಲಾಗಿದೆ. ಇದಕ್ಕೆ 490,000 ರೂಪಾಯಿ ಬೇಡಿಕೆ ಇಡಲಾಗಿದೆ.   ಇದು ಕೂಡಾ ಫಸ್ಟ್ ಓನರ್ ಕಾರು ಆಗಿದ್ದು, ಒಟ್ಟು 90795 ಕಿಮೀ ಕ್ರಮಿಸಿದೆ. ಇದು ಕೂಡಾ ಡೀಸೆಲ್ ಎಂಜಿನ್ ಕಾರಾಗಿದ್ದು, ಇದರ ಮೇಲೆ ಒಂದು ವರ್ಷದ ವಾರಂಟಿ ಕೂಡಾ ಇದೆ. ಈ ಕಾರು ಕೋಲ್ಕತ್ತಾದಲ್ಲಿ ಮಾರಾಟಕ್ಕೆ ಲಭ್ಯವಿದೆ. 


2016 ಮಾಡೆಲ್ Vitara Brezza LDIಗಾಗಿ 530,000 ರೂ ಬೇಡಿಕೆ ಇಡಲಾಗಿದೆ. ಇದು  ಫಸ್ಟ್ ಓನರ್ ಕಾರು ಆಗಿದ್ದು ಒಂದು ಲಕ್ಷ ಕಿ.ಮೀ.ಗೂ ಹೆಚ್ಚು ಓಡಾಟ  ನಡೆಸಿದೆ. ಕಾರು ಡೀಸೆಲ್ ಎಂಜಿನ್ ಹೊಂದಿದ್ದು, ಕುರುಕ್ಷೇತ್ರದಲ್ಲಿ ಮಾರಾಟಕ್ಕೆ ಲಭ್ಯವಿದೆ. 


ಇದನ್ನೂ ಓದಿ :  ಬಂಪರ್ ಆಫರ್ .! ಕೇವಲ 5,490 ರೂ.ಗೆ ಖರೀದಿಸಿ Thomson ವಾಶಿಂಗ್ ಮೆಷಿನ್


2018 ಮಾಡೆಲ್ Vitara Brezza ZDIಗೆ  550000 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಇದು  ಫಸ್ಟ್ ಓನರ್ ಕಾರು ಆಗಿದ್ದು,  83588 ಕಿಮೀ ಓಡಿದೆ. ಕಾರು ಡೀಸೆಲ್ ಎಂಜಿನ್ ಹೊಂದಿದ್ದು, ಗೋರಖ್‌ಪುರದಲ್ಲಿ ಮಾರಾಟಕ್ಕೆ ಲಭ್ಯವಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.