SmartWatch: 90 ಸಾವಿರದ ಆ್ಯಪಲ್ ವಾಚ್‍ಗೆ ಪೈಪೋಟಿ ನೀಡುತ್ತಿರುವ ಅಗ್ಗದ ಸ್ಮಾರ್ಟ್‍ವಾಚ್‍!

Fire Boltt Gladiator: ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ವಾಚ್  ಬಿಡುಗಡೆ ಮಾಡಿದೆ. ಇದು 90 ಸಾವಿರ ರೂ. ಮೌಲ್ಯದ ಆ್ಯಪಲ್ ವಾಚ್ ಅಲ್ಟ್ರಾದಂತೆ ಕಾಣುತ್ತದೆ. ಫೈರ್-ಬೋಲ್ಟ್ ಗ್ಲಾಡಿಯೇಟರ್ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ

Written by - Puttaraj K Alur | Last Updated : Dec 29, 2022, 11:22 AM IST
  • ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ
  • ಈ ಹೊಸ ಸ್ಮಾರ್ಟ್‍ವಾಚ್ ನೋಡಲು Apple Watch Ultraನಂತೆ ಕಾಣುತ್ತದೆ
  • 3 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಈ ಸ್ಮಾರ್ಟ್‍ವಾಚ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ
SmartWatch: 90 ಸಾವಿರದ ಆ್ಯಪಲ್ ವಾಚ್‍ಗೆ ಪೈಪೋಟಿ ನೀಡುತ್ತಿರುವ ಅಗ್ಗದ ಸ್ಮಾರ್ಟ್‍ವಾಚ್‍! title=
Fire Boltt Gladiator

ನವದೆಹಲಿ: ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಇದು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‍ವಾಚ್‍ ಅಲ್ಟ್ರಾ-ಸ್ಲೀಕ್ ಮೆಟಾಲಿಕ್ ಫ್ರೇಮ್‌ನಲ್ಲಿ ಬರುತ್ತದೆ. ಇದು ಬ್ಲೂಟೂತ್ ಕರೆ ಮಾಡುವ ವೈಶಿಷ್ಟ್ಯವನ್ನು ಹೊಂದಿದ್ದು, 1.96-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ರೋಮನ್ ವೀರ ಸೈನಿಕನ ಹೆಸರು(ಗ್ಲಾಡಿಯೇಟರ್)ಹೊಂದಿರುವ ಈ ಸ್ಮಾರ್ಟ್‍ವಾಚ್‍ 90 ಸಾವಿರ ರೂ. ಮೌಲ್ಯದ Apple Watch Ultraನಂತೆ ಕಾಣುತ್ತದೆ. ಫೈರ್-ಬೋಲ್ಟ್ ಗ್ಲಾಡಿಯೇಟರ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.

ಫೈರ್-ಬೋಲ್ಟ್ ಗ್ಲಾಡಿಯೇಟರ್ ವಿಶೇಷಣಗಳು

ಗ್ಲಾಡಿಯೇಟರ್ ವಾಚ್ ಗಾತ್ರದಲ್ಲಿ ದೊಡ್ಡದಾಗಿದ್ದು, 600 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಅಂದರೆ ಡಿಸ್ಪ್ಲೇ ಸೂರ್ಯನ ಪ್ರಕಾಶಮಾನದಲ್ಲಿಯೂ ಚೆನ್ನಾಗಿ ಗೋಚರಿಸುತ್ತದೆ. ವಾಚ್‌ನಲ್ಲಿ 123 ಕ್ರೀಡಾ ವಿಧಾನಗಳು ಲಭ್ಯವಿವೆ. ಹೊಸ ವರ್ಷದ ಸಂದರ್ಭದಲ್ಲಿ ಈ ವಾಚ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ವಾಚ್ ಸಂಪೂರ್ಣವಾಗಿ ಜಲನಿರೋಧಕ, ಧೂಳು ಮತ್ತು ಸ್ಕ್ರಾಚ್ ನಿರೋಧಕವಾಗಿದೆ. ಇದು ಬಜೆಟ್ ಸ್ಮಾರ್ಟ್ ವಾಚ್ ಆಗಿದ್ದು, ಇದರ ಬೆಲೆ 3 ಸಾವಿರ ರೂ.ಗಿಂತಲೂ ಕಡಿಮೆಯಿದೆ. ಈ ಸ್ಮಾರ್ಟ್ ವಾಚ್ ಶಕ್ತಿಯುತ ಅಂತರ್ಗತ ಸ್ಪೀಕರ್‌ನಿಂದ ಬೆಂಬಲಿತವಾಗಿದೆ, ಇದು ಬಳಕೆದಾರರು ಪ್ರಯಾಣದಲ್ಲಿರುವಾಗ ಕರೆಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿಹಳೆ ಟಿವಿಯನ್ನು ಕೂಡಾ ಸುಲಭವಾಗಿ ಸ್ಮಾರ್ಟ್ ಟಿವಿಯನ್ನಾಗಿ ಪರಿವರ್ತಿಸಬಹುದು.!

ಫೈರ್-ಬೋಲ್ಟ್ ಗ್ಲಾಡಿಯೇಟರ್ ಬ್ಯಾಟರಿ

ಫೈರ್-ಬೋಲ್ಟ್ ಗ್ಲಾಡಿಯೇಟರ್ ಶಕ್ತಿಯುತ ಬ್ಯಾಟರಿಯೊಂದಿಗೆ ಬರುತ್ತದೆ. 7 ದಿನಗಳ ಸುದೀರ್ಘ ಬ್ಯಾಟರಿಯ ಈ ಸ್ಮಾರ್ಟ್ ವಾಚ್ ತ್ವರಿತ ಚಾರ್ಜಿಂಗ್ ಬೆಂಬಲಿಸುತ್ತದೆ. 10 ನಿಮಿಷಗಳ ಕಾಲ ಚಾರ್ಜ್ ಮಾಡಿದ್ರೆ ಸುಮಾರು 24 ಗಂಟೆಗಳವರೆಗೆ ಬಳಸಬಹುದು. ಇದು 5 ಜಿಪಿಎಸ್ ನೆರವಿನ ಮೋಡ್‌ಗಳನ್ನು ಹೊಂದಿದೆ (ರನ್ನಿಂಗ್, ಸೈಕ್ಲಿಂಗ್, ವಾಕಿಂಗ್, ಆನ್ ಫುಟ್ ಮತ್ತು ಟ್ರಯಲ್). ಇದು ಅಂತರ್ಗತ ಆಟಗಳು, ಕ್ಯಾಲ್ಕುಲೇಟರ್, ಹವಾಮಾನ ಅಪ್‌ಡೇಟ್‌ಗಳು, ಡ್ರಿಂಕ್ ವಾಟರ್ ರಿಮೈಂಡರ್, ಅಲಾರಾಂ ಮತ್ತು ಕ್ಯಾಮೆರಾ ನಿಯಂತ್ರಣಗಳನ್ನು ಹೊಂದಿದೆ. ಇದರ ನವೀಕರಿಸಿದ ಆರೋಗ್ಯ ಸೂಟ್ ನಿಮ್ಮ ಹೃದಯ ಬಡಿತ, SpO2 ಮತ್ತು ಋತುಚಕ್ರವನ್ನು ಟ್ರ್ಯಾಕ್ ಮಾಡುತ್ತದೆ. ಹೀಗಾಗಿ ಅಂಗೈಯಲ್ಲಿಯೇ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.

ಫೈರ್-ಬೋಲ್ಟ್ ಗ್ಲಾಡಿಯೇಟರ್ ಬೆಲೆ

ಸ್ಮಾರ್ಟ್ ವಾಚ್ ಡಿಸೆಂಬರ್ 30ರಿಂದ Amazon.in ಮತ್ತು Fire-Bolt ವೆಬ್‌ಸೈಟ್‌ನಲ್ಲಿ 2,499 ರೂ,ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದನ್ನು 4 ಬಣ್ಣಗಳಲ್ಲಿ (ಕಪ್ಪು, ನೀಲಿ, ಬ್ಲ್ಯಾಕ್ ಗೋಲ್ಡ್ ಮತ್ತು ಗೋಲ್ಡ್) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Online Shopping ಮಾಡುವಾಗ ಎಚ್ಚರ.! ಬಂದಿದೆ ಹೊಸ ಸ್ಕ್ಯಾಮ್ , ಒಂದೇ ಏಟಿನಲ್ಲಿ ಖಾಲಿಯಾಗುವುದು ಖಾತೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News