Miಯ 32 ಇಂಚಿನ Smart TVಯನ್ನು ಕೇವಲ 4 ಸಾವಿರ ರೂಪಾಯಿಗಳಿಗೆ ಖರೀದಿಸಿ, ಇಲ್ಲಿದೆ Offers
ಫ್ಲಿಪ್‌ಕಾರ್ಟ್‌ನಲ್ಲಿ ಟಿವಿ ಡೇಸ್ ಮಾರಾಟ ಪ್ರಾರಂಭವಾಗಿದೆ. ಡಿಸೆಂಬರ್ 1 ರಿಂದ ಡಿಸೆಂಬರ್ 3 ರವರೆಗೆ ಈ ಸೇಲ್ ನಡೆಯಲಿದೆ. Mi ಯ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಈ ಸೇಲ್ ನಲ್ಲಿ ಖರೀದಿಸಬಹುದು. ಇದರಲ್ಲಿ ಕೇವಲ 4 ಸಾವಿರ ರೂಪಾಯಿಗೆ ಈ ಟಿವಿಯನ್ನು ಖರೀದಿಸಬಹುದು.
ನವದೆಹಲಿ : Flipkart TV Days: ಫ್ಲಿಪ್‌ಕಾರ್ಟ್ ಟಿವಿ ಡೇಸ್ ಸೇಲ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭಿಸಲಾಗಿದೆ. ಈ ಸೇಲ್ ಡಿಸೆಂಬರ್ 1 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ ಟಿವಿಯನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. Mi, OnePlus, Realme ಮತ್ತು Samsung ನ ಸ್ಮಾರ್ಟ್ ಟಿವಿಗಳಲ್ಲಿ ಉತ್ತಮ ಕೊಡುಗೆಗಳನ್ನು ಕೂಡಾ ಪಡೆಯಬಹುದು. ಹಳೆಯ ಟಿವಿಯನ್ನು ಬದಲಾಯಿಸಿ, ಹೊಸ ಟಿವಿ ಖರೀದಿ ಬಗ್ಗೆ ಯೋಚಿಸುತ್ತಿದ್ದರೆ ಇದು ಅತ್ಯಂತ ಉತ್ತಮ ಅವಕಾಶವಾಗಿರಲಿದೆ. Mi ಯ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಅಂದರೆ ಕೇವಲ 4 ಸಾವಿರ ರೂಪಾಯಿಗೆ ಈ ಟಿವಿಯನ್ನು ಖರೀದಿಸಬಹುದಾಗಿದೆ.
Mi 4A Pro 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು :
Mi 4A Pro 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಲಾಂಚಿಂಗ್ ಬೆಲೆ 19,999 ರೂ. ಆದರೆ ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ (Flipkart sale), ಟಿವಿಯಲ್ಲಿ 20% ರಷ್ಟು ರಿಯಾಯಿತಿ ಸಿಗಲಿದೆ. ಅಂದರೆ, ಈ ಟಿವಿ 15,999 ರೂ.ಗೆ ಲಭ್ಯವಿದೆ. ಆದರೆ ಬ್ಯಾಂಕ್ ಕೊಡುಗೆಗಳು (bank offer) ಮತ್ತು ವಿನಿಮಯ ಕೊಡುಗೆಗಳ ಮೂಲಕ, ಈ ಟಿವಿಯನ್ನು ಇನ್ನು ಕಡಿಮೆ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Reliance Jio Smart TV: ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳುಳ್ಳ ದೊಡ್ಡ ಸ್ಕ್ರೀನ್ ನ ಸ್ಮಾರ್ಟ್ ಟಿವಿ
Mi 4A Pro 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಮೇಲೆ ಬ್ಯಾಂಕ್ ಕೊಡುಗೆಗಳು :
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, 800 ರೂ. ಗಳ ರಿಯಾಯಿತಿ ಸಿಗುತ್ತದೆ. ಅಂದರೆ, ಸ್ಮಾರ್ಟ್ ಟಿವಿ ಬೆಲೆ 15,199 ರೂ.ಗೆ ಇಳಿಯುತ್ತದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ (Exchange offer) ಕೂಡ ಇದ್ದು, ಅದನ್ನೂ ಬಳಸಿದರೆ ಟಿವಿಯ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.
Mi 4A Pro 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯಲ್ಲಿ ವಿನಿಮಯ ಕೊಡುಗೆ :
Mi 4A Pro 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯಲ್ಲಿ 11 ಸಾವಿರದ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ (Discount) ಪಡೆಯಬಹುದು. ಹಳೆಯ ಟಿವಿಯ ಸ್ಥಿತಿ ಉತ್ತಮವಾಗಿದ್ದು, ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ 11 ಸಾವಿರದವರೆಗೆ ರಿಯಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. ಹೀಗೆ ಎಲ್ಲಾ ರಿಯಾಯಿತಿಗಳನ್ನು ಪಡೆಯುವುದು ಸಾಧ್ಯವಾದರೆ 4,199 ರೂ.ಗೆ ಸ್ಮಾರ್ಟ್ ಟಿವಿಯನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ : ADAS ಬಗ್ಗೆ ನಿಮಗೆಷ್ಟು ತಿಳಿದಿದೆ? ವಾಹನ ಚಲಾಯಿಸುವವರು ಇದನ್ನು ತಿಳಿಯಲೇಬೇಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.