ನವದೆಹಲಿ: Advanced Driver Assistance System - ಇಂದಿನ ಯುಗದಲ್ಲಿ ವಾಹನ ಸುರಕ್ಷತೆಯು ವಾಹನ ತಯಾರಕರು ಹಾಗೂ ಗ್ರಾಹಕರ ಮೊದಲ ಆದ್ಯತೆಯಾಗಿದೆ. ಕಾರುಗಳ ಸುರಕ್ಷತೆಯನ್ನು ಹೆಚ್ಚಿಸುವ ಹೊಸ ತಂತ್ರಜ್ಞಾನಗಳನ್ನು ವಾಹನ ಉದ್ಯಮವು ಪರಿಚಯಿಸುತ್ತಿದೆ. ಈ ತಂತ್ರಜ್ಞಾನಗಳಲ್ಲಿ ADAS ಅಂದರೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಕೂಡ ಒಂದು. ಈ ನೆರವು ವ್ಯವಸ್ಥೆಯು ರಸ್ತೆ ಅಪಘಾತಗಳನ್ನು ತಡೆಯುತ್ತದೆ. ಅನೇಕ ತಂತ್ರಜ್ಞಾನಗಳು ADAS ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ, ಇದರಿಂದಾಗಿ ಚಾಲಕನು ಹತ್ತಿರದ ವಾಹನಗಳು, ಪಾದಚಾರಿಗಳು, ಲೇನ್‌ನಿಂದ ನಿರ್ಗಮಿಸುವ ಮತ್ತು ಮುಂಭಾಗದ ಡಿಕ್ಕಿಯ ಬಗ್ಗೆ ಮಾಹಿತಿ ನೀಡಲಿದೆ. ಇಲ್ಲಿ ನಾವು ನಿಮಗೆ ADAS ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (Adoptive Cruise Control)
ಇದೊಂದು ಇಂಟೆಲಿಜೆನ್ಸ್ ವ್ಯವಸ್ಥೆಯಾಗಿದ್ದು (Intellegence System), ಇದು ರಸ್ತೆಯಲ್ಲಿ ಚಲಿಸುವ ಇತರ ವಾಹನಗಳಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕಾರಿನ ವೇಗವು ಸ್ವಯಂಚಾಲಿತವಾಗಿ ಹೆಚ್ಚುತ್ತಲೇ ಇರುತ್ತದೆ. ಈ ವ್ಯವಸ್ಥೆಯು ಅನೇಕ ಸಂವೇದಕಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ರಾಡಾರ್ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗುತ್ತದೆ. ಈ ವ್ಯವಸ್ಥೆಯು ನೇರವಾಗಿ ಎಂಜಿನ್‌ಗೆ ಸಂಪರ್ಕ ಹೊಂದಿದೆ ಮತ್ತು ಅಗತ್ಯವಿದ್ದಾಗ, ಚಾಲಕ ಗಮನ ಹರಿಸದಿದ್ದರೂ ಸಹ ಕಾರಿನ ಬ್ರೇಕ್‌ಗಳು ಸ್ವಯಂಚಾಲಿತವಾಗಿ ಅನ್ವಯಿಸಲ್ಪಡುತ್ತವೆ.
ಲೇನ್ ಡಿಪಾರ್ಚರ್ ವಾರ್ನಿಂಗ್ (Lane Departure Warning)
ಚಾಲನೆ ಮಾಡುವಾಗ ಚಾಲಕ ನಿದ್ರಾಸ್ಥಿತಿಯನ್ನು ತಲುಪಿದಾಗ ಅಥವಾ ರಸ್ತೆಯ ಮೇಲೆ ಆತನ ಗಮನ ಕಡಿಮೆಯಾದಾಗ ಇದು ಲೇನ್ ಡಿಪಾರ್ಚರ್ ವಾರ್ನಿಂಗ್ ಅಲರ್ಟ್ ನೀಡುತ್ತದೆ. ಕಾರಿನ ಮುಂಭಾಗದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ, ಲೇನ್ ಮೇಲೆ ನಿಗಾವಹಿಸುತ್ತದೆ ಮತ್ತು ಕಾರು ಒಂದು ಲೇನ್ ಬಿಟ್ಟು ಮತ್ತೊಂದು ಲೇನ್‌ಗೆ ಚಲಿಸಲು ಆರಂಭಿಸುತ್ತದೆ. ಈ ತಂತ್ರಜ್ಞಾನವು ಚಾಲಕನನ್ನು ಎಚ್ಚರಿಸುತ್ತದೆ.
ಫಾರ್ವರ್ಡ್ ಕೊಲಿಜನ್ ವಾರ್ನಿಂಗ್ ಸಿಸ್ಟಮ್ (Forward Collision Warning System)
ಚಾಲಕನ ಗಮನ ಇಲ್ಲದಿದ್ದ ಸಂದರ್ಭಗಳಲ್ಲಿ ಈ ವ್ಯವಸ್ಥೆಯು ಮುಂದಿನಿಂದ ಆಗುವ ಡಿಕ್ಕಿಯನ್ನು ಗ್ರಹಿಸುತ್ತದೆ ಮತ್ತು ಅದರ ಬಗ್ಗೆ ಚಾಲಕನಿಗೆ ತಿಳಿಸುತ್ತದೆ. ಆಧುನಿಕ ವಾಹನಗಳಲ್ಲಿ, ಈ ವ್ಯವಸ್ಥೆಯು ರಾಡಾರ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎಚ್ಚರಿಕೆಯ ನಂತರವೂ, ಚಾಲಕ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಕಾರು ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಇದಲ್ಲದೇ ಲೇಸರ್ ತಂತ್ರಜ್ಞಾನದ ಸಹಾಯದಿಂದ ಚಲಿಸುವ ವಾಹನದ ವೇಗ ಏಕಾಏಕಿ ಕಡಿಮೆಯಾದಾಗಲೂ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬರುತ್ತದೆ.
ಇದನ್ನೂ ಓದಿ-ಕೇಳಲು ವಿಚಿತ್ರ ಎನಿಸಬಹುದು ಆದರೆ... Omicronನಿಂದ Petrol-Diesel ಬೆಲೆ ಇಳಿಕೆ ಸಾಧ್ಯತೆ!
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (Tyre Pressure Monitoring System)
ಭಾರತದಲ್ಲಿ ಟೈರ್ ಸ್ಫೋಟಗಳು ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಕಾರಣವಾಗುತ್ತವೆ ಮತ್ತು ಈಗ ಹೊಸ ತಂತ್ರಜ್ಞಾನದ ಸಹಾಯದಿಂದ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು. ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನವಾಗಿದೆ ಮತ್ತು ಕಾರಿನ ನಿರಂತರ ಚಲನೆಯಿಂದಾಗಿ ಟೈರ್‌ಗಳ ಮೇಲಿನ ಒತ್ತಡವು ಹೆಚ್ಚಾದಾಗ, ಈ ವ್ಯವಸ್ಥೆಯು ಚಾಲಕನಿಗೆ ಮಾಹಿತಿಯನ್ನು ರವಾನಿಸುತ್ತದೆ. ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಭಾರತದಲ್ಲಿನ ಕಾರುಗಳಿಗೆ ಕಡ್ಡಾಯಗೊಳಿಸಲಾಗುವುದು.
ಇದನ್ನೂ ಓದಿ-ಈ ಗ್ರಹದ ಸಂಪೂರ್ಣ ಒಂದು ವರ್ಷದ ಅವಧಿ ಭೂಮಿಯ 16ಗಂಟೆಗೆ ಸಮ, ವಿಜ್ಞಾನಿಗಳು ಹೇಳಿದ್ದೇನು?
ಪಾರ್ಕಿಂಗ್ ಅಸಿಸ್ಟ್ ಸಿಸ್ಟಮ್ (Parking Assist System)
ಪಾರ್ಕಿಂಗ್ ಸಹಾಯಕ ವ್ಯವಸ್ಥೆಯು ADAS ನ ಭಾಗವಾಗಿದೆ ಮತ್ತು ಈ ವೈಶಿಷ್ಟ್ಯವನ್ನು MG ಗ್ಲೋಸ್ಟರ್ ಮತ್ತು ಸಿಟ್ರೊಯೆನ್ C5 ನೊಂದಿಗೆ ನೀಡಲಾಗಿದೆ. ಇದರಲ್ಲಿ, ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಅಲ್ಟ್ರಾಸಾನಿಕ್ ಸಂವೇದಕಗಳನ್ನು ಸ್ಥಾಪಿಸಲಾಗಿದೆ, ಇದು ವಾಹನ ಪಾರ್ಕಿಂಗ್ ಸಮಯದಲ್ಲಿ ಏನಾದರೂ ಸಮೀಪಿಸಿದಾಗ ಚಾಲಕನನ್ನು ಎಚ್ಚರಿಸುತ್ತದೆ. ಕಾರಿನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾವು ಪಾರ್ಕಿಂಗ್ ಸಮಯದಲ್ಲಿ ಚಾಲಕನಿಗೆ ದೃಶ್ಯಗಳನ್ನು ತೋರಿಸುತ್ತದೆ, ಇದು ಪಾರ್ಕಿಂಗ್ ತುಂಬಾ ಸುಲಭಗೊಳಿಸುತ್ತದೆ.
ಇದನ್ನೂ ಓದಿ-Kharmas 2021 - ಈ 30 ದಿನಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ, ಕಾರಣ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.