Flipkartನಲ್ಲಿ 50 ಇಂಚಿನ Smart TV ಮೇಲೆ ಸಿಗುತ್ತಿದೆ 40 ಸಾವಿರ ರೂ. ಗಳ ರಿಯಾಯಿತಿ

iFFALCON ನ  ಈ 50-ಇಂಚಿನ ಸ್ಮಾರ್ಟ್ ಟಿವಿಯನ್ನು 58,990 ರೂ. ಬದಲಿಗೆ 30,999 ರೂ.ಗೆ ಖರೀದಿಸಬಹುದು. ICICI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರ ಮೂಲಕ ಇದರ ಮೇಲೆ 1,250 ರ ರಿಯಾಯಿತಿಯನ್ನು ಪಡೆಯಬಹುದು. 

Written by - Ranjitha R K | Last Updated : Nov 25, 2021, 04:48 PM IST
  • flipkartನಲ್ಲಿ ಸ್ಮಾರ್ಟ್ ಟಿವಿ ಮೇಲೆ ಸಿಗುತ್ತಿದೆ ಭರ್ಜರಿ ಆಫರ್
  • 40 ಸಾವಿರ ರೂ.ಗಳವರೆಗೆ ಸಿಗಲಿದೆ ರಿಯಾಯಿತಿ
  • 50 ಇಂಚಿನ Smart TV ಮೇಲೆ ಡಿಸ್ಕೌಂಟ್
Flipkartನಲ್ಲಿ 50 ಇಂಚಿನ  Smart TV  ಮೇಲೆ ಸಿಗುತ್ತಿದೆ 40 ಸಾವಿರ ರೂ. ಗಳ ರಿಯಾಯಿತಿ  title=
flipkartನಲ್ಲಿ ಸ್ಮಾರ್ಟ್ ಟಿವಿ ಮೇಲೆ ಸಿಗುತ್ತಿದೆ ಭರ್ಜರಿ ಆಫರ್ (file photo)

ನವದೆಹಲಿ : ನೀವು ಉತ್ತಮ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ, ನಿಮಗಾಗಿ ಕೆಲವು ಅದ್ಭುತ ಆಫರ್ ಗಳು ಇಲ್ಲಿವೆ.  ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ  50-ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. 

iFFALCON ಅಲ್ಟ್ರಾ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 

iFFALCON अल्ट्रा एचडी एलईडी स्मार्ट एंड्रॉयड टीवी

iFFALCON ನ  ಈ 50-ಇಂಚಿನ ಸ್ಮಾರ್ಟ್ ಟಿವಿಯನ್ನು 58,990 ರೂ. ಬದಲಿಗೆ 30,999 ರೂ.ಗೆ ಖರೀದಿಸಬಹುದು. ICICI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರ ಮೂಲಕ ಇದರ ಮೇಲೆ 1,250 ರ ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಕೊಡುಗೆಯೊಂದಿಗೆ ಮತ್ತೆ  11,000 ರೂ. ವರೆಗೆ ಲಾಭವಾಗಲಿದೆ. ಒಟ್ಟಾರೆಯಾಗಿ ಈ ಟಿವಿ ಮೇಲೆ 40,241 ರೂಪಾಯಿಗಳ ರಿಯಾಯಿತಿ ಪಡೆಯಬಹುದು. 

 
ಇದನ್ನೂ ಓದಿ : OPPO EV: 2024ರಲ್ಲಿ ಭಾರತದಲ್ಲಿ ಓಡಾಡಲಿವೆ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್?

Mi 5X ಅಲ್ಟ್ರಾ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 

Mi 5X अल्ट्रा एचडी एलईडी स्मार्ट एंड्रॉयड टीवी

Mi ಯ  50-ಇಂಚಿನ ಸ್ಮಾರ್ಟ್ ಟಿವಿ Dolby Atmos ಮತ್ತು Dolby Vision ನೊಂದಿಗೆ ಬರುತ್ತದೆ. ಇದನ್ನೂ 59,999 ಬದಲಿಗೆ,  41,999 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಫ್ಲಿಪ್‌ಕಾರ್ಟ್(Flipkart)  ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 2,100 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ 11 ಸಾವಿರದವರೆಗೆ ಉಳಿತಾಯ ಮಾಡಬಹುದು. 

Samsung ಕ್ರಿಸ್ಟಲ್ ಅಲ್ಟ್ರಾ HD LED ಸ್ಮಾರ್ಟ್ ಟಿವಿ 

सैमसंग क्रिस्टल अल्ट्रा एचडी एलईडी स्मार्ट टीवी

ಈ Samsung Smart TV ಬೆಲೆ 68,400 ರೂ. ಆದರೆ ನೀವು ಇದನ್ನು 48,990 ರೂ.ಗೆ ಖರೀದಿಸಬಹುದು. ICICI ಕ್ರೆಡಿಟ್ ಕಾರ್ಡ್‌ ಮೂಲಕ ಪಾವತಿಸಿದರೆ, 1,250 ರೂಗಳ ರಿಯಾಯಿತಿಯನ್ನು (Discount) ಪಡೆಯಬಹುದು. ಹಳೆಯ ಟಿವಿಗೆ ಬದಲಾಗಿ ನೀವು ಅದನ್ನು ಖರೀದಿಸಿದರೆ 11 ಸಾವಿರದವರೆಗೆ ಉಳಿಸಬಹುದು. ಈ ರೀತಿಯಾಗಿ ನೀವು ಈ ಟಿವಿಯನ್ನು 36,740 ರೂ.ಗೆ ಖರೀದಿಸಬಹುದು. 

ಫಿಲಿಪ್ಸ್ 8200 ಸರಣಿ ಅಲ್ಟ್ರಾ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ

फिलिप्स 8200 सीरीज अल्ट्रा एचडी एलईडी स्मार्ट एंड्रॉयड टीवी  

ಫಿಲಿಪ್ಸ್‌ನ ಈ ಸ್ಮಾರ್ಟ್ ಟಿವಿ ಕೂಡ 50-ಇಂಚಿನದ್ದಾಗಿದೆ. ಇದನ್ನು 46% ರಿಯಾಯಿತಿಯ ನಂತರ  42,999 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಆದರೆ ಇದರ ಮೂಲ ಬೆಲೆ 79,990  ರೂ ಆಗಿದೆ. ICICI ಕ್ರೆಡಿಟ್ ಕಾರ್ಡ್ (Credit card) ಬಳಸುವ ಮೂಲಕ, ಇದರ ಮೇಲೆ 1,250 ರೂಪಾಯಿಗಳನ್ನು ಉಳಿಸಬಹುದು. ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಮತ್ತೆ 11 ಸಾವಿರದವರೆಗೆ ರಿಯಾಯಿತಿಯನ್ನು ಪಡೆಯಬಹುದು. 

ಇದನ್ನೂ ಓದಿ : Joker Virus: ನಿಮ್ಮ ಫೋನ್ ದೋಚಲು ಬಂದಿದ್ದಾನೆ ಜೋಕರ್, ಈ 14 ಅಪ್ಲಿಕೇಶನ್‌ಗಳನ್ನು ತಕ್ಷಣ ಅಳಿಸಿ

LG ಅಲ್ಟ್ರಾ HD LED ಸ್ಮಾರ್ಟ್ ಟಿವಿ 

LG अल्ट्रा एचडी एलईडी स्मार्ट टीवी

LG ಯ ಈ 50-ಇಂಚಿನ ಸ್ಮಾರ್ಟ್ ಟಿವಿ ಬೆಲೆ  64,990 ರೂ. ಆದರೆ  ಇದನ್ನು ಫ್ಲಿಪ್‌ಕಾರ್ಟ್‌ನಿಂದ  58,999 ರೂ.ಗೆ ಖರೀದಿಸಬಹುದು.  ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಪೇಮೆಂಟ್ ಮಾಡಿದರೆ 1,250 ರೂಗಳ ರಿಯಾಯಿತಿ ಸಿಗಲಿದೆ.  ಹಳೆಯ ಟಿವಿಗೆ ಬದಲಿಗೆ ಖರೀದಿಸುವುದಾದರೆ 11 ಸಾವಿರ ರೂಪಾಯಿಗಳವರೆಗೆ ಉಳಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News