SIM Card New Rules : ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಕಟ್ಟುನಿಟ್ಟಾದ ನಿಲುವನ್ನು ಜಾರಿಗೆ ತಂದಿದೆ. ಜನವರಿ 1 ರಿಂದ ಅಂದರೆ ಇಂದಿನಿಂದ ಸಿಮ್ ಖರೀದಿಸುವ ನಿಯಮಗಳು ಬದಲಾಗಿವೆ. ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿ ಜನರು ನಿರಂತರವಾಗಿ ವಂಚನೆಗೊಳಗಾಗುತ್ತಿರುವ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಿದೆ. ಆದರೆ, ಹೊಸ ವರ್ಷದಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಿಮ್ ಖರೀದಿಸಲು ಹೊಸ ನಿಯಮ ಜಾರಿಗೆ ತಂದಿರುವುದರಿಂದ ನಕಲಿ ಸಿಮ್ ಕಾರ್ಡ್‌ಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಇಂದಿನಿಂದ ಸಂಪೂರ್ಣ ಬದಲಾಗಲಿವೆ ನಿಯಮಗಳು : 
ಜನವರಿ 1ರಿಂದ ಸಿಮ್ ಕಾರ್ಡ್ ಖರೀದಿಸಲು, ವರ್ಚುವಲ್ ಕೆವೈಸಿ ಮಾಡಬೇಕಾಗುತ್ತದೆ. ವರ್ಚುವಲ್ ಕೆವೈಸಿ  ಮಾಡಿಸಿದ ನಂತರವೇ ಸಿಮ್ ಕಾರ್ಡ್ ಖರೀದಿಸಲು ಸಾಧ್ಯವಾಗುತ್ತದೆ. ಹೀಗೆ ಮಾಡುವುದರಿಂದ ನಕಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ಸೈಬರ್ ವಂಚನೆ ಮತ್ತು ನಕಲಿ ಸಿಮ್ ಕಾರ್ಡ್‌ಗಳ ಮೂಲಕ ನಿರಂತರವಾಗಿ ನಡೆಸಲಾಗುತ್ತಿರುವ ವಂಚನೆಗಳನ್ನು ತಡೆಯಲಾಗುತ್ತದೆ. 


ಇದನ್ನೂ ಓದಿ : ಒಂದು ವರ್ಷದ ಮಾನ್ಯತೆ, 850ಜಿಬಿ ಡೇಟಾ, 200 ಟಿವಿ ಚಾನೆಲ್ ಗಳ ಉಚಿತ ವೀಕ್ಷಣೆ ಇಲ್ಲಿದೆ ಅದ್ಭುತ ರಿಚಾರ್ಜ್ ಯೋಜನೆ!


ಸಿಮ್ ಸೆಲ್ ಪಾಯಿಂಟ್  :
ಸರ್ಕಾರ ಆರಂಭಿಸಿರುವ ಈ ಎನ್‌ಐಎ ಈಗ ಸಿಮ್ ಮಾರಾಟಗಾರರ ಮೇಲೆಯೂ ನಿಗಾ ಇಡಲಿದೆ. ಸಿಮ್ ಮಾರಾಟಗಾರನು ಸಿಮ್ ಕಾರ್ಡ್ ಮಾರಾಟದ ಸ್ಥಳದ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. ಭವಿಷ್ಯದಲ್ಲಿ ಅಂತಹ ವಂಚನೆಯ  ಪ್ರಕರಣ ಬೆಳಕಿಗೆ ಬಂದರೆ, ಸಿಮ್ ಸೆಲ್ ಪಾಯಿಂಟ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತದೆ. ಇದು ತನಿಖೆಯ ಹಾದಿಯನ್ನು ಸುಧಾರಿಸುತ್ತದೆ. 


ನೋಂದಾಯಿಸುವ ಪ್ರಕಿಯೆ ಬಹಳ ಮುಖ್ಯ:  
ಮಾಹಿತಿಯ ಪ್ರಕಾರ, ಜನವರಿ 1, 2024 ರಿಂದ ಜಾರಿಗೆ ಬರುತ್ತಿರುವ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ಹೊಸ ನಿಯಮಗಳ ಅಡಿಯಲ್ಲಿ, ಈಗ ಫ್ರಾಂಚೈಸಿಗಳು, ವಿತರಕರು, ಪಾಯಿಂಟ್ ಆಫ್ ಸೇಲ್ ಏಜೆಂಟ್‌ಗಳು, ಎಲ್ಲರೂ ತಮ್ಮನ್ನು  ರಿಜಿಸ್ಟ್ರೇಶನ್ ಮಾಡಿಸುವುದು ಅನಿವಾರ್ಯ. ಟೆಲಿಕಾಂ ಡೀಲರ್‌ಗಳು ಮತ್ತು ಏಜೆಂಟ್‌ಗಳು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಂದು ವರ್ಷದವರೆಗೆ ಸಮಯಾವಕಾಶವಿರುತ್ತದೆ. ಈ ಸಮಯದೊಳಗೆ ಅವರು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. 


ಇದನ್ನೂ ಓದಿ : ಇಸ್ರೋದ ಎಜಿಇಒಎಸ್: ಅಂಟಾರ್ಕ್‌ಟಿಕಾದ ರಿಮೋಟ್ ಸೆನ್ಸಿಂಗ್ ನೇತೃತ್ವ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.