Cheap and Best Bike: ಭಾರತೀಯ ಮಾರುಕಟ್ಟೆಯಲ್ಲಿ ಯುವಕರಲ್ಲಿ ಕಾರುಗಳ ಜೊತೆಗೆ ಬೈಕ್‌ಗಳ ಕ್ರೇಜ್ ಕೂಡಾ ಹೆಚ್ಚಿದೆ.   ದೇಶದ ಹೆಚ್ಚಿನ ಜನರು  ಕಡಿಮೆ ದೂರದ ಪ್ರಯಾಣ ಮತ್ತು ದೈನಂದಿನ ಜೀವನಕ್ಕಾಗಿ ದ್ವಿಚಕ್ರ ವಾಹನಗಳನ್ನೇ ಬಳಸುತ್ತಾರೆ. ಈ ಕಾರಣಕ್ಕೆ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಿಗೆ ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದು ನಾವು ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. 


COMMERCIAL BREAK
SCROLL TO CONTINUE READING

ಉತ್ತಮ ಮೈಲೇಜ್ ನೀಡುವ ಬೈಕ್ ಗಳು : 
ಟಿವಿಎಸ್ ಸ್ಪೋರ್ಟ್ : 
ಟಿವಿಎಸ್ ಸ್ಪೋರ್ಟ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಈ ಬೈಕ್ ಅನ್ನು ಯುವಕರು ಹೆಚ್ಚು ಇಷ್ಟಪಡುತ್ತಾರೆ. ಈ ಬೈಕ್‌ನಲ್ಲಿ 109.7cc BS6 ಎಂಜಿನ್ ಲಭ್ಯವಿದ್ದು, ಇದು 8.18 bhp ಮತ್ತು 8.7 NM ಟಾರ್ಕ್ ಅನ್ನು  ಜನರೆಟ್ ಮಾಡುತ್ತದೆ. ಇದು ಎರಡು ಡ್ರಮ್ ಬ್ರೇಕ್ ಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಈ ಬೈಕ್  ಮೂರು ರೂಪಾಂತರಗಳು ಮತ್ತು ಏಳು ಬಣ್ಣಗಳಲ್ಲಿ ಸಿಗುತ್ತದೆ. 10 ಲೀಟರ್ ಇಂಧನ ಟ್ಯಾಂಕ್ ಅನ್ನು ಈ ಬೈಕ್ ಹೊಂದಿದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ  61,025 ರೂಪಾಯಿಯಿಂದ ಆರಂಭವಾಗಿ  67,530 ರೂಪಾಯಿವರೆಗೆ ಏರುತ್ತದೆ.  ಇದು 70kmpl ಮೈಲೇಜ್  ನೀಡುತ್ತದೆ. 


ಇದನ್ನೂ ಓದಿ : Solar Fan: ಈ ಬಿರು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು ಬಂದಿದೆ ಸೋಲಾರ್ ಫ್ಯಾನ್, ಬೆಲೆ ಕೂಡ ಕಡಿಮೆ


Hero HF Deluxe :
Hero HF Deluxe 97.2cc BS6 ಎಂಜಿನ್ ಅನ್ನು ಹೊಂದಿದ್ದು, ಇದು 7.91bhp ಪವರ್ ಮತ್ತು 8.05Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಅದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಮಾರುಕಟ್ಟೆಯಲ್ಲಿ ಈ ಬೈಕ್ ನ 5 ರೂಪಾಂತರಗಳು ಮತ್ತು 10 ಬಣ್ಣಗಳಲ್ಲಿ ಲಭ್ಯವಿದೆ. ಇದು 9.1 ಲೀಟರ್ ಇಂಧನ ಟ್ಯಾಂಕ್ ನೊಂದಿಗೆ ಬರುತ್ತದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 55,022 ರೂಪಾಯಿಯಿಂದ ಆರಂಭವಾಗಿ 67,178 ರೂಪಾಯಿವರೆಗೆ ಏರುತ್ತದೆ. ಈ ಬೈಕ್  65kmpl ಮೈಲೇಜ್ ನೀಡುತ್ತದೆ. 


ಹೋಂಡಾ SP 125 :
ಹೋಂಡಾ SP 125 ಬೈಕ್ 124cc BS6 ಎಂಜಿನ್ ನೊಂದಿಗೆ ಬರುತ್ತಿದ್ದು, ಇದು 10.72bhp ಪವರ್ ಮತ್ತು 10.9NM ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳೊಂದಿಗೆ  ಕಂಬೈನ್ಡ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಬೈಕ್ ಎರಡು ವೆರಿಯಂಟ್‌ಗಳಲ್ಲಿ ಬರುತ್ತಿದ್ದು,  5 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 11 ಲೀಟರ್ ಇಂಧನ ಟ್ಯಾಂಕ್ ಅನ್ನು ಪಡೆಯುತ್ತದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ  83,088 ರಿಂದ  ಆರಂಭವಾಗಿ  69702 ರೂಪಾಯಿವರೆಗೆ ಇದೆ. ಇದು 65kmpl ಮೈಲೇಜ್  ನೀಡುತ್ತದೆ. 


ಇದನ್ನೂ ಓದಿ : ಕರೆಂಟ್ ಹೋದರೂ ನಡೆಯುತ್ತದೆ ಈ ಫ್ಯಾನ್ ! ಅಗ್ಗದ ಬೆಲೆಯಲ್ಲಿ ತಂಪು ಗಾಳಿ ನೀಡುತ್ತದೆ Pocket Fan


Honda Livo :
Honda Livo ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕ್  4 ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ. ಇದು 109.51cc BS6 ಎಂಜಿನ್ ಅನ್ನು ಪಡೆಯುತ್ತದೆ. ಇದು 8.67bhp ಮತ್ತು 9.30Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. ಕಂಬೈನ್ಡ್  ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಪಡೆದುಕೊಂಡಿದೆ. ಈ ಬೈಕ್‌ನಲ್ಲಿ 9 ಲೀಟರ್ ಇಂಧನ ಟ್ಯಾಂಕ್ ಲಭ್ಯವಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 75,659 ರೂಪಾಯಿ ಆಗಿದೆ. ಇದು 60kmpl ಮೈಲೇಜ್ ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.