ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಇವು ! ಒಮ್ಮೆ ಟ್ಯಾಂಕ್ ತುಂಬಿಸಿದರೆ ತಿಂಗಳು ಪೂರ್ತಿ ಓಡಾಡಬಹುದು !
Fuel Efficient Bikes:ಹೆಚ್ಚಿನ ಮೈಲೇಜ್ ಮೋಟಾರ್ ಸೈಕಲ್‌ಗಳು ಸಾಮಾನ್ಯವಾಗಿ ಹಗುರವಾಗಿರುತ್ತವೆ.ಇವುಗಳಲ್ಲಿ ಗ್ರಾಹಕರು ತೆಳುವಾದ ಟೈರ್‌ಗಳನ್ನು ಪಡೆಯುತ್ತಾರೆ.
Fuel Efficient Bikes : ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ಸೇವಾ ವೆಚ್ಚದ ದೃಷ್ಟಿಯಿಂದ,ಜನರು ಈಗ ಹೆಚ್ಚು ಇಂಧನ ದಕ್ಷತೆಯನ್ನು ನೀಡುವ ಮೋಟಾರ್‌ಸೈಕಲ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ.ಈ ಮೋಟಾರ್‌ಸೈಕಲ್‌ಗಳ ರೇಂಜ್ ಭಾರತದಲ್ಲಿ ಲಭ್ಯವಿದೆ.
ಬಜಾಜ್ ಪ್ಲಾಟಿನಾ 100 :
ಬಜಾಜ್ ಪ್ಲಾಟಿನಾ 100 102 ಸಿಸಿ, ಸಿಂಗಲ್-ಸಿಲಿಂಡರ್, ಡಿಟಿಎಸ್-ಐ ಎಂಜಿನ್ ಹೊಂದಿದ್ದು, ಇದು 7.79 ಬಿಎಚ್‌ಪಿ ಪವರ್ ಮತ್ತು 8.34 ಎನ್ಎಂ ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ, ಇದು 72 kmpl, 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.ಇದರ ಬೆಲೆ 61,617 - 66,440 ನಡುವೆ ಬರುತ್ತದೆ.
ಇದನ್ನೂ ಓದಿ : 75 ಇಂಚಿನ Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು !
ಟಿವಿಎಸ್ ಸ್ಪೋರ್ಟ್ (TVS Sport) :
ಟಿವಿಎಸ್ ಸ್ಪೋರ್ಟ್ 109.7 ಸಿಸಿ, ಬಿಎಸ್ 6 ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಆಗಿದೆ. ಇದನ್ನು ಟಿವಿಎಸ್ ಮೋಟಾರ್ ಕಂಪನಿ ತಯಾರಿಸಿದೆ.ಇದು ಇಂಧನ ದಕ್ಷತೆ,ಕೈಗೆಟುಕುವ ಬೆಲೆ ಮತ್ತು ಆರಾಮದಾಯಕ ಸವಾರಿಗಾಗಿ ಹೆಸರುವಾಸಿಯಾಗಿದೆ.ಇದರ ಮೈಲೇಜ್ 70 kmpl.ಈ ಮೋಟಾರ್‌ಸೈಕಲ್‌ನ ಎಂಜಿನ್ ಹೇಗಿದೆ ಎಂದು ನೋಡುವುದಾದರೆ ಗ್ರಾಹಕರು 109.7cc,ಸಿಂಗಲ್-ಸಿಲಿಂಡರ್, SOHC, ಏರ್-ಕೂಲ್ಡ್ ಎಂಜಿನ್ ಅನ್ನು ಪಡೆಯುತ್ತಾರೆ. ಇದು 8.07 PS ಪವರ್ ಮತ್ತು 8.4 Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ.ಜೊತೆಗೆ ಇದು 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಮೋಟಾರ್ ಸೈಕಲ್ ನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನೂ ನೀಡಲಾಗಿದೆ. ಇದರ ಬೆಲೆ 59,881 - 71,223 ನಡುವೆ ಇದೆ.
ಹೆಚ್ಚಿನ ಮೈಲೇಜ್ ಮೋಟಾರ್ ಸೈಕಲ್‌ಗಳು ಸಾಮಾನ್ಯವಾಗಿ ಹಗುರವಾಗಿರುತ್ತವೆ.ಇವುಗಳಲ್ಲಿ ಗ್ರಾಹಕರು ತೆಳುವಾದ ಟೈರ್‌ಗಳನ್ನು ಪಡೆಯುತ್ತಾರೆ. ತೆಳುವಾದ ಟೈರ್‌ಗಳಿಂದಾಗಿ,ಎಂಜಿನ್‌ನಲ್ಲಿ ಕಡಿಮೆ ಒತ್ತಡವಿರುತ್ತದೆ ಮತ್ತು ಮೋಟಾರ್‌ಸೈಕಲ್ ಗರಿಷ್ಠ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ : Reliance Jioದ ಈ ಅದ್ಭುತ ರಿಚಾರ್ಜ್ ಯೋಜನೆಯಲ್ಲಿ ನಿತ್ಯ 2GB ಡಾಟಾ ಜೊತೆಗೆ ಫ್ರೀ ಆಗಿ ಸಿಗುತ್ತೆ Amazon Prime
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.