75 ಇಂಚಿನ Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು !

ಕಂಪನಿಯು ಸುಧಾರಿತ AI ವೈಶಿಷ್ಟ್ಯಗಳೊಂದಿಗೆ 75-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ.  

Written by - Ranjitha R K | Last Updated : Jul 16, 2024, 05:24 PM IST
  • ಹೊಸ QLED ಟಿವಿ ಸರಣಿ ಮತ್ತು ಸೆಮಿ ಅಟೋಮ್ಯಾಟಿಕ್ ವಾಶಿಂಗ್ ಮೆಷಿನ್ ಬಿಡುಗಡೆ ಮಾಡಿದ ಥಾಮ್ಸನ್
  • AI ವೈಶಿಷ್ಟ್ಯಗಳೊಂದಿಗೆ 75-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್ ಟಿವಿ
  • ಎಷ್ಟಿದೆ ನೋಡಿ ಈ ಟಿವಿ ಬೆಲೆ
75 ಇಂಚಿನ  Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು ! title=

ಬೆಂಗಳೂರು : ಥಾಮ್ಸನ್ ತನ್ನ ಹೊಸ QLED ಟಿವಿ ಸರಣಿ ಮತ್ತು ಸೆಮಿ ಅಟೋಮ್ಯಾಟಿಕ್ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿಯ ವಾಶಿಂಗ್ ಮೆಷಿನ್ ಅನ್ನು ಬಿಡುಗಡೆ ಮಾಡಿದೆ.ಕಂಪನಿಯು ಸುಧಾರಿತ AI ವೈಶಿಷ್ಟ್ಯಗಳೊಂದಿಗೆ 75-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ.ಈ ಸ್ಮಾರ್ಟ್ ಟಿವಿಗಳು ಜುಲೈ 19 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.75 ಇಂಚಿನ QLED ಸ್ಮಾರ್ಟ್ ಟಿವಿ ಬೆಲೆ 79,999 ರೂಪಾಯಿ ಆಗಿದ್ದರೆ, 32 ಇಂಚಿನ ಮಾದರಿಯ ಬೆಲೆ 11,499 ರೂ.

Thomson QLED TVs :
ಥಾಮ್ಸನ್ ನ 75-ಇಂಚಿನ QLED ಸ್ಮಾರ್ಟ್ ಟಿವಿ 4K ಡಿಸ್ಪ್ಲೇ ಮತ್ತು ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಬರುತ್ತದೆ.ಇದು Dolby Vision HDR 10+, Dolby Atmos, Dolby Digital Plus, DTS TrueSurround ಗೆ ಬೆಂಬಲವನ್ನು ಹೊಂದಿದೆ. 40 ವ್ಯಾಟ್ ಡಾಲ್ಬಿ ಆಡಿಯೊ ಸ್ಟಿರಿಯೊ ಬಾಕ್ಸ್ ಸ್ಪೀಕರ್, 2 GB RAM, 16 GB ROM ಮತ್ತು ಡ್ಯುಯಲ್ ಬ್ಯಾಂಡ್ (2.4 + 5 GHz) Wi-Fi ಮತ್ತು Google TV ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು Netflix, Prime Video, Hotstar, Zee5, Apple TV, Voot, Sony Liv ಮತ್ತು Google Play Store ನಂತಹ ಪ್ಲಾಟ್‌ಫಾರ್ಮ್‌ಗಳಿಂದ 500,000 ಟಿವಿ ಶೋಗಳೊಂದಿಗೆ 10,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್ ಗಳನ್ನೂ  ಹೊಂದಿದೆ.

ಇದನ್ನೂ ಓದಿ : Reliance Jioದ ಈ ಅದ್ಭುತ ರಿಚಾರ್ಜ್ ಯೋಜನೆಯಲ್ಲಿ ನಿತ್ಯ 2GB ಡಾಟಾ ಜೊತೆಗೆ ಫ್ರೀ ಆಗಿ ಸಿಗುತ್ತೆ Amazon Prime

32-ಇಂಚಿನ ಮಾದರಿಯು ವೇಗವಾದ 1366 x 768 ಪಿಕ್ಸೆಲ್ ರೆಸಲ್ಯೂಶನ್ ಮತ್ತು 550 ನಿಟ್ಸ್ ಬ್ರೈಟ್ ನೆಸ್ ಅನ್ನು ಹೊಂದಿದೆ.Google ನ Android TV ಯಲ್ಲಿ ಚಾಲನೆಯಲ್ಲಿರುವ ಈ ಟಿವಿ Netflix, YouTube, Disney+Hotstar ಮತ್ತು Prime Videoಗಳನ್ನು ಸುಲಭವಾಗಿ ರನ್ ಮಾಡುತ್ತದೆ.ಇದು ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, Wi-Fi ಮತ್ತು Dolby Digital Plus ಸೌಂಡ್ ತಂತ್ರಜ್ಞಾನದೊಂದಿಗೆ 48 ವ್ಯಾಟ್‌ಗಳ ಉತ್ಪಾದನೆಯನ್ನು ಹೊಂದಿದೆ.

Thomson Washing Machine : 
ಥಾಮ್ಸನ್ ಅವರ ಹೊಸ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿನಲ್ಲಿ 7 ಕೆಜಿ, 8 ಕೆಜಿ, 8.5 ಕೆಜಿ, 10 ಕೆಜಿ ಮತ್ತು 12 ಕೆಜಿ  ಸೆಮಿ ಆಟೋಮ್ಯಾಟಿಕ್  ವಾಶಿಂಗ್ ಮೆಷಿನ್ ಅನ್ನು ಒಳಗೊಂಡಿದೆ. ಈ ಹೊಸ ವಾಷಿಂಗ್ ಮೆಷಿನ್‌ಗಳ ಬೆಲೆ 8,999 ರೂ.ನಿಂದ ಪ್ರಾರಂಭವಾಗುತ್ತದೆ. ಇದು ಕೂಡಾ ಜುಲೈ 19 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ : ನನ್ನ ಹೆಂಡ್ತಿ ಹಿಸ್ಟರಿ ಚೆಕ್ ಮಾಡ್ತಾಳೆ ಅಂತ ಗೋಳಾಡ್ತಿದ್ದ ಗಂಡಂದಿರ ಮನವಿಗೆ ಸ್ಪಂದಿಸಿದ ಜೊಮ್ಯಾಟೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News