Jio Recharge Plan: ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ವೋಡಾಫೋನ್-ಐಡಿಯಾ, ರಿಲಯನ್ಸ್ ಜಿಯೋ ಜುಲೈ ಮೊದಲ ವಾರದಲ್ಲಿ ರಿಚಾರ್ಜ್ ಯೋಜನೆಗಳ ಬೆಲೆ ಏರಿಸುವ ಮೂಲಕ ಗ್ರಾಹಕರ ಟೆನ್ಷನ್ ಹೆಚ್ಚಿಸಿವೆ. ಜಿಯೋ ಕಂಪನಿ ಯೋಜನೆಗಳ ಬೆಲೆ 25% ವರೆಗೆ ಹೆಚ್ಚಿಸಲಾಗಿದ್ದು ದುಬಾರಿ ಯೋಜನೆಗಳಿಂದಾಗಿ ಗ್ರಾಹಕರ ಜೇಬಿನ ಹೊರೆ ಹೆಚ್ಚಾಗಿದೆ. ಆದಾಗ್ಯೂ, ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೆಚ್ಚಿನ ಮಾನ್ಯತೆ ಜೊತೆಗೆ 84 ದಿನಗಳವರೆಗೆ ಓಟಿಟಿ ಅನ್ನು ಆನಂದಿಸುವ ಅವಕಾಶವನ್ನು ನೀಡಿದೆ. ಯಾವುದೀ ಯೋಜನೆ ಎಂದು ನೋಡುವುದಾದರೆ...
ರಿಲಯನ್ಸ್ ಜಿಯೋದ ಅದ್ಭುತ 84 ದಿನಗಳ ರಿಚಾರ್ಜ್ ಪ್ಲಾನ್:
ಹೌದು, ರಿಲಯನ್ಸ್ ಜಿಯೋ (Reliance Jio) 84 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಯೋಜನೆಯನ್ನು ನೀಡುತ್ತದೆ. 1029ರೂ.ಗಳ ಈ ಯೋಜನೆಯಲ್ಲಿ ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ- ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards
1029ರೂ.ಗಳ ಯೋಜನೆಯಲ್ಲಿ ಏನೆಲ್ಲಾ ಸೌಲಭ್ಯಗಳು ಲಭ್ಯವಿವೆ?
ಜಿಯೋದ 1029ರೂ.ಗಳ ರಿಚಾರ್ಜ್ ಯೋಜನೆಯು (Jio Rs 1029 Recharge Plan) 84ದಿನಗಳವರೆಗೆ ಲಭ್ಯವಿರುವ ದೀರ್ಘಾವಧಿಯ ಯೋಜನೆಯಾಗಿದೆ. ಇದರಲ್ಲಿ ಗ್ರಾಹಕರು 84 ದಿನಗಳವರೆಗೆ ಅನಿಯಮಿತ ಕರೆ ಸೌಲಭ್ಯದೊಂದಿಗೆ ಪ್ರತಿದಿನ ಉಚಿತ 100 ಎಸ್ಎಂಎಸ್ ಪಡೆಯಬಹುದು. ಇದರೊಂದಿಗೆ ನಿತ್ಯ 2ಜಿಬಿ ಡೇಟಾ ( 84 ದಿನಗಳಲ್ಲಿ 168GB ಡೇಟಾ) ಪಡೆಯುತ್ತಾರೆ. ಅಮೆಜಾನ್ ಪ್ರೈಮ್ ಜೊತೆಗೆ ಹಲವು ಓಟಿಟಿ ಚಂದಾದಾರಿಕೆಯೂ ಉಚಿತವಾಗಿದೆ.
ಇದನ್ನೂ ಓದಿ- ಏರುತ್ತಿರುವ ರಿಚಾರ್ಜ್ ಪ್ಲಾನ್ ಬೆಲೆ ನಡುವೆ BSNL ನೀಡುತ್ತಿದೆ ಕೇವಲ 185 ರೂ.ಗೆ 2GB ಡೈಲಿ ಡೇಟಾ
ಯಾವೆಲ್ಲಾ ಓಟಿಟಿ ಚಂದಾದಾರಿಕೆ ಲಭ್ಯ:
ಜಿಯೋದ 1029ರೂ.ಗಳ ರಿಚಾರ್ಜ್ ಯೋಜನೆಯಲ್ಲಿ 84 ದಿನಗಳವರೆಗೆ ಚಂದಾದಾರರಿಗೆ ಅಮೆಜಾನ್ ಪ್ರೈಮ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದರೊಂದಿಗೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೌಲಭ್ಯಗಳು ಸಹ ಲಭ್ಯವಿರುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.