ಬುಲೆಟ್ ನಷ್ಟೇ ಈ ಕಾರಿನ ಬೆಲೆ ! ಮೈಲೇಜ್ 33 KMಗಿಂತ ಹೆಚ್ಚು
Cheapest Car Maruti :ಕಳೆದ ತಿಂಗಳು, ಕಂಪನಿಯ ಕೈಗೆಟುಕುವ ಕಾರು ಮಾರಾಟದ ವಿಷಯದಲ್ಲಿ ವ್ಯಾಗನರ್-ಸ್ವಿಫ್ಟ್ ಸೇರಿದಂತೆ ಎಲ್ಲಾ ಜನಪ್ರಿಯ ಕಾರುಗಳನ್ನು ಬದಿಗಟ್ಟಿದೆ.
ಬೆಂಗಳೂರು : ಕಾರು ಖರೀದಿ ವಿಚಾರ ಬಂದಾಗ ಬಹುತೇಕ ಭಾರತೀಯ ಗ್ರಾಹಕರ ಮೊದಲ ಆಯ್ಕೆ ಮಾರುತಿ ಸುಜುಕಿ. ಮೊದಲ ಬಾರಿಗೆ ಕಾರು ಖರೀದಿಸುವವರು ಈ ಕಂಪನಿ ಮೇಲೆ ತಮ್ಮ ನಂಬಿಕೆಯನ್ನು ತೋರಿಸುತ್ತಾರೆ. ಕಳೆದ ತಿಂಗಳು, ಕಂಪನಿಯ ಕೈಗೆಟುಕುವ ಕಾರು ಮಾರಾಟದ ವಿಷಯದಲ್ಲಿ ವ್ಯಾಗನರ್-ಸ್ವಿಫ್ಟ್ ಸೇರಿದಂತೆ ಎಲ್ಲಾ ಜನಪ್ರಿಯ ಕಾರುಗಳನ್ನು ಬದಿಗಟ್ಟಿದೆ.
ಮಾರುತಿ ಸುಜುಕಿಯ ಆಲ್ಟೊ ಹಲವು ವರ್ಷಗಳಿಂದ ಭಾರತದಲ್ಲಿ ಸಾಮಾನ್ಯ ಜನರ ಕಾರು ಎಂದೇ ಖ್ಯಾತಿ ಪಡೆದಿದೆ. ಜನವರಿಯಲ್ಲಿ, ಕಂಪನಿಯು ಆಲ್ಟೊದ ಒಟ್ಟು 21,411 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಆಲ್ಟೊ 800 ಮತ್ತು ಆಲ್ಟೊ ಕೆ10 ಎಂಬ ಎರಡು ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಬೆಲೆಗಳು ಕ್ರಮವಾಗಿ 3.53 ಲಕ್ಷ ಮತ್ತು3.99 ಲಕ್ಷದಿಂದ ಪ್ರಾರಂಭವಾಗುತ್ತವೆ. ಕಂಪನಿಯು ಕಳೆದ ವರ್ಷ Alto K10 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂದಿನಿಂದ, ಆಲ್ಟೊ ಸರಣಿಯ ಮಾರಾಟದಲ್ಲಿ ದೊಡ್ಡ ಜಿಗಿತ ಕಂಡುಬಂದಿದೆ.
ಇದನ್ನೂ ಓದಿ : Coming Soon: ಎರಡಲ್ಲ ಒಟ್ಟು 4 ಹೊಸ ಕಾರು ಬಿಡುಗಡೆಗೆ ಸಿದ್ಧವಾಗಿದೆ ಈ ಭಾರತೀಯ ಕಂಪನಿ!
ಕಳೆದ ವರ್ಷ ಬಿಡುಗಡೆಯಾದ ಹೊಸ ಆಲ್ಟೊ K10, ಒಟ್ಟು 4 ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅವುಗಳೆಂದರೆ Std (O), LXi, VXi, ಮತ್ತು VXi+. ಈ ಕಾರು 6 ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಕಂಪನಿಯು ಇತ್ತೀಚೆಗೆ ತನ್ನ ಕಪ್ಪು ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಆಲ್ಟೊ ಕೆ10 ನ ಟಾಪ್ ಎಂಡ್ ಮಾಡೆಲ್ ಎಕ್ಸ್ ಶೋ ರೂಂ ಬೆಲೆ 5.95 ಲಕ್ಷ ರೂ. ಇದು 1000cc ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. CNG ಕಿಟ್‌ನೊಂದಿಗೆ ಬರುವ ಈ ಕಾರು 33km ಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ.
ವೈಶಿಷ್ಟ್ಯಗಳು ಏನಿವೆ :
ಕೈಗೆಟುಕುವ ದರದಲ್ಲಿ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಈ ಕಾರು ಬರುತ್ತದೆ. ಇದು Apple CarPlay ಮತ್ತು Android Auto ಗೆ ಬೆಂಬಲದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಹ್ಯಾಚ್‌ಬ್ಯಾಕ್ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಮತ್ತು ಮಾನ್ಯುವೆಲ್ ರೂಪದಲ್ಲಿ ಅಡ್ಜಸ್ಟೇಬಲ್ ORVM ಗಳನ್ನು ಸಹ ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಕಾರು ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ : ಏರೋ ಇಂಡಿಯಾ 2023ರಲ್ಲಿ ಗಮನ ಸೆಳೆದ ಎಫ್-35: ಬಹುಪಾತ್ರಗಳ ಯುದ್ಧ ವಿಮಾನ ಗುತ್ತಿಗೆಯ ಪರಿಣಾಮಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.