Upcoming cng cars in india : ಭಾರತದಲ್ಲಿ ಡೀಸೆಲ್ ಕಾರುಗಳನ್ನು ಕ್ರಮೇಣವಾಗಿ ಬಂದ್ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ಕಾರುಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ CNG ಸುಸಜ್ಜಿತ ಕಾರುಗಳು ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿರಲಿದೆ. ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಬಿಎಸ್ 6 ಸ್ಟೆಪ್ 2 ಮಾನದಂಡಗಳ ಪರಿಚಯದೊಂದಿಗೆ, ಇನ್ನೂ ಹೆಚ್ಚಿನ ಡೀಸೆಲ್ ಕಾರುಗಳು ಹಂತಹಂತವಾಗಿ ಬಂದ್ ಆಗಲಿವೆ. ಈ ನಡುವೆ, CNG ಆಯ್ಕೆಯೊಂದಿಗೆ ಕೈಗೆಟುಕುವ ದರದಲ್ಲಿ ಮೂರು SUVಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ.
1. ಮಾರುತಿ ಫ್ರಾಂಕ್ಸ್ ಸಿಎನ್‌ಜಿ :
ಮಾರುತಿ ಸುಜುಕಿ ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಿದೆ. ಇದು CNG ಆವೃತ್ತಿಯಲ್ಲಿಯೂ ಬರಲಿದೆ. ಫ್ರಾಂಕ್ಸ್ ಸಿಎನ್‌ಜಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಅದು ಪೆಟ್ರೋಲ್ ಮೋಡ್‌ನಲ್ಲಿ 90 ಎಚ್‌ಪಿ ಮತ್ತು 113 ಎನ್‌ಎಂ ಮತ್ತು ಸಿಎನ್‌ಜಿ ಮೋಡ್‌ನಲ್ಲಿ 77 ಎಚ್‌ಪಿ ಮತ್ತು 98.5 ಎನ್‌ಎಂ ಅನ್ನು ಡೆವೆಲಪ್ ಮಾಡಲಿದೆ. ಇದನ್ನು ಐದು- ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಜೋಡಿಸಬಹುದು. ಸಿಎನ್‌ಜಿ ಆವೃತ್ತಿಯಲ್ಲಿ ಬರುವ ನಾಲ್ಕನೇ ನೆಕ್ಸಾ ಕಾರು ಇದಾಗಿರಲಿದೆ. ಇದರ ಬೆಲೆ ಪೆಟ್ರೋಲ್ ಮಾದರಿಗಿಂತ ಸುಮಾರು 1 ಲಕ್ಷ ರೂ. ಅಧಿಕವಾಗಿರಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಎಲ್ಲಾ ಕಾರುಗಳನ್ನು ಹಿಂದಿಕ್ಕಿದೆ 3.5 ಲಕ್ಷ ಬೆಲೆಯ ಈ ಕಾರು! ಮಾರಾಟದಲ್ಲಿ 150% ಹೆಚ್ಚಳ
2. ಮಾರುತಿ ಸುಜುಕಿ ಬ್ರೆಝಾ CNG:
ಮಾರುತಿ ಬ್ರೆಝಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿಯ ಬ್ರೆಝಾ ಶೀಘ್ರದಲ್ಲೇ CNG ಅವತಾರದಲ್ಲಿ ಮಾರಾಟಕ್ಕೆ ಕಾಲಿಡಲಿದೆ. ಇದನ್ನು 2023 ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು. ಇದು 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಮಾತ್ರ ಲಭ್ಯವಿರುತ್ತದೆ.
3. ಟಾಟಾ ಪಂಚ್ ಸಿಎನ್‌ಜಿ:
ಟಾಟಾ ಪಂಚ್ ಸಿಎನ್‌ಜಿಯನ್ನು ಕಳೆದ ತಿಂಗಳು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಇದನ್ನು 2023 ರಲ್ಲಿ ಪ್ರಾರಂಭಿಸಲಾಗುವುದು. ಪಂಚ್ ಸಿಎನ್‌ಜಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಟ್ವಿನ್ ಸಿಲಿಂಡರ್ ತಂತ್ರಜ್ಞಾನವನ್ನು ಇದರಲ್ಲಿ ನೀದಿರುವುದು ಈ ಕಾರಿನ ಬಹು ದೊಡ್ಡ ವೈಶಿಷ್ಟ್ಯ. ಇದರಲ್ಲಿ, 60 ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
ಇದನ್ನೂ ಓದಿ : ಹೊಸ ಅವತಾರದಲ್ಲಿ ರೋಡಿಗಿಳಿದ ಮಾರುತಿಯ ಈ Luxury ಕಾರು! ಬೆಲೆ ಎಷ್ಟು ಇಲ್ಲಿದೆ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.