Cheapest Recharge: ಕೇವಲ 22 ರೂ.ಗಳಲ್ಲಿ 90 ದಿನಗಳ ವ್ಯಾಲಿಡಿಟಿ, ಈ ಟೆಲಿಕಾಂ ಕಂಪನಿಯ ಯೋಜನೆ ಮುಂದೆ ಏರ್‌ಟೆಲ್-ವಿಐ ಫೇಲ್
BSNL Recharge Plan: ಇಂದು ನಾವು ನಿಮಗೆ ಮಾಹಿತಿ ನೀಡಲು ಹೊರಟಿರುವ ರಿಚಾರ್ಜ್ ಯೋಜನೆಗಳಲ್ಲಿ ಕಂಪನಿಯು ನಿಮಗೆ ಅತ್ಯಂತ ಅಗ್ಗದ ಬೆಲೆಯಲ್ಲಿ 90 ದಿನಗಳ ವ್ಯಾಲಿಡಿಟಿ ನೀಡುತ್ತಿದೆ. ಈ ಯೋಜನೆಯ ಇತರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
BSNL Cheapest Reacharge Plan With High Validity - ಅತ್ಯಂತ ಕೈಗೆಟಗುವ ದರದಲ್ಲಿ ಬಳಕೆದಾರರಿಗೆ ಅತಿ ಹೆಚ್ಚಿನ ಲಾಭ ನೀಡುವ ಟೆಲಿಕಾಂ ಕಂಪನಿಗಳಲ್ಲಿ BSNL ಮುಂಚೂಣಿಯಲ್ಲಿದೆ. BSNL ಕಂಪನಿಯು ತನ್ನ ಬಳಕೆದಾರರಿಗೆ ಅತ್ಯಲ್ಪ ಬೆಲೆಯಲ್ಲಿ ಅನೇಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ತರುತ್ತದೆ, ಈ ಯೋಜನೆಗಳು ಬಳಕೆದಾರರಿಗೆ ಹಲವು ಪ್ರಯೋಜನಗಳನ್ನು ನೀಡುತ್ತವೆ. ಇಂದು ನಾವು ನಿಮಗೆ ಕಂಪನಿಯ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇದರಲ್ಲಿ ಕಂಪನಿಯು ನಿಮಗೆ 90 ದಿನಗಳ ಮಾನ್ಯತೆಯನ್ನು ಅತ್ಯಂತ ಅಲ್ಪ ಬೆಲೆಯಲ್ಲಿ ಒದಗಿಸುತ್ತಿದೆ. ಬೆಲೆಯಲ್ಲಿ ಒದಗಿಸುತ್ತಿದೆ.
BSNL ನ ಈ ರೀಚಾರ್ಜ್ ಯೋಜನೆಯ ಬಗ್ಗೆ ಹೇಳುವ ಮೊದಲು, ಖಾಸಗಿ ಟೆಲಿಕಾಂ ಕಂಪನಿಗಳ 90 ದಿನಗಳ ಮಾನ್ಯತೆಯ ಯೋಜನೆಗಳ ಕುರಿತು ಮಾತನಾಡೋಣ. Jio ಮತ್ತು Vi (Vodafone Idea) ನ ಪ್ರಿಪೇಯ್ಡ್ ರೀಚಾರ್ಜ್ ಪೋರ್ಟ್‌ಫೋಲಿಯೊದಲ್ಲಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಯಾವುದೇ ರೀಚಾರ್ಜ್ ಯೋಜನೆ ಇಲ್ಲ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಇನ್ನೊಂದೆಡೆ, ಏರ್‌ಟೆಲ್ ಕಂಪನಿಯು 90 ದಿನಗಳ ಮಾನ್ಯತೆಯೊಂದಿಗೆ 3 ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ, ಆದರೆ, ಅವೆಲ್ಲವೂ ಕೂಡ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳಾಗಿವೆ. ಅವುಗಳ ಬೆಲೆ 5000 ರೂಪಾಯಿಗಳಿಗಿಂತ ಹೆಚ್ಚು. ಕಂಪನಿ ರೂ. 666ಕ್ಕೆ 84 ದಿನಗಳ ಮಾನ್ಯತೆಯೊಂದಿಗೆ ಒಂದು ಯೋಜನೆಯನ್ನು ಚಲಾಯಿಸುತ್ತಿದೆ.
BSNLನ ಅತ್ಯಂತ ಅಗ್ಗದ 90 ದಿನಗಳ ವ್ಯಾಲಿಡಿಟಿಯ ಯೋಜನೆ
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಬಳಕೆದಾರರಿಗೆ ಕೇವಲ 22 ರೂಗಳ ರೀಚಾರ್ಜ್ ಯೋಜನೆಯಲ್ಲಿ 90 ದಿನಗಳ ಮಾನ್ಯತೆಯನ್ನು ಒದಗಿಸುತ್ತದೆ. ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಛೋಟಾ ರೀಚಾರ್ಜ್ ಯೋಜನೆಯಲ್ಲಿ ಕೇವಲ ಕರೆ ಮಾಡುವ ಪ್ರಯೋಜನವನ್ನು ಮಾತ್ರ ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ, ಕಂಪನಿಯು ಸ್ಥಳೀಯ ಮತ್ತು STD ಧ್ವನಿ ಕರೆಗಳಿಗೆ ಪ್ರತಿ ನಿಮಿಷಕ್ಕೆ 30p ಶುಲ್ಕ ವಿಧಿಸುತ್ತದೆ. ಇದರ ಹೊರತಾಗಿ, ಡೇಟಾ ಮತ್ತು SMS ಪ್ರಯೋಜನಗಳನ್ನು ಯೋಜನೆಯಲ್ಲಿ ಸೇರಿಸಲಾಗಿಲ್ಲ. ನೀವು ಮಾನ್ಯತೆಗಾಗಿ ಮಾತ್ರ ಅಗ್ಗದ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ, ಈ ಯೋಜನೆಯು ನಿಮಗೆ ಉತ್ತಮವಾಗಿದೆ ಯೋಜನೆ ಸಾಬೀತಾಗಲಿದೆ ಮತ್ತು ಇದರ ಮೇಲೆ ನೀವು ಡೇಟಾ ಬಳಕೆಗೆ ಟಾಪ್ ಅಪ್ ಯೋಜನೆಗಳನ್ನು ಬಳಸಬಹುದು.
ಇದನ್ನೂ ಓದಿ-Smartphone Tips: ನಿಮ್ಮೀ ತಪ್ಪುಗಳು ನಿಮ್ಮ ಸ್ಮಾರ್ಟ್ ಫೋನ್ ಜೀವಿತಾವಧಿಗೆ ಮಾರಕ, ಎಚ್ಚರ!
ಈ ಬೆಲೆಯಲ್ಲಿ ಈ Jio-Airtel-Vi ಯಾವ ಯೋಜನೆಯನ್ನು ಚಲಾಯಿಸುತ್ತಿವೆ?
ಈ ಬೆಲೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳನ್ನು ನೀವು ನೋಡಿದರೆ, ಜಿಯೋ ಕಂಪನಿಯು 25 ರೂಗಳ ರೀಚಾರ್ಜ್ ಯೋಜನೆಯನ್ನು ಚಲಾಯಿಸುತ್ತದೆ. ರೂ 25 ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಕೇವಲ 2GB ಡೇಟಾವನ್ನು ನೀಡಲಾಗುತ್ತದೆ. ಆದರೆ, ಇದು ಕೇವಲ ಆಡ್-ಆನ್ ಡೇಟಾ ಪ್ಯಾಕ್ ಮಾತ್ರ ಎಂಬುದನ್ನು ಇಲ್ಲಿ ಗಮನಿಸಬೇಕಾದ ಅಂಶ, ಇದರಲ್ಲಿ ಯಾವುದೇ ರೀತಿಯ ಮಾನ್ಯತೆಯನ್ನು ಒದಗಿಸಲಾಗಿಲ್ಲ. ಮಾನ್ಯತೆಗಾಗಿ, ನೀವು ಇನ್ನೊಂದು ಪ್ರಾಥಮಿಕ ರೀಚಾರ್ಜ್ ಯೋಜನೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.
ಇದನ್ನೂ ಓದಿ-WhatsApp ಬಳಕೆದಾರರಿಗೊಂದು ಮಹತ್ವದ ಮಾಹಿತಿ, ಈ ಫೋನ್ ಗಳಲ್ಲಿ ವಾಟ್ಸ್ ಆಪ್ ತನ್ನ ಕೆಲಸ ನಿಲ್ಲಿಸಲಿದೆ
ಏರ್‌ಟೆಲ್ ಮತ್ತು ವಿಐ (ವೊಡಾಫೋನ್ ಐಡಿಯಾ) ಕುರಿತು ಹೇಳುವುದಾದರೆ, ನೀವು ಇದರಲ್ಲಿ ರೂ 20 ಮೌಲ್ಯದ ಯೋಜನೆಯೊಂದನ್ನು ಸಕ್ರೀಯಗೊಳಿಸಬಹುದು. ಈ ಯೋಜನೆಯು ರೂ 14.95 ಟಾಕ್ ಟೈಮ್ ನೀಡುತ್ತದೆ. ಆದರೆ, ಈ ಯೋಜನೆಯಲ್ಲಿಯೂ ಕೂಡ ಬಳಕೆದಾರರಿಗೆ ಯಾವುದೇ ರೀತಿಯ ಮಾನ್ಯತೆ ಸಿಗುವುದಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ