ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದ ವೊಡಾ ಫೋನ್ ! ಇಲ್ಲಿ ಎಲ್ಲವೂ ಅನ್‌ಲಿಮಿಟೆಡ್
ಈ ಯೋಜನೆಯು Vi Hero ಅನ್‌ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್‌ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.
ಬೆಂಗಳೂರು : Vodafone Idea (Vi) ಆಕರ್ಷಕ ಯೋಜನೆಗಳನ್ನು ನೀಡಿದರೂ ತನ್ನ ಪ್ರಿಪೇಯ್ಡ್ ಗ್ರಾಹಕರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಇಂದು, ನಾವು Viನ ಅಲ್ಪಾವಧಿ ಮಾನ್ಯತೆಯ ಪ್ರಿಪೇಯ್ಡ್ ಪ್ಲಾನ್ ಕುರಿತು ಮಾಹಿತಿ ನೀಡುತ್ತಿದ್ದೇವೆ. ಅದು 1.5GB ದೈನಂದಿನ ಡೇಟಾ ಮತ್ತು ಬೋನಸ್ ಡೇಟಾದೊಂದಿಗೆ ಬರುತ್ತದೆ. ಹೆಚ್ಚುವರಿ ಡೇಟಾವನ್ನು ಬಯಸುವ ಬಳಕೆದಾರರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದೆ.
ವೊಡಾಫೋನ್ ಐಡಿಯಾ ರೂ 299 ಪ್ರಿಪೇಯ್ಡ್ ಪ್ಲಾನ್ :
Vodafone Idea (Vi) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ 299 ರೂಪಾಯಿಯ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS, ಮತ್ತು 1.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದಲ್ಲದೆ, ಇದರಲ್ಲಿ 5GB ಬೋನಸ್ ಡೇಟಾವನ್ನು ಕಿದಾ ನೀಡಲಾಗುತ್ತದೆ. ಈ ಯೋಜನೆಯು Vi Hero ಅನ್‌ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್‌ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ : ನಿಮ್ಮ WhatsApp ಖಾತೆಯಲ್ಲಿ ಇತರರ ಬೇಹುಗಾರಿಗೆ ತಡೆಯಲು ಬಂತು ಸಿಕ್ರೆಟ್ ಕೋಡ್!
Vodafone Idea (Vi) ನಿಂದ 299 ರೂ. ಪ್ರಿಪೇಯ್ಡ್ ಯೋಜನೆಯು ಎಲ್ಲಾ ಅಗತ್ಯ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಯೋಜನೆಯನ್ನು ಹುಡುಕುತ್ತಿರುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಯೋಜನೆಯ ಮಾನ್ಯತೆಯು ಕೇವಲ 28 ದಿನಗಳು. ಆದರೆ, ಬಳಕೆದಾರರು ಇದರೊಂದಿಗೆ ಒಟ್ಟು 42GB + 5GB ಬೋನಸ್ ಡೇಟಾವನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ಯೋಜನೆಯು Vi Movies ಮತ್ತು TV ಕ್ಲಾಸಿಕ್‌ನ OTT ಪ್ರಯೋಜನವನ್ನು ಸಹ ಹೊಂದಿದೆ. Vi app ಮೂಲಕ ಬಳಕೆದಾರರು iOS ಮತ್ತು Android ಸಾಧನಗಳಲ್ಲಿ OTT ಕಂಟೆಂಟ್ ವೀಕ್ಷಿಸಬಹುದು.
ಈ ಯೋಜನೆಯೊಂದಿಗೆ, ಬಳಕೆದಾರರು ತಮ್ಮ FUP (fair usage policy) ಡೇಟಾವನ್ನು ಯಾವುದೇ ಪರಿಣಾಮವಿಲ್ಲದೆ ಬಳಸಬಹುದು. ಪ್ರತಿದಿನ ರಾತ್ರಿ 12 ಗಂಟೆಯಿಂದ ನಿಂದ ಮುಂಜಾನೆ 6 ಗಂಟೆವರೆಗೆ Binge All Night ಆಫರ್‌ನೊಂದಿಗೆ ಅನಿಯಮಿತ ಡೇಟಾವನ್ನು ಆನಂದಿಸಬಹುದು. ಅದರಲ್ಲೂ ರಾತ್ರಿ ವೇಳೆ ಮೊಬೈಲ್ ಡೇಟಾ ಹೆಚ್ಚು ಬಳಸುವವರಿಗೆ ಇದು ಉತ್ತಮ ಆಫರ್. ಮೊದಲ 3 ದಿನಗಳವರೆಗೆ 5GB ಡೇಟಾ ಲಭ್ಯವಿರುತ್ತದೆ.
ಇದನ್ನೂ ಓದಿ : 4K Google TV: ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯ ಹೊಂದಿರುವ 65-ಇಂಚಿನ ಸ್ಮಾರ್ಟ್ ಟಿವಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.