ನವದೆಹಲಿ: OPPO ಆಗಸ್ಟ್‌ನಲ್ಲಿ ಚೀನಾದಲ್ಲಿ Oppo Find N3 ಫ್ಲಿಪ್ ಅನ್ನು ಘೋಷಿಸಿತು. ಈಗ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಸಹ ಬಹಿರಂಗಪಡಿಸಿದ್ದು, ಫೋನ್‌ನ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಸಹ ತಿಳಿಸಲಾಗಿದೆ. ಈ ಫೋನ್ ನೇರವಾಗಿ Galaxy Z Flip 4 ಮತ್ತು Razr 2023ರೊಂದಿಗೆ ಸ್ಪರ್ಧಿಸುತ್ತದೆ. Oppo Find N3 ಫ್ಲಿಪ್ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.
Oppo Find N3 ಫ್ಲಿಪ್ ಬಿಡುಗಡೆ ದಿನಾಂಕ
Oppo ತನ್ನ ಮುಂಬರುವ ಕ್ಲಾಮ್‌ಶೆಲ್ ಫೋಲ್ಡಿಂಗ್ ಫೋನ್, Find N3 ಫ್ಲಿಪ್ ಅನ್ನು ಅಕ್ಟೋಬರ್ 12ರಂದು ಬಿಡುಗಡೆ ಮಾಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಪಟ್ಟಿ ಮಾಡಿರುವ ಇತ್ತೀಚಿನ ವರದಿಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ. ಅಕ್ಟೋಬರ್ 12ರ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ವೇಳೆಯೇ ಇದು ಗ್ರಾಹಕರಿಗೆ ಲಭಿಸಲಿದೆ.
ಇದನ್ನೂ ಓದಿ: ಲೋನ್ ಪಡೆದವರಿಗೆ ಸಿಹಿ ಸುದ್ದಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ! ಇನ್ನು ಇಷ್ಟಾಗಿರಲಿದೆ ನಿಮ್ಮ ಸಾಲದ ಬಡ್ಡಿ
Oppo Find N3 ಫ್ಲಿಪ್ ಲಾಂಚ್ ಟೈಮಿಂಗ್
Oppo Find N3 Flip ಭಾರತದಲ್ಲಿ ಅಕ್ಟೋಬರ್ 12ರಂದು ಬಿಡುಗಡೆಯಾಗಲಿದೆ. ಇದರ ಬಿಡುಗಡೆ ಕಾರ್ಯಕ್ರಮವು ಸಂಜೆ 7 ಗಂಟೆಗೆ YouTubeನಲ್ಲಿ ಲೈವ್‍ಸ್ಟ್ರೀಮ್ ಆಗಲಿದೆ. ಈ ಸಾಧನವು 6.8-ಇಂಚಿನ E6 AMOLED ಡಿಸ್ಪ್ಲೇ ಜೊತೆಗೆ ಪೂರ್ಣ HD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 1,600 nits ಗರಿಷ್ಠ ಹೊಳಪನ್ನು ಹೊಂದಿದೆ. ಕವರ್ ಡಿಸ್ಪ್ಲೇ ಸಣ್ಣ 3.26-ಇಂಚಿನ ಫಲಕವಾಗಿದೆ.
Oppo Find N3 ಫ್ಲಿಪ್ ಕ್ಯಾಮೆರಾ
Oppo Find N3 ಫ್ಲಿಪ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್, 32-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಮತ್ತು 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿರುತ್ತದೆ. ಇದು MediaTek ಡೈಮೆನ್ಸಿಟಿ 9200 SoCನಿಂದ ಚಾಲಿತವಾಗುತ್ತದೆ ಮತ್ತು 44W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುತ್ತದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿ ಹೆಚ್ಚಳ ! ಶೇ.44ರಷ್ಟು ಏರಿಕೆಯಾಗುವುದು ಸ್ಯಾಲರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.