ಬೆಂಗಳೂರು : ಭಾರತದಲ್ಲಿ ಗೀಸರ್ ಬಳಕೆ ಸಾಮಾನ್ಯ. ಬಹುತೇಕ ಎಲ್ಲಾ ಮನೆಗಳಲ್ಲಿ ಬಿಸಿ ನೀರಿಗಾಗಿ ಗೀಸರ್ ಅನ್ನೇ  ಬಳಸಲಾಗುತ್ತದೆ. ಆದರೆ ಉತ್ತಮ ಗುಣಮಟ್ಟದ ಗೀಸರ್ ಬೇಕು ಎಂದಾದರೆ ದುಬಾರಿ ಹಣವನ್ನು ತೆರಬೇಕಾಗುತ್ತದೆ.  ಆದರೆ ಇದೀಗ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗೀಸರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಗೀಸರ್  ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕೂಡಾ ಪಡೆಯುತ್ತಿದೆ. ಕೈಗೆಟುಕುವ ಬೆಲೆ ಮತ್ತು ಅದರ ವೈಶಿಷ್ಟ್ಯಗಳ ಕಾರಣದಿಂದಲೇ ಗ್ರಾಹಕರು ಈ ಗೀಸರ್ ಅನ್ನು ಇಷ್ಟಪಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ಗೀಸರ್ ನ ಬೆಲೆ ಕೇವಲ 3,599 ರೂಪಾಯಿ. ಗ್ರಾಹಕರು ಕ್ರೋಮಾದ ವೆಬ್‌ಸೈಟ್‌ ಮೂಲಕ ಈ ಗೀಸರ್ ಅನ್ನು ಖರೀದಿಸಬಹುದು. ಹಾವೆಲ್ಸ್ ಕಂಪನಿಯ ಈ ಗೀಸರ್‌   3 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಈ ಗೀಸರ್ ವಿನ್ಯಾಸ ಕೂಡಾ ಬಹಳ  ಸ್ಟೈಲಿಶ್ ಆಗಿದ್ದು, ಆಪರೇಟ್ ಮಾಡುವುದು ಕೂಡಾ ಸುಲಭ. ಇನ್ನು  ಸ್ನಾನಗೃಹದಲ್ಲಿ ಹೆಚ್ಚು ಜಾಗವನ್ನು ಆವರಿಸಿಕೊಳ್ಳುವುದಿಲ್ಲ. ಈ ಗೀಸರ್‌ನಲ್ಲಿ ನೀರನ್ನು ಒಮ್ಮೆ ಬಿಸಿ ಮಾಡಿದರೆ, ಗಂಟೆಗಳವರೆಗೆ  ಅದು ಬಿಸಿಯಾಗಿರುತ್ತದೆ. ಆದ್ದರಿಂದ ಗೀಸರ್ ಅನ್ನು ಪದೇ ಪದೇ ಆನ್ ಮಾಡುವ ಅಗತ್ಯವಿಲ್ಲ. ಈ ಗೀಸರ್ ಅನ್ನು ಭಾರತೀಯ ಸ್ನಾನಗೃಹವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. 


ಇದನ್ನೂ ಓದಿ : ಈಗ ಉಚಿತವಾಗಿ ಸಿಗುತ್ತದೆ ವಿಐಪಿ ನಂಬರ್ ! ಸಿಮ್ ಕಾರ್ಡ್ ಅನ್ನು ಗ್ರಾಹಕರ ಮನೆಗೆಯೇ ತಲುಪಿಸುತ್ತದೆ ಈ ಟೆಲಿಕಾಂ ಕಂಪನಿ


ಇನ್ನು ಈ ಗೀಸರ್ ನ ವಿಶೇಷತೆಯ ಬಗ್ಗೆ ಹೇಳುವುದಾದರೆ, ಅದು ಇನ್ಸ್ಟಂಟ್ ವಾಟರ್ ಗೀಸರ್ ಆಗಿದೆ. ಅಂದರೆ ಬಿಸಿ ನೀರಿಗಾಗಿ ಸ್ವಿಚ್ ಆನ್ ಮಾಡಿ ಗಂಟೆಗಳವರೆಗೆ ಕಾಯುವ ಅಗತ್ಯವಿಲ್ಲ. ಸ್ವಿಚ್ ಆನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬಿಸಿ ನೀರು ಸಿಗುತ್ತದೆ. ಇದನ್ನು ಅಡುಗೆಮನೆಯಲ್ಲಿಯೂ ಬಳಸಬಹುದು. ಇದು ಸಂಪೂರ್ಣವಾಗಿ ಅಟೋಮ್ಯಾಟಿಕ್ ಗೀಸರ್ ಆಗಿದೆ. ಈ ಗೀಸರ್  ಶಾಕ್ ಪ್ರೂಫ್ ಆಗಿರುವುದರಿಂದ ಇದನ್ನು ಮುಟ್ಟಿದರೆ ಯಾವುದೇ ರೀತಿಯ ಅಪಾಯವಿರುವುದಿಲ್ಲ. ಮನೆಯಲ್ಲಿ ಕಡಿಮೆ ಸದಸ್ಯರನ್ನು ಹೊಂದಿರುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಿತವ್ಯಯಕಾರಿಯಾಗಿದೆ. ಮಾತ್ರವಲ್ಲ ಬಳಸಿದರೆ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ.  ಯಾಕೆಂದರೆ ಇದು ಕಡಿಮೆ ವಿದ್ಯುತನ್ನು ಬಳಸುತ್ತದೆ. 


ಇದನ್ನೂ ಓದಿ : WhatsApp New Scam: ವಾಟ್ಸಾಪ್ ಗ್ರಾಹಕರೇ ಗಮನಿಸಿ, ಹ್ಯಾಕರ್‌ಗಳ ಇಂತಹ ವಂಚನೆ ಬಗ್ಗೆ ಇರಲಿ ಎಚ್ಚರ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.