ಈಗ ಉಚಿತವಾಗಿ ಸಿಗುತ್ತದೆ ವಿಐಪಿ ನಂಬರ್ ! ಸಿಮ್ ಕಾರ್ಡ್ ಅನ್ನು ಗ್ರಾಹಕರ ಮನೆಗೆಯೇ ತಲುಪಿಸುತ್ತದೆ ಈ ಟೆಲಿಕಾಂ ಕಂಪನಿ

ಈ ಟೆಲಿಕಾಂ ಕಂಪನಿಯು ವಿಐಪಿ ಸಂಖ್ಯೆಯೊಂದಿಗೆ ಸಿಮ್ ಕಾರ್ಡ್ ಅನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ.  ಅಷ್ಟು ಮಾತ್ರವಲ್ಲ. ಈ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ಹೋಂ ಡೆಲಿವರಿ ಕೂಡಾ ಮಾಡಲಾಗುತ್ತದೆ. 

Written by - Ranjitha R K | Last Updated : Dec 19, 2022, 10:43 AM IST
  • ಗ್ರಾಹಕರಿಗೆ ಉಚಿತವಾಗಿ ಸಿಗುತ್ತಿದೆ ಸ್ಪೆಷಲ್ ನಂಬರ್
  • ಈ ಆಫರ್ ನೀಡುತ್ತಿರುವ ಕಂಪನಿ ಯಾವುದು ?
  • ಈ ಸಿಮ್ ಕಾರ್ಡ್ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯ ಯಾವುದು ?
ಈಗ ಉಚಿತವಾಗಿ ಸಿಗುತ್ತದೆ ವಿಐಪಿ  ನಂಬರ್ !  ಸಿಮ್ ಕಾರ್ಡ್ ಅನ್ನು ಗ್ರಾಹಕರ ಮನೆಗೆಯೇ ತಲುಪಿಸುತ್ತದೆ ಈ ಟೆಲಿಕಾಂ ಕಂಪನಿ  title=
Free special Sim Card

ಬೆಂಗಳೂರು : ವಿಐಪಿ ಸಂಖ್ಯೆಯೊಂದಿಗೆ ಸಿಮ್ ಕಾರ್ಡ್ ಬೇಕೆಂದಿದ್ದರೆ ಈಗ ಅದಕ್ಕಾಗಿ ಒಂದು ಪೈಸೆ ಕೂಡಾ ಖರ್ಚು ಮಾಡುವ ಅಗತ್ಯವಿಲ್ಲ. ಈ ಟೆಲಿಕಾಂ ಕಂಪನಿಯು ವಿಐಪಿ ಸಂಖ್ಯೆಯೊಂದಿಗೆ ಸಿಮ್ ಕಾರ್ಡ್ ಅನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ. ಅಷ್ಟು ಮಾತ್ರವಲ್ಲ. ಈ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ಹೋಂ ಡೆಲಿವರಿ ಕೂಡಾ ಮಾಡಲಾಗುತ್ತದೆ. ನೀವು ಕೂಡಾ ಈ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ಪಡೆಯಲು ಬಯಸುವುದಾದರೆ ಅದನ್ನು ಪಡೆಯಲು ಈ ಪ್ರಕ್ರಿಯೆಯನ್ನು ಅನುಸರಿಸಬೇಕು. 

ಈ ಆಫರ್ ನೀಡುತ್ತಿರುವ ಕಂಪನಿ ಯಾವುದು ? :  
ವೊಡಾಫೋನ್ ಐಡಿಯಾ ಈ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆ ಅಡಿಯಲ್ಲೂ ಯಾವುದೇ ಖರ್ಚು ಇಲ್ಲದೆ, ಗ್ರಾಹಕರಿಗೆ ವಿಐಪಿ ಸಂಖ್ಯೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಪಡೆಯುವ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ. ಈ ಯೋಜನೆಯು ತುಂಬಾ ವಿಶಿಷ್ಟವಾಗಿದ್ದು, ಗ್ರಾಹಕರಿಗೂ ಇಷ್ಟವಾಗುತ್ತಿದೆ. 

ಇದನ್ನೂ ಓದಿ : WhatsApp New Scam: ವಾಟ್ಸಾಪ್ ಗ್ರಾಹಕರೇ ಗಮನಿಸಿ, ಹ್ಯಾಕರ್‌ಗಳ ಇಂತಹ ವಂಚನೆ ಬಗ್ಗೆ ಇರಲಿ ಎಚ್ಚರ!

ಈ ಸಿಮ್ ಕಾರ್ಡ್ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆ ಯಾವುದು ? :  
ಈ ಸಂಖ್ಯೆಯನ್ನು ಪಡೆಯಲು, ಮೊದಲು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಅದರ ನಂತರ ನೀವು ಉಚಿತ ಫ್ಯಾನ್ಸಿ ಸಂಖ್ಯೆಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಪಡೆಯಬಹುದು. ಈ ಸಂಖ್ಯೆಯನ್ನು ಆಯ್ಕೆ ಮಾಡಿದ ನಂತರ ಪೋಸ್ಟ್‌ಪೇಯ್ಡ್ ಅಥವಾ ಪ್ರಿಪೇಯ್ಡ್‌ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ ಮನೆಯ ವಿಳಾಸ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಈಗ ನೀವು OTP ಯೊಂದಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಷ್ಟಾದ ಮೇಲೆ ಸಿಮ್ ಕಾರ್ಡ್ ಅನ್ನು ಮನೆಗೆ ತಲುಪಿಸಲಾಗುತ್ತದೆ. 

ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಸುಲಭವಾಗಿ ಸಿಮ್ ಅನ್ನು ಮನೆಗೇ ಡೆಲಿವರಿ ಮಾಡಿಸಿಕೊಳ್ಳಬಹುದಾಗಿದೆ. ನಾವು ಮೇಲೆ ಹೇಳಿದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ನಿಮಗಿಷ್ಟವಾದ ಸಂಖ್ಯೆಯ ಸಿಮ್ ಕಾರ್ಡ್ ಅನ್ನು ಪಡೆಯಬಹುದು.  

ಇದನ್ನೂ ಓದಿ : WhatsAppನ 'Hi Mum' ಸಂದೇಶ ಇದುವರೆಗೆ ಜನರಿಂದ 57 ಕೋಟಿ ರೂ.ಗಳನ್ನು ದೋಚಿದೆಯಂತೆ, ಈ ತಪ್ಪು ಮಾಡ್ಬೇಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News