Christmas Day Offer : ಟ್ವಿಟರ್ ಬಳಕೆದಾರರಿಗೆ ಇದು ಸಂತಸದ ಸುದ್ದಿ. ನಥಿಂಗ್ ಕಂಪನಿಯ ಸಂಸ್ಥಾಪಕ ಕಾರ್ಲ್ ಪೀ ಟ್ವಿಟರ್ ಬಳಕೆದಾರರಿಗೆ ನಥಿಂಗ್ ಫೋನ್ (1) ಅನ್ನು ಉಚಿತವಾಗಿ ನೀಡುವ ಬಗ್ಗೆ ಘೋಷಿಸಿದ್ದಾರೆ. ಆದರೆ ಇದಕ್ಕಾಗಿ ಸ್ಪರ್ಧೆಯೊಂದರಲ್ಲಿ ಭಾಗವಹಿಸಬೇಕು.    ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ  ನಥಿಂಗ್ ಫೋನ್ (1)  ಫೋನ್ ಅನ್ನು ಉಚಿತವಾಗಿ ನೀಡಲಾಗುವುದು. ಈ  ಸ್ಪರ್ಧೆಯ ನಿಯಮದ ಪ್ರಕಾರ ಪಡೆಯಲು, ಬಳಕೆದಾರರು ಒಂದು ಟ್ವೀಟ್ ಮಾಡಿದರೆ ಸಾಕು. 


COMMERCIAL BREAK
SCROLL TO CONTINUE READING

ಆದರೆ ಆ ಟ್ವೀಟ್ ಅನ್ನು ಯಾರೂ ಲೈಕ್ ಮಾಡಬಾರದು. ಬಳಕೆದಾರರು ಮಾಡುವ ಟ್ವೀಟ್ ಅನ್ನು ಯಾರೂ ಲೈಕ್ ಮಾಡದೆ ಹೋದರೆ ಅವರಿಗೆ ನಥಿಂಗ್ ಫೋನ್ (1) ಅನ್ನು ಉಚಿತವಾಗಿ ನೀಡಲಾಗುವುದು. ಇದೇ ವೇಳೆ ಯಾರ ಟ್ವೀಟ್ ಗೆ  ಅತಿ ಹೆಚ್ಚು ಲೈಕ್ ಬರುತ್ತದೆ ಅವರು ಕೂಡಾ ಈ ಫೋನ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಒಂದೋ ನೀವು ಮಾಡುವ ಟ್ವೀಟ್ ಅನ್ನು ಯಾರೂ ಲೈಕ್ ಮಾಡಬಾರದು, ಅಥವಾ ಅತಿ ಹೆಚ್ಚು ಲೈಕ್ ಮಾಡಬೇಕು. ಕಂಪನಿಯ ಮುಖ್ಯಸ್ಥರ ಪ್ರಕಾರ, ವಿಜೇತರನ್ನು 24 ಗಂಟೆಗಳ ಒಳಗೆ ಆಯ್ಕೆ ಮಾಡಲಾಗುತ್ತದೆ.


ಇದನ್ನೂ ಓದಿ ಅನಗತ್ಯ ಕರೆಗಳನ್ನು ತಪ್ಪಿಸಲು ಈ ಸಣ್ಣ ಕೆಲಸ ಮಾಡಿ


ಉಚಿತವಾಗಿ ಸಿಗುವುದು ನಥಿಂಗ್ ಫೋನ್ 1 : 
 ಈ ಸ್ಪರ್ಧೆಯ ಪ್ರಕಾರ ನಥಿಂಗ್ ಫೋನ್ 1 ಅನ್ನು ಇಬ್ಬರಿಗೆ ಉಚಿತವಾಗಿ ನೀಡಲಾಗುವುದು. ಹಬ್ಬ ಹರಿದಿನಗಳಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತವೆ. ಆದರೆ ನಥಿಂಗ್ ಫೋನ್  ಮಾಲೀಕರು ಹೊಸದೊಂದು ಯೋಜನೆಯ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.


ನಥಿಂಗ್ ಫೋನ್ (1) ನ ಅದ್ಭುತ ವಿನ್ಯಾಸ : 
ಪೋನ್ ಬಿಡುಗಡೆಯಾದ 6 ತಿಂಗಳ ನಂತರ, ಕಂಪನಿಯು ಈ ಫೋನ್ ಅನ್ನು ಉಚಿತವಾಗಿ ನೀಡುತ್ತಿದೆ. ನಥಿಂಗ್ ಫೋನ್ (1) ಬೆರಗುಗೊಳಿಸುವ ವಿನ್ಯಾಸದೊಂದಿಗೆ ಬರುತ್ತದೆ. ಇದು ಹಿಂಭಾಗದಲ್ಲಿ ಇನ್ಬಿಲ್ಟ್ ಎಲ್ಇಡಿ  ಲೈಟ್ ಅನ್ನು ಹೊಂದಿದೆ. 


ಇದನ್ನೂ ಓದಿ : ಗೀಸರ್‌ನಲ್ಲಿ ಈ ಪುಟ್ಟ ಡಿವೈಸ್ ಅಳವಡಿಸಿದರೆ ಅರ್ಧದಷ್ಟು ಕಡಿಮೆ ಆಗುತ್ತೆ ಕರೆಂಟ್ ಬಿಲ್


ನಥಿಂಗ್ ಫೋನ್ (1) ಬೆಲೆ : 
ಕಂಪನಿಯ ಸಂಸ್ಥಾಪಕ ಕಾರ್ಲ್ ಪೀ ನೀಡಿದ ಸವಾಲು ತುಂಬಾ ಕಷ್ಟಕರವಾಗಿದೆ. ಒಂದು ಟ್ವೀಟ್ ಮಾಡಿದ ಮೇಲೆ ಕನಿಷ್ಠ ಒಬ್ಬರಾದರೂ ಅದನ್ನು ಲೈಕ್ ಮಾಡಿಯೇ ಮಾಡುತ್ತಾರೆ. ನಥಿಂಗ್ ಫೋನ್ (1) ಮೂರು ರೂಪಾಂತರಗಳಲ್ಲಿ ಬರುತ್ತದೆ. 8GB RAM ಮತ್ತು 128GB ಸ್ಟೋರೇಜ್ ಬೆಲೆ 27,4 99 ರೂ . 8GB RAM ಮತ್ತು 256GB ಸ್ಟೋರೇಜ್ ಬೆಲೆ 30,499 ರೂ . ಮತ್ತು 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್ ಬೆಲೆ  33,499 ರೂಪಾಯಿ ಆಗಿದೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.