Electric Bill Reduce Tips: ಭಾರತದಲ್ಲಿ ಬೇರೆ ಋತುಗಳಿಗಿಂತ ಚಳಿಗಾಲದಲ್ಲಿ ಗೀಸರ್‌ಗಳ ಬಳಕೆ ಹೆಚ್ಚು. ಆದರೆ, ಚಳಿಗಾಲದಲ್ಲಿ ಅತಿಯಾದ ಗೀಸರ್ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ. ಇದರಿಂದ ತಿಂಗಳ ಬಜೆಟ್ ಮೇಲೆ ನೇರ ಪರಿಣಾಮ ಬೀರುತ್ತದೆ. ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಇದು ಕೆಲವರ ಚಿಂತೆಗೂ ಕಾರಣವಾಗಿದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ, ನಿಮ್ಮ ಮನೆಯ ಗೀಸರ್‌ನಲ್ಲಿ ಒಂದು ಪುಟ್ಟ ಡಿವೈಸ್ ಅಳವಡಿಸಿದರೆ ನೀವು ದಿನ ಪೂರ್ತಿ ಗೀಸರ್ ಬಳಸಿದರೂ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ. ಅದೇ ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನ.
ನೀವು ನಿಮ್ಮ ಮನೆಯ ಗೀಸರ್‌ನಲ್ಲಿ ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಆರ್ಡರ್ ಮಾಡಬಹುದು. ಮಾತ್ರವಲ್ಲ, ಇದರ ಫಿಟ್ಟಿಂಗ್ ಕೂಡ ತುಂಬಾ ಸುಲಭ.
ಇದನ್ನೂ ಓದಿ- ಜನವರಿ 1 ರಿಂದ ಬಂದ್ ಆಗಲಿವೆ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು: ಯಾಕ್ ಗೊತ್ತಾ?
ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನದ ಬೆಲೆ ಮತ್ತು ಲಭ್ಯತೆ:
ಶಾಕ್‌ಪ್ರೂಫ್ ವಾಟರ್ ಹೀಟರ್ ಡಿವೈಸ್ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಲಭ್ಯವಿರುತ್ತದೆ. ಮಾತ್ರವಲ್ಲ, ಇದನ್ನು ನೀವು ಆನ್‌ಲೈನ್‌ನಲ್ಲಿಯೂ ಬುಕ್ ಮಾಡಬಹುದು. ಆದರೆ, ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವು ಹೆಚ್ಚು ಬೇಡಿಕೆ ಇರುವ ಸಾಧನವಾಗಿದ್ದು ಇದರ ಬೆಲೆ ಕೂಡ ಹೆಚ್ಚಾಗಿರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 2,999 ರೂ.ವರೆಗೆ ಇರುತ್ತದೆ. ಆದರೆ, ನೀವು ಈ ಡಿವೈಸ್ ಅನ್ನು ಆನ್‌ಲೈನ್‌ನಲ್ಲಿ 1,099 ರೂ.ಗಳಿಗೆ ಖರೀದಿಸಬಹುದಾಗಿದೆ. ಆದರೆ, ಇದರ ಕೊಡುಗೆಗಳ ಆಧಾರದ ಮೇಲೆ ಬೆಲೆ ಸ್ವಲ್ಪ ಹೆಚ್ಚು-ಕಡಿಮೆ ಆಗಬಹುದು.
ಇದನ್ನೂ ಓದಿ- ಎಲ್ಪಿಜಿ, ವಿದ್ಯುತ್ ಅಗತ್ಯವಿಲ್ಲ, ಖರ್ಚಿಲ್ಲದೇ ಆಹಾರ ತಯಾರಿಸಲು ಸಹಾಯಕವಾಗಲಿದೆ ಈ ಸ್ಟವ್
ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನದ ವೈಶಿಷ್ಟ್ಯ:
* ಶಾಕ್‌ಪ್ರೂಫ್ ವಾಟರ್ ಹೀಟರ್ ಡಿವೈಸ್ ಒಂದು ಪುಟ್ಟ ಡಿವೈಸ್ ಆಗಿದೆ.
* ನೀವು ಈ ಸಾಧನವನ್ನು ಫಿಕ್ಸ್ ಮಾಡಲು ಇಂಜಿನಿಯರ್‌ನ ಸಹಾಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.
* ಇದನ್ನು ಗೀಸರ್ ಜೊತೆ ಬಹಳ ಸುಲಭವಾಗಿ ಅಳವಡಿಸಬಹುದು.
* ಈ ಸಾಧನವು ಗೀಸರ್ ತ್ವರಿತವಾಗಿ ನೀರನ್ನು ಬಿಸಿ ಮಾಡಲು ಸಹಾಯಕವಾಗಿದೆ.
* ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವು 40% ನಷ್ಟು ವಿದ್ಯುತ್ ಉಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.