ನವದೆಹಲಿ: Coronavirus N440K Strain - ಭಾರತದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ವಿಶ್ವದಲ್ಲಿ ಹರಡಿರುವ ಕೊರೊನಾ ವೈರಸ್ ಹೋಲಿಕೆಯಲ್ಲಿ 10 ಪಟ್ಟು ಅಧಿಕ ವೇಗವಾಗಿ ಹರಡುತ್ತದೆ ಮತ್ತು ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಸೆಂಟರ್ ಫಾರ್ ಸೇಲ್ಯೂಲಾರ್ ಅಂಡ್ ಮಾಲಿಕ್ಯೂಲರ್ ಬಯಾಲಾಜಿ (CCMB) ಕೊರೊನಾ ವೈರಸ್ ನ ಹೊಸ ರೂಪಾಂತರಿ N440Kಯನ್ನು ಪತ್ತೆಹಚ್ಚಿದೆ. ಇದು B1.617 ಹಾಗೂ B1.618 ಬಳಿಕ ಬಂದ ರೂಪಾಂತರಿ ತಲಿಯಾಗಿದೆ. ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ಎಲ್ಲಕ್ಕಿಂತ ಮೊದಲು ಈ ರೂಪಾಂತರಿ ಪತ್ತೆಯಾಗಿದೆ. ವಿಶಾಖಾಪಟ್ಟಣಂ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಜನರ ಮಧ್ಯೆ ಹರಡಿರುವ ಭೀತಿಯ ಹಿನ್ನೆಲೆ ಈ ರೂಪಾಂತರಿ ನಿರ್ಮಾಣಗೊಂಡಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ವಿಜ್ಞಾನಿಗಳ ಪ್ರಕಾರ ಕೊರೋನಾದ N440K ರೂಪಾಂತರಿ ತಳಿ ಪ್ರಮುಖವಾಗಿ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಹಾಗೂ ಛತ್ತಿಸ್ಗಡ್ ಭಾಗದಲ್ಲಿ ಪತ್ತೆಯಾಗಿದೆ.


"ಕರೋನಾದ N440 K ರೂಪಾಂತರಿ ತಳಿ A 2 A ಮೂಲ ಮಾದರಿ ತಳಿಗಳಿಗಿಂತ 10 ಪಟ್ಟು ಹೆಚ್ಚು ವೇಗವಾಗಿ  ವೈರಸ್‌ಗಳನ್ನು ಹರಡುವ ಸಾಮರ್ಥ್ಯವನ್ನು ಹೊಂದಿದೆ. ಕರೋನಾದ A 2 A ಮೂಲ ಮಾದರಿ ತಳಿ ವಿಶ್ವಾದ್ಯಂತ ಹರಡಿರುವ ತಲಿಯಾಗಿದೆ. ಆದ್ದರಿಂದ ಕರೋನಾದ (Covid-19) ಎನ್ 440 ಕೆ ರೂಪಾಂತರಗಳು ಇತರ ವೈರಸ್‌ಗಳಿಗಿಂತ ಕಡಿಮೆ ಸಮಯದಲ್ಲಿ ಹಲವು ಪಟ್ಟು ಹೆಚ್ಚು ವೈರಸ್‌ಗಳನ್ನು ಹರಡುವ ಸಾಮರ್ಥ್ಯ ಹೊಂದಿದೆ"  ಎಂಬ ಸಂಗತಿಯನ್ನು CCMB ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಪತ್ತೆಹಚ್ಚಿದ್ದಾರೆ.


ಇದನ್ನೂ ಓದಿ- Covid-19 In Asiatic Lion: ಜಾನುವಾರುಗಳಿಗೂ ವ್ಯಾಪಿಸಿದೆಯೇ ಕೊರೊನಾ ಸೋಂಕು?


ಈ ಕುರಿತು ಹೇಳಿಕೆ ನೀಡಿರುವ CCMB ನಿರ್ದೇಶಕ ರಾಕೇಶ್ ಮಿಶ್ರಾ, ಕೊರೋನಾದ ಹೊಸ ರೂಪಾಂತರಿ N440K ತುಂಬಾ ಕಡಿಮೆ ಸಮಯದಲ್ಲಿ ಹಲವು ಪಟ್ಟು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ- Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care


ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ CCMB ವೈಜ್ಯಾನಿಕರು ಹಲವು ಕೇಂದ್ರಗಳಿಂದ ಅವರು ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿ ಶೇ.50 ರಷ್ಟು ಮಾದರಿಗಳಲ್ಲಿ ಕೊರೋನಾದ N440K ವೈರಸ್ ತಳಿ ಪತ್ತೆಯಾಗಿದೆ. ಅಷ್ಟೇ ಅಲ್ಲ ಜನಸಂಖ್ಯೆಯ ಒಂದು ವಿಶೇಷ ಭಾಗದಲ್ಲಿ ಇದು ಹರಡುತ್ತಿದೆ ಹಾಗೂ ಇತರ ರೂಪಾಂತರಿಗಳ ಹೋಲಿಕೆಯಲ್ಲಿ ಇದು ಹೆಚ್ಚು ಸ್ಥಳೀಯ ಮಾದರಿಯಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-School Fees: Corona ಕಾಲದಲ್ಲಿ ಶಾಲೆಗಳು ಬಂದ್ ಇರುವಾಗ ಎಷ್ಟು ಶುಲ್ಕ ಪಾವತಿಸಬೇಕು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.