ಜಮ್ಮ-ಕಾಶ್ಮೀರ್: Data Leak - ಜಮ್ಮು ಮತ್ತು ಕಾಶ್ಮೀರ್ ಮೂಲದ ಹ್ಯಾಕರ್ ಗಳ ತಂಡವೊಂದು ಸೇನಾ ಜವಾನರಿಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡಿರುವುದಾಗಿ ಹೇಳಿಕೊಂಡಿದೆ. ಈ ಕುರಿತು ಹೇಳಿಕೊಂಡಿರುವ ಗುಂಪು ಭಾರತಿ ಏರ್ಟೆಲ್ ನೆಟ್ವರ್ಕ್ ಅನ್ನು ಬಳಸಿ ಈ ಕೃತ್ಯ ಎಸಗಿರುವುದಾಗಿ ಹೇಳಿದೆ. ಆದರೆ, ಇನ್ನೊಂದೆಡೆ ಕಂಪನಿ ತನ್ನ ಸಿಸ್ಟಂನಲ್ಲಿ ಈ ರೀತಿಯ ಯಾವುದೇ ಕಳ್ಳತನ ನಡೆದಿಲ್ಲ ಎಂದು ಹೇಳಿದೆ. Red Rabbit Team ಹೆಸರಿನ ಈ ಹ್ಯಾಕರ್ಸ್ ಗಳ ಗುಂಪು ಭಾರತೀಯ ಮೂಲದ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದು, ಬಳಿಕೆ ಸೋರಿಕೆ ಮಾಡಲಾಗಿರುವ ದತ್ತಾಂಶಗಳನ್ನು ವಿವಿಧ ಪೋರ್ಟಲ್ ಗಳ ಮೇಲೆ ಬಹಿರಂಗಪಡಿಸಿದೆ. ಸೈಬರ್ ಸೆಕ್ಯೋರಿಟಿ ರಿಸರ್ಚರ್ ರಾಜಶೇಖರ್ ರಾಜ್ ಹರಿಯಾಗೆ ಮಾಡಿರುವ  ಟ್ವೀಟ್ ವೊಂದರಲ್ಲಿ ಹ್ಯಾಕರ್ಗಳು ಕೆಲ ಲಿಂಕ್ ಗಳನ್ನು ಕೂಡ ಹಂಚಿಕೊಂಡಿದ್ದಾರೆ.  ಈ ಟ್ವೀಟ್ ನಲ್ಲಿ ಹ್ಯಾಕರ್ ಗಳು ಕೆಲ ಮಿಡಿಯಾ ಆರ್ಗನೈಜೆಶನ್ ಗಳನ್ನು ಕೂಡ ಟ್ಯಾಗ್ ಮಾಡಿದ್ದಾರೆ. ರಾಜ್ ಹರಿಯಾ ಹೇಳುವ ಪ್ರಕಾರ ಇದರಲ್ಲಿ ಪಾಕ್ ಮೂಲದ ಹ್ಯಾಕರ್ ಗಳ ಕೈವಾಡವಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹ್ಯಾಕರ್ ಗಳು ತಮ್ಮ ಬಳಿ ದೇಶಾದ್ಯಂತ ಇರುವ ಭಾರತಿ ಏರ್ಟೆಲ್ ಚಂದಾದಾರರ ದತಾಂಶವಿರುವುದಾಗಿ ಹೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Data Leak: Telegram Bot App 50 ಕೋಟಿ ಬಳಕೆದಾರರ ದತ್ತಾಂಶ ಸೋರಿಕೆ, ನಿಮ್ಮ ಮಾಹಿತಿ ಎಷ್ಟು ಸುರಕ್ಷಿತ?


ಈ ಬಗ್ಗೆ ಭಾರತೀಯ ಸೇನೆಯನ್ನು ಸಂಪರ್ಕಿಸಿದರೂ ಕೂಡ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇಂತಹ ಯಾವುದೇ ಕ್ರಮದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದರೂ, ಇದು ಕೆಲವು ದುರುದ್ದೇಶಪೂರಿತ ಅಂಶಗಳ ದುರುದ್ದೇಶಪೂರಿತ ಕೃತ್ಯವೆಂದು ತೋರುತ್ತದೆ ಎಂದಿದ್ದಾರೆ. ಭಾರತಿ ಏರ್‌ಟೆಲ್ ವಕ್ತಾರರು ತಮ್ಮ ಸರ್ವರ್‌ನಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾಗಿರುವುದನ್ನು (Data Leak) ನಿರಾಕರಿಸಿದ್ದಾರೆ. ಈ ಹ್ಯಾಕರ್ ಗಳ ಗುಂಪು ಮಂಡಿಸಿರುವ ಹಕ್ಕಿಗೆ ವಿರುದ್ಧವಾಗಿ ಏರ್‌ಟೆಲ್ ವ್ಯವಸ್ಥೆಯಲ್ಲಿ ಯಾವುದೇ ಉಲ್ಲಂಘನೆ ಇಲ್ಲ ಎಂದು ಅವರು ಸಾಬೀತುಪಡಿಸಬಹುದು ಎಂದು ವಕ್ತಾರರು ಹೇಳಿದ್ದಾರೆ. ಏರ್ಟೆಲ್ ಹೊರಗಿನ ಅನೇಕ ಮಧ್ಯಸ್ಥಗಾರರಿಗೆ ನಿಯಂತ್ರಕ ಅಗತ್ಯಗಳಿಗೆ ಅನುಗುಣವಾಗಿ ಕೆಲವು ಡೇಟಾವನ್ನು ಪ್ರವೇಶಿಸಬಹುದು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ  ಎಲ್ಲ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಏರ್ಟೆಲ್ ವಕ್ತಾರರು ತಿಳಿಸಿದ್ದಾರೆ.


ಇದನ್ನು ಓದಿ- Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ


ಡೇಟಾ ಸೋರಿಕೆ ಮಾಡುವುದಾಗಿ ಬೆದರಿಕೆ
ಹ್ಯಾಕರ್ ಗುಂಪು ಕಂಪನಿಯ ಭದ್ರತಾ ತಂಡದೊಂದಿಗೆ 15 ತಿಂಗಳಿಗಿಂತ ಹೆಚ್ಚು ಕಾಲ ಸಂಪರ್ಕದಲ್ಲಿದೆ ಮತ್ತು ಹಲವಾರು ಹಕ್ಕುಗಳನ್ನು ಮಂಡಿಸಿದೆ ಎಂದು ಏರ್ಟೆಲ್ ವಕ್ತಾರರು ಹೇಳಿದ್ದಾರೆ. ಇದರಲ್ಲಿ ಅವರು ನಿರ್ದಿಷ್ಟ ಪ್ರದೇಶದ ತಪ್ಪಾದ ಡೇಟಾವನ್ನು ಪೋಸ್ಟ್ ಮಾಡಿದ್ದಾರೆ. ಹ್ಯಾಕರ್‌ಗಳು ಹಂಚಿಕೊಂಡ ಲಿಂಕ್‌ಗಳು ಹಲವು ಸಮಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಲ್ಲಿ, ಚಂದಾದಾರರ ಹೆಸರುಗಳು, ಮೊಬೈಲ್ ಸಂಖ್ಯೆಗಳು ಮತ್ತು ವಿಳಾಸಗಳನ್ನು ತೋರಿಸಲಾಗುತ್ತಿತ್ತು. ಕಂಪನಿಯ ಸರ್ವರ್‌ಗೆ ಅಪ್‌ಲೋಡ್ ಮಾಡಿದ ಶೆಲ್ ಮೂಲಕ ದೇಶಾದ್ಯಂತದ ಭಾರ್ತಿ ಏರ್‌ಟೆಲ್‌ನ ಚಂದಾದಾರರಿಂದ ಡೇಟಾ ಇದೆ ಎಂದು ರೆಡ್ ರಾಬಿಟ್ ತಂಡ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದೇಶದಲ್ಲಿ ಹೇಳಿಕೊಂಡಿದೆ. ಶೀಘ್ರದಲ್ಲೇ ಅವರು ಹೆಚ್ಚಿನ ಡೇಟಾವನ್ನು ಸೋರಿಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.


ಇದನ್ನು ಓದಿ- Big Mistake! ಈ ಆನ್ಲೈನ್ ಮಾರುಕಟ್ಟೆಯ ಡೇಟಾ ಹ್ಯಾಕ್! 2 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ SALE


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.