Data Leak Through Telegram Bot App - ದೆಹಲಿ: ನೀವೂ ಕೂಡ ಒಂದು ವೇಳೆ ಟೆಲಿಗ್ರಾಂ ಬಾಟ್ಆಪ್ ಬಳಸುತ್ತಿದ್ದಾರೆ ಈ ಸುದ್ದಿ ತಪ್ಪದೆ ಓದಿ.  ವರದಿಗಳ ಪ್ರಕಾರ, ಟೆಲಿಗ್ರಾಮ್ ಆ್ಯಪ್ ಬೋಟ್ ಬಳಸುವ ಫೇಸ್‌ಬುಕ್ ಬಳಕೆದಾರರ ಡೇಟಾವನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಮತ್ತು ಇದರಲ್ಲಿ ಚಿಂತೆಗೀಡು ಮಾಡುವ ವಿಷಯ ಎಂದರೆ ಈ ಸಂಖ್ಯೆ 50 ಕೋಟಿ ಬಳಕೆದಾರರಿಗೂ ಹೆಚ್ಚಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದರಿಂದ ಫೇಸ್ ಬುಕ್ ಅಕೌಂಟ್ ಗೆ ಎಷ್ಟು ಅಪಾಯ
ವರದಿಗಳ ಪ್ರಕಾರ, ಡೇಟಾ ಲೀಕ್ (Data Leak) ಅಪಾಯದ ನಂತರ ತಯಾರಿಸಲಾಗಿರುವ ಫೇಸ್ ಬುಕ್ ಖಾತೆಗಳ ಮೇಲೆ ಈ ಬಾಟ್ ಕೆಲಸ ಮಾಡುವುದಿಲ್ಲ ಎಂದು ಫೇಸ್ ಬುಕ್ ಹೇಳಿದೆ. 2019 ಕ್ಕಿಂತ ಮೊದಲು ತೆರೆಯಲಾಗಿರುವ ಖಾತೆಗಳ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗಿಲ್ಲ ಎಂದು ಫೇಸ್ಬುಕ್ ಹೇಳಿಕೊಂಡಿದೆ.


ಇದನ್ನು ಓದಿ- Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ


ಸಂಶೋಧನೆಯಲ್ಲಿ ಪತ್ತೆಯಾದ ಅಸುರಕ್ಷಿತ ಸರ್ವರ್
2019ರಲ್ಲಿ ನಡೆಸಲಾಗಿರುವ ಒಂದು ಸಂಶೋಧನೆ ಈ ಅಸುರಕ್ಷಿತ ಸರ್ವರ್ ಅನ್ನು ಪತ್ತೆಹಚ್ಚಿತ್ತು. ಈ ಸರ್ವರ್ ನಲ್ಲಿ ಸುಮಾರು 42ಕೋಟಿ ರಿಕಾರ್ಡ್ ಗಳನ್ನು ಸಂಗ್ರಹಿಸಿಡಲಾಗಿದೆ. ಇದರಲ್ಲಿ ಅಮೇರಿಕಾ ಹಾಗೂ ಬ್ರಿಟನ್ ನ 15 ಕೋಟಿ ಬಳಕೆದಾರರ ಡೇಟಾ ಕೂಡ ಶಾಮೀಲಾಗಿವೆ. ಹ್ಯಾಕರ್ ಗಳು ಟೆಲಿಗ್ರಾಂ ಬಾಟ್ ಆಪ್ ಬಳಕೆ ಮಾಡಿ ಸುಲಭವಾಗಿ ಫೇಸ್ ಬುಕ್ ಬಳಕೆದಾರರ ಕಾಂಟಾಕ್ಟ್ ಮಾಹಿತಿ ಕದ್ದಿದ್ದಾರೆ ಎನ್ನಲಾಗುತ್ತಿದೆ.


ಇದನ್ನು ಓದಿ-Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ


ಬಾಟ್ ಬಳಿ ಒಟ್ಟು 19 ದೇಶಗಳ ಜನರ ಡೇಟಾ ಲಭ್ಯವಿದೆ
ವರದಿಗಳ ಪ್ರಕಾರ ಯಾವ ಆಪ್ ಮೂಲಕ ಹ್ಯಾಕರ್ಸ್ ಗಳು ಈ ಕೃತ್ಯ ಎಸಗಿದ್ದಾರೆಯೋ, ಆ ಟೆಲಿಗ್ರಾಮ್ ಬಾಟ್ ಆಪ್ ಬಳಿ 19 ದೇಶಗಳ ಬಳಕೆದಾರರ ಡೇಟಾ ಸಂಗ್ರಹವಿದೆ. ಸಾಮಾನ್ಯವಾಗಿ ತಮ್ಮ ಮೊಬೈಲ್ ಫೋನ್ ನಂಬರ್ ಅನ್ನು ಖಾಸಗಿಯಾಗಿಟ್ಟಿರುವ ಬಳಕೆದಾರರ ನಂಬರ್ ಅಕ್ಸಸ್ ಮಾಡಲು ಇದು ವಿಫಲವಾಗಿದೆ ಎಂದು ಬಾಟ್ ಪರೀಕ್ಷೆಯಲ್ಲಿ ತಿಳಿದುಬಂದಿದೆ.


ಇದನ್ನು ಓದಿ-Big Mistake! ಈ ಆನ್ಲೈನ್ ಮಾರುಕಟ್ಟೆಯ ಡೇಟಾ ಹ್ಯಾಕ್! 2 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ SALE


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.