Google: ಈ ಅಪಾಯಕಾರಿ 8 ಆಪ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಆಗುತ್ತೆ
ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತೀರಿ. ಆದರೆ ಈ ಹಣ ಸುರಕ್ಷಿತವಾಗಿರಬೇಕು ಎಂದರೆ ಜಾಗರೂಕರಾಗಿರಿ. ನಿಮ್ಮ ಫೋನ್‌ನಲ್ಲಿ ಮಾಲ್ವೇರ್ನಿಂದ ದಾಳಿಗೊಳಗಾದ ಹಲವು ಆಪ್‌ಗಳು ಇರಬಹುದು. ಗೂಗಲ್ ಇತ್ತೀಚೆಗೆ ಇಂತಹ 8 ಆಪ್‌ಗಳನ್ನು ನಿಷೇಧಿಸಿದೆ. ಆದರೆ ನೀವು ಇನ್ನೂ ಅದೇ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಿ.
ನವದೆಹಲಿ: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿ (Crypto Currency) ಇದ್ದಕ್ಕಿದ್ದಂತೆ ಸಾಕಷ್ಟು ಜನಪ್ರಿಯವಾಗಿದೆ. ಹೆಚ್ಚಿನ ಜನರು ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ನೀವು ಕೂಡ ಅದರಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಸ್ವಲ್ಪ ತಾಳ್ಮೆಯಿಂದಿರಿ. ಇತ್ತೀಚೆಗೆ, ಗೂಗಲ್ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ತನ್ನ 8 ಪ್ಲೇ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ನಿಷೇಧಿಸಿದೆ. ನೀವು ಕೂಡ ಈ ಆಪ್‌ಗಳನ್ನು ತಪ್ಪಾಗಿ ಡೌನ್‌ಲೋಡ್ ಮಾಡಿದ್ದರೆ, ತಡಮಾಡದೆ ಕೂಡಲೇ ಅವುಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ, ನಿಮ್ಮ ಫೋನ್‌ನಲ್ಲಿಯೂ ಮಾಲ್‌ವೇರ್ ದಾಳಿ ಉಂಟಾಗಬಹುದು, ನಂತರ ನಿಮ್ಮ ಬ್ಯಾಂಕ್ ಖಾತೆಯು ಖಾಲಿಯಾಗಬಹುದು.
ಈ ರೀತಿಯಲ್ಲಿ ಖಾಲಿಯಾಗುತ್ತೆ ಖಾತೆ:
ಭದ್ರತಾ ಸಂಸ್ಥೆಯಾದ ಟ್ರೆಂಡ್ ಮೈಕ್ರೊ (Trend Micro) ವರದಿಯ ಪ್ರಕಾರ, 8 ಅಪಾಯಕಾರಿ ಆ್ಯಪ್‌ಗಳು ಜಾಹೀರಾತುಗಳನ್ನು ತೋರಿಸುವ ಮೂಲಕ ಮತ್ತು ಚಂದಾದಾರಿಕೆ ಸರಾಸರಿ ತಿಂಗಳಿಗೆ 1100 ರೂ. ಶುಲ್ಕ ವಿಧಿಸುವ ಮೂಲಕ ಸೇವೆಯನ್ನು ಒದಗಿಸುವುದಾಗಿ ತಿಳಿಸಿವೆ. ಆದರೆ ಹೆಚ್ಚುವರಿ ಶುಲ್ಕಗಳನ್ನು ತೆಗೆದುಕೊಳ್ಳುವ ಮೂಲಕ ಬಳಕೆದಾರರಿಗೆ ವಂಚಿಸಿವೆ ಎಂದು ತನಿಖೆಯು ಕಂಡುಹಿಡಿದಿದೆ. ಹಣವನ್ನು ಪಾವತಿಸಿದ ನಂತರ, ಬಳಕೆದಾರರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನಂತರ ದುರುಳರು ಬಳಕೆದಾರರ ಖಾತೆಯನ್ನು ಖಾಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಟ್ರೆಂಡ್ ಮೈಕ್ರೋ ಈ ಬಗ್ಗೆ ಗೂಗಲ್ ಪ್ಲೇಗೆ (Google Play) ಮಾಹಿತಿ ನೀಡಿತು. ನಂತರ ಆ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಆದಾಗ್ಯೂ, ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ ನಂತರವೂ, ಈ ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿರಬಹುದು. ಆದ್ದರಿಂದ ನಿಮ್ಮ ಫೋನ್ ಅನ್ನು ಈಗಲೇ ಪರಿಶೀಲಿಸಿ ಮತ್ತು ಆ ಆಪ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ.
ಇದನ್ನೂ ಓದಿ- WhatsApp ಬಳಕೆ ಮಾಡುವಾಗ ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ತೊಂದರೆ ಎದುರಾದೀತು!
ಈ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ:
1. ಬಿಟ್ ಫಂಡ್ಸ್ (BitFunds) – Crypto Cloud Mining
2. ಬಿಟ್ ಕಾಯಿನ್ ಮೈನರ್ (Bitcoin Miner) – Cloud Mining
3. ಬಿಟ್ ಕಾಯಿನ್ Bitcoin (BTC) – Pool Mining Cloud Wallet
4. ಕ್ರಿಪ್ಟೋ ಹೋಲಿಕ್ (Crypto Holic) – Bitcoin Cloud Mining
5. ಡೈಲಿ ಬಿಟ್ ಕಾಯಿನ್ ರಿವಾರ್ಡ್ಸ್ (Daily Bitcoin Rewards) – Cloud Based Mining System
6. ಬಿಟ್ ಕಾಯಿನ್ 2021 (Bitcoin 2021)
7. ಮೈನ್ಬಿಟ್ ಪ್ರೊ (MineBit Pro) - Crypto Cloud Mining & btc miner
8. Ethereum Ethereum (ETH) - Pool Mining Cloud
ಇದನ್ನೂ ಓದಿ- Realme: ಈ ಫೋನಿನಲ್ಲಿ ಕೇವಲ 5% ಬ್ಯಾಟರಿಯಲ್ಲೂ 2 ಗಂಟೆಗಳ ಕಾಲ ಯೂಟ್ಯೂಬ್ ನೋಡಬಹುದಂತೆ!
120 ಇತರೆ ಆಪ್‌ಗಳ ಮೇಲೆ ಗೂಗಲ್ ಕಣ್ಣು:
120 ಕ್ಕೂ ಹೆಚ್ಚು ನಕಲಿ ಕ್ರಿಪ್ಟೋಕರೆನ್ಸಿ ಆಪ್‌ಗಳು ಇನ್ನೂ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ವರದಿ ಹೇಳುತ್ತದೆ. 'ಈ ಅಪ್ಲಿಕೇಶನ್‌ಗಳು ಕ್ರಿಪ್ಟೋಕರೆನ್ಸಿ ಮೈನಿಂಗ್ ಹೆಸರಿನಲ್ಲಿ ಜನರನ್ನು ಮೋಸಗೊಳಿಸಲು ಅಪ್ಲಿಕೇಶನ್‌ನಲ್ಲಿನ ಜಾಹೀರಾತುಗಳನ್ನು ತೋರಿಸುತ್ತವೆ. ಈ ಆಪ್‌ಗಳಿಗೆ ಜುಲೈ 2020 ರಿಂದ ಜುಲೈ 2021 ರವರೆಗೆ ವಿಶ್ವಾದ್ಯಂತ 4500 ಕ್ಕೂ ಹೆಚ್ಚು ಬಳಕೆದಾರರು ಬಲಿಪಶುಗಳಾಗಿದ್ದಾರೆ. ಅಂತಹ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ದಯವಿಟ್ಟು ಅದರ ವಿಮರ್ಶೆಗಳನ್ನು ಓದಿ ಎಂದು ಕಂಪನಿಯು ಬ್ಲಾಗ್‌ನಲ್ಲಿ ಬರೆದಿದೆ. ರಷ್ಯಾದ ಭದ್ರತಾ ಸಂಸ್ಥೆಯ ದೂರಿನ ಮೇರೆಗೆ ಗೂಗಲ್ ತನ್ನ ಪ್ಲಾಟ್‌ಫಾರ್ಮ್‌ನಿಂದ 9 ಕ್ಕೂ ಹೆಚ್ಚು ಆಪ್‌ಗಳನ್ನು ತೆಗೆದುಹಾಕಿದೆ. ಆ ಆಪ್‌ಗಳು ಬಳಕೆದಾರರ ಫೇಸ್‌ಬುಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದವು ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ