ನವದೆಹಲಿ: InDEA 2.0 - ಮುಂಬರುವ ದಿನಗಳಲ್ಲಿ, ದೇಶದ ಪ್ರತಿಯೊಬ್ಬ ವ್ಯಕ್ತಿಯು ಒಂದೇ ಡಿಜಿಟಲ್ ಐಡಿ ಹೊಂದಿರಲಿದ್ದಾನೆ. ಇದರೊಂದಿಗೆ ಆಧಾರ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಸೇರಿದಂತೆ ಎಲ್ಲ ದಾಖಲೆಗಳು ಒಂದಕ್ಕೊಂದು ಲಿಂಕ್ ಆಗಲಿವೆ. ಅಂದರೆ, ಆಧಾರ್, ಪ್ಯಾನ್ ಅಥವಾ ಪರವಾನಗಿ ಪರಿಶೀಲನೆಗಾಗಿ ನೀವು ಪ್ರತ್ಯೇಕ ಐಡಿಗಳನ್ನು ಒದಗಿಸುವ ಅಗತ್ಯವಿಲ್ಲ. ಎಲೆಕ್ಟ್ರಾನಿಕ್ಸ್ ಸಚಿವಾಲಯ (MeitY) ಈ ಹೊಸ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತಿದೆ. MeitY ಕೇಂದ್ರೀಕೃತ ಡಿಜಿಟಲ್ ಗುರುತುಗಳ ಹೊಸ ಮಾದರಿಯನ್ನು ಪ್ರಸ್ತಾಪಿಸಿದೆ.


COMMERCIAL BREAK
SCROLL TO CONTINUE READING

ಪ್ರಸ್ತಾವಿತ ಕರಡಿನಲ್ಲಿ, ಸಚಿವಾಲಯವು ಈ ಏಕೀಕೃತ ಡಿಜಿಟಲ್ ಗುರುತನ್ನು ಈ ಗುರುತಿನ ಚೀಟಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ನಾಗರಿಕರನ್ನು ಸಶಕ್ತಗೊಳಿಸುತ್ತದೆ ಮತ್ತು ಯಾವ ಉದ್ದೇಶಕ್ಕಾಗಿ ಯಾವುದನ್ನು ಬಳಸಬೇಕು ಎಂಬ  ಆಯ್ಕೆ ಮಾಡುವ ಆಯ್ಕೆಯನ್ನು ಒದಗಿಸುತ್ತದೆ ಎಂದು ಸೂಚಿಸಿದೆ. ಪ್ರಸ್ತಾವನೆಯು ಶೀಘ್ರದಲ್ಲೇ ಸಾರ್ವಜನಿಕವಾಗಿ ಬರುವ ನಿರೀಕ್ಷೆಯಿದೆ ಮತ್ತು ಫೆಬ್ರವರಿ 27 ರೊಳಗೆ ಸಚಿವಾಲಯವು ಈ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಪಡೆಯಲಿದೆ.


ಇದನ್ನೂ ಓದಿ-Google Mapsಗೆ ಸೇರಿದ ಮತ್ತೊಂದು ವೈಶಿಷ್ಟ್ಯ, ಇನ್ಮುಂದೆ ಕೇವಲ ಪಿನ್ ಕೋಡ್ ಬಳಸಿ ವಿಳಾಸ ಹುಡುಕಿ


ಎಲ್ಲಾ ರಾಜ್ಯಗಳ ಐಡಿಗಳನ್ನು ಸಹ ಲಿಂಕ್ ಮಾಡಲಾಗುತ್ತದೆ
ಈ ಏಕೀಕೃತ ಡಿಜಿಟಲ್ ಗುರುತಿನ ಅಡಿಯಲ್ಲಿ, ಕೇಂದ್ರದ ಜೊತೆಗೆ ವಿವಿಧ ರಾಜ್ಯಗಳ ಗುರುತಿನ ಚೀಟಿಗಳನ್ನು ಸಹ ಒಟ್ಟಿಗೆ ಇರಿಸಬಹುದು. ಇಕೆವೈಸಿ ಮೂಲಕ ಇತರ ಥರ್ಡ್ ಪಾರ್ಟಿ  ಸೇವೆಗಳನ್ನು ಪಡೆಯಲು ಈ ಡಿಜಿಟಲ್ ಐಡಿಯನ್ನು ಬಳಸಬಹುದು. ಇದಲ್ಲದೆ, ನಾಗರಿಕರ ಎಲ್ಲಾ ಡಿಜಿಟಲ್ ಗುರುತುಗಳನ್ನು ಪರಸ್ಪರ ಜೋಡಿಸಬಹುದು, ಇದು ಕರಡು ಪ್ರಸ್ತಾವನೆಯ ಪ್ರಕಾರ ಪುನರಾವರ್ತಿತ ಪರಿಶೀಲನೆ ಪ್ರಕ್ರಿಯೆಯ ಅಗತ್ಯವನ್ನು ನಿವಾರಿಸುತ್ತದೆ.


ಇದನ್ನೂ ಓದಿ-Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್


2017 ರಲ್ಲಿ ಯೋಜನೆ ರೂಪಿಸಲಾಗಿದೆ
ಸಚಿವಾಲಯವು ಇಂಡಿಯಾ ಎಂಟರ್‌ಪ್ರೈಸ್ ಆರ್ಕಿಟೆಕ್ಚರ್ (IndEA) 2.0 ಅಡಿಯಲ್ಲಿ ಪ್ರಸ್ತಾವನೆಯನ್ನು ಮಂಡಿಸಿದೆ. IndEA ಗೆ ಮೊದಲ ಬಾರಿಗೆ 2017 ರಲ್ಲಿ "ಸರ್ಕಾರಿ ಸಂಸ್ಥೆಗಳಿಂದ ವ್ಯಾಪಾರ ವಿಧಾನದೊಂದಿಗೆ IT ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು" ಪ್ರಸ್ತಾಪಿಸಲಾಗಿದೆ  ಮತ್ತು ವಿನ್ಯಾಸಗೊಳಿಸಲಾಗಿದೆ. ನಂತರ ಅದನ್ನು ನವೀಕರಿಸಲಾಗಿದೆ. ಆವೃತ್ತಿ 2.0 ರಲ್ಲಿ,  InDEA, ಸಾರ್ವಜನಿಕ ಹಾಗೂ ಜೊತೆಗೆ ಖಾಸಗಿ ಕ್ಷೇತ್ರದ ಕಂಪನಿಗಳಿಗೆ " ಗ್ರಾಹಕರಿಗೆ ಸಮಗ್ರ ಹಾಗೂ ಏಕೀಕೃತ ಸೇವೆಗಳನ್ನು" ಒದಗಿಸಲು "ತಮ್ಮ ಸಾಂಸ್ಥಿಕ ಚೌಕಟ್ಟನ್ನು ಮೀರಿ" ಕಾರ್ಯನಿರ್ವಹಿಸುವ ಚೌಕಟ್ಟನ್ನು ಪ್ರಸ್ತಾಪ್ದಿದ್ದು, ಇದು ಐಟಿ ವಾಸ್ತುಶಿಲ್ಪವನ್ನು ರಚಿಸಲು ಮತ್ತು ವಿನ್ಯಾಸಗೊಳಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಅನುಮತಿಸಲಿದೆ. 


ಇದನ್ನೂ ಓದಿ-Face ID ಮೂಲಕ ಫೋನ್ ಅನ್ಲಾಕ್ ಮಾಡಲು ಇನ್ಮುಂದೆ ನೀವು ಮಾಸ್ಕ್ ತೆಗೆಯಬೇಕಾಗಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.