Government Operating System: Android ಹಾಗೂ iOSಗಳಿಗೆ ಪೈಪೋಟಿ ನೀಡಲು ಬರುತ್ತಿದೆ ಸರ್ಕಾರಿ ಆಪರೇಟಿಂಗ್ ಸಿಸ್ಟಂ!

Operating System - ಇತ್ತೀಚೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (Ministry of Electronics and IT)  ರಾಜ್ಯ ಸಚಿವ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಂದರ್ಶನವೊಂದರಲ್ಲಿ ಐಒಎಸ್ (iOS) ಮತ್ತು ಆಂಡ್ರಾಯ್ಡ್‌ಗೆ (Android) ಸ್ಪರ್ಧಿಸುವ ಭಾರತೀಯ ಆಪರೇಟಿಂಗ್ ಸಿಸ್ಟಮ್ (Indian OS) ಅನ್ನು ತಯಾರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Written by - Nitin Tabib | Last Updated : Jan 29, 2022, 05:33 PM IST
  • ಭಾರತ ತನ್ನದೇ ಆದ ಆಪರೇಟಿಂಗ್ ಸಿಸ್ಟಂ ಸಿದ್ಧಪಡಿಸಲಿದೆ.
  • IT ಸಚಿವರು ಈ ಕುರಿತು ಮಾಹಿತಿ ನೀಡಿದ್ದಾರೆ
  • ಆಂಡ್ರಾಯ್ದ್ ಹಾಗೂ ಐಓಎಸ್ ಗೆ ನೀಡಲಿದೆ ಪೈಪೋಟಿ
Government Operating System: Android ಹಾಗೂ iOSಗಳಿಗೆ ಪೈಪೋಟಿ ನೀಡಲು ಬರುತ್ತಿದೆ ಸರ್ಕಾರಿ ಆಪರೇಟಿಂಗ್ ಸಿಸ್ಟಂ! title=
Government Operating System (File Photo)

ನವದೆಹಲಿ: Made In India OS - ಪ್ರತಿಯೊಬ್ಬರೂ ಸ್ಮಾರ್ಟ್ಫೋನ್ ಅನ್ನು ಬಳಸುತ್ತಾರೆ ಮತ್ತು ಸ್ಮಾರ್ಟ್ಫೋನ್ಗಳು ಆಪರೇಟಿಂಗ್ ಸಿಸ್ಟಮ್ ಗಳಾಗಿರುವ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಕಾರ್ಯನಿರ್ವಹಿಸುತ್ತವೆ. ಭಾರತ ಸರ್ಕಾರವು ಇದೀಗ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗುವ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸಲು ಯೋಜಿಸುತ್ತಿದೆ. ಈ ಮೂಲಕ ಸರ್ಕಾರವು ಆಂಡ್ರಾಯ್ಡ್ ಮತ್ತು ಐಒಎಸ್‌ಗೆ  ತೀವ್ರ ಸ್ಪರ್ಧೆಯನ್ನು ನೀಡಲಿದೆ. ಇದಕ್ಕಾಗಿ ಸರ್ಕಾರವು (Government Of India) ಭಾರತದ ಶೈಕ್ಷಣಿಕ ಮತ್ತು ಸ್ಟಾರ್ಟಪ್ ಇಕೋಸಿಸ್ಟಂ ನಿಂದ ಸಹಾಯ ಪಡೆಯಲಿದೆ ಎನ್ನಲಾಗುತ್ತಿದೆ.

ಭಾರತ ಸರ್ಕಾರ ತನ್ನದೇ ಅದ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸುತ್ತಿದೆ
ಇತ್ತೀಚೆಗಷ್ಟೇ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ  ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್, ಈ ಹೊಸ ಆಪರೇಟಿಂಗ್ ಸಿಸ್ಟಮ್ ಗೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಉದ್ಯಮವು ಭಾರತೀಯ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸಬಹುದಾದ ಇಕೋಸಿಸ್ಟಂ ಅನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುವ ಯೋಜನೆಯನ್ನು ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. 

Android ಮತ್ತು iOS ಗೆ ಪೈಪೋಟಿ 
ಈ ಆಪರೇಟಿಂಗ್ ಸಿಸ್ಟಂ ಆಂಡ್ರಾಯ್ಡ್ ಮತ್ತು ಐಒಎಸ್ ಗೆ ಪೈಪೋಟಿ ನೀಡಲಿದೆಯೇ ಎಂದು ಸಚಿವರನ್ನು ಪ್ರಶ್ನಿಸಿದಾಗ, ಭಾರತದ ಆಪರೇಟಿಂಗ್ ಸಿಸ್ಟಂ ಸಾಮರ್ಥ್ಯವನ್ನು ಹೊಂದಿದ್ದರೆ ಅದನ್ನು ಮೂರನೇ ಆಯ್ಕೆಯಾಗಿ ನೋಡಬಾರದು ಎಂದು ಹೇಳಿದ್ದಾರೆ. ಬ್ಲಾಕ್‌ಬೆರಿ ಸುರ್ ಸಿಂಬಿಯಾನ್‌ನ ಉದಾಹರಣೆಯನ್ನು ನೀಡಿದ ಸಚಿವರು, ನಾವು ಅದನ್ನು ಮಾಡಲು ಸಾಧ್ಯವಾದರೆ, ನಮ್ಮದೇ ಆದ ಆಪರೇಟಿಂಗ್ ಸಿಸ್ಟಮ್ ಅನ್ನು ಸಹ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-TCS ಈಗ ವಿಶ್ವದ ಎರಡನೇ ಅತ್ಯಮೂಲ್ಯ IT ಬ್ರ್ಯಾಂಡ್...!

ಸರ್ಕಾರದ ಗುರಿ
ಈ ಹೊಸ ಆಪರೇಟಿಂಗ್ ಸಿಸ್ಟಮ್ (Indian Os) ಅನ್ನು ಸಂಪೂರ್ಣವಾಗಿ ಭಾರತದಲ್ಲಿ ರಚಿಸುವುದರ ಹಿಂದೆ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ (Narendra Modi) ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ದೊಡ್ಡ ಗುರಿಯನ್ನು ಹೊಂದಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ರಾಜೀವ್ ಚಂದ್ರಶೇಖರ್ ಅವರ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಸರಕು ಉತ್ಪನ್ನ ವಿಭಾಗದಲ್ಲಿ ದೇಶೀಯ ಚಾಂಪಿಯನ್‌ಗಳನ್ನು ರಚಿಸಲು ಬಯಸುತ್ತಿದ್ದಾರೆ ಎಂದಿದ್ದಾರೆ. 

ಇದನ್ನೂ ಓದಿ-huge discount on smartphone : ಕೇವಲ 99 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು Realmeಯ ಈ ಫೋನ್

ಅಲ್ಲದೆ, ಹಾರ್ಡ್‌ವೇರ್ ವಿಭಾಗದಲ್ಲಿ, 2026 ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 22.5 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಬೇಕೆಂದು ಸರ್ಕಾರ ಬಯಸುತ್ತದೆ, ಆದರೆ ಅದು ಪ್ರಸ್ತುತ ಐದು ಲಕ್ಷ ಕೋಟಿಯಲ್ಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತಂದ WhatsApp..! ಏನೆಲ್ಲಾ ಇವೆ ಗೊತ್ತೇ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News