ಬೆಂಗಳೂರು : ಬೇಸಿಗೆಯಲ್ಲಿ, ಫ್ಯಾನ್, ಕೂಲರ್ ಮತ್ತು ಎಸಿಗಳ ನಿರಂತರ ಬಳಕೆಯಿಂದ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಇದರ ಜೊತೆ ಟಿವಿಗಾಗಿ ಖರ್ಚಾಗುವ ವಿದ್ಯುತ್ ಕೂಡಾ ಮುಖ್ಯವಾಗಿರುತ್ತದೆ. ಭಾರತದಲ್ಲಿ ಸುಮಾರು 70 ಪ್ರತಿಶತ ಜನರು ಟಿವಿಯ ಮೇನ್ ಸ್ವಿಚ್ ಆಫ್ ಮಾಡುವ ಬದಲು ರಿಮೋಟ್‌ನಿಂದ ಮಾತ್ರ ಟಿವಿಯನ್ನು ಆಫ್ ಮಾಡುತ್ತಾರೆ. ಟಿವಿಯನ್ನು ಸ್ಟ್ಯಾಂಡ್‌ಬೈನಲ್ಲಿ ಇಡುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. 


COMMERCIAL BREAK
SCROLL TO CONTINUE READING

ಸಣ್ಣ ವಸ್ತುಗಳಿಂದ ವಿದ್ಯುತ್ ಉಳಿಸಿ :
ನಮ್ಮ ಖರ್ಚುಗಳನ್ನು ಕಡಿಮೆ ಮಾಡಲು ನಾವು ಅನೇಕ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತೇವೆ. ಆದರೆ ನಮ್ಮ ಸುತ್ತಲೇ ಇರುವ ಕೆಲವು ಸಣ್ಣ ಸಣ್ಣ ವಿಷಯಗಳನ್ನು ಮರೆತುಬಿಡುತ್ತೇವೆ. ಈ ಬಗ್ಗೆ ಗಮನ ಹರಿಸುವ ಮೂಲಕ ಹಣವನ್ನು ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಕೆಲವು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. 


ಇದನ್ನೂ ಓದಿ : ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕು ಹಳೆಯ ಫೋನ್ ಅನ್ನು ಬೇಕಾದ ದರಕ್ಕೆ ಮಾರಬಹುದು!


ಗ್ಯಾಜೆಟ್‌ಗಳನ್ನು ಸರಿಯಾಗಿ  ಬಂದ್ ಮಾಡಿ : 
ನಿಮ್ಮ ಮನೆಯಲ್ಲಿ ಗ್ಯಾಜೆಟ್‌ಗಳು ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ಸರಿಯಾಗಿ ಸ್ವಿಚ್ ಆಫ್ ಮಾಡಿ. ಗ್ಯಾಜೆಟ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಬೇಡಿ. ಮೇನ್ ಸ್ವಿಚ್‌ ಆಫ್ ಮಾಡಿ. ಗ್ಯಾಜೆಟ್ ಅನ್ನು ಸ್ಟ್ಯಾಂಡ್‌ಬೈನಲ್ಲಿ ಬಿಟ್ಟಾಗ, ಅದು ಪವರ್ ಸಾಕೆಟ್‌ನಿಂದ ವಿದ್ಯುತನ್ನು ಸೆಳೆಯುತ್ತದೆ.ಟಿವಿಯನ್ನು ಕೇವಲ ರಿಮೋಟ್ ಮಿಲಕ ಆಫ್ ಮಾಡಿ, ಸ್ಟ್ಯಾಂಡ್‌ಬೈನಲ್ಲಿ ಬಿಟ್ಟರೆ, ಅದು ನಿಮ್ಮ ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. 


ಸ್ಟ್ಯಾಂಡ್‌ಬೈನಲ್ಲಿ ಟಿವಿ ಎಷ್ಟು ವಿದ್ಯುತನ್ನು ಬಳಸುತ್ತದೆ? :
ಒಂದು ಟಿವಿ ಸ್ಟ್ಯಾಂಡ್‌ಬೈನಲ್ಲಿರುವಾಗ ಒಂದು ಗಂಟೆಗೆ 10 ವ್ಯಾಟ್‌ಗಳ ವಿದ್ಯುತ್ ಅನ್ನು ಬಳಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ  ಇದು ನೀವು ಯಾವಾ ಸ್ಥಳದಲ್ಲಿ  ವಾಸಿಸುತ್ತೀರಿ ಮತ್ತು ನಿಮ್ಮ ವೈಯಕ್ತಿಕ ಬಳಕೆಯನ್ನು ಅವಲಂಬಿಸಿ  ಬದಲಾಗಬಹುದು. ನಿಮ್ಮ ಗ್ಯಾಜೆಟ್‌ನ ಪವರ್ ರೇಟಿಂಗ್ ಹೆಚ್ಚು ಅಥವಾ ಕಡಿಮೆ ಇದ್ದರೆ ಅದು ನಿಮ್ಮ ವಿದ್ಯುತ್ ಬಿಲ್‌ನ ಮೇಲೂ ಪರಿಣಾಮ ಬೀರುತ್ತದೆ. ರಿಮೋಟ್‌ನಿಂದ ಟಿವಿಯನ್ನು ಮಾತ್ರ ಆಫ್ ಮಾಡುವುದರಿಂದ ಪ್ರತಿ ವರ್ಷ 1200 ರೂ.ವರೆಗೆ ಹೆಚ್ಚು ವಿದ್ಯುತ್ ಬಿಲ್ ಪಾವತಿಸುತ್ತೀರಿ. ಅದಕ್ಕಾಗಿಯೇ ಇಂದಿನಿಂದಲೇ ಮೇನ್ ಸ್ವಿಚ್‌ನಿಂದ ಟಿವಿಯನ್ನು ಸ್ವಿಚ್ ಆಫ್ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. 


ಇದನ್ನೂ ಓದಿ : ಮಾರುತಿ ಆಲ್ಟೊ 800 ದರದಲ್ಲಿಯೇ ಸಿಗುತ್ತೆ ಅದಕ್ಕಿಂತ ಹಲವು ಪಟ್ಟು ಉತ್ತಮ ಕಾರ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.