ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕು ಹಳೆಯ ಫೋನ್ ಅನ್ನು ಬೇಕಾದ ದರಕ್ಕೆ ಮಾರಬಹುದು!

 ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕಾಗುತ್ತದೆ.  ನಿಮ್ಮ ಫೋನ್ ಹೊಚ್ಚ ಹೊಸದರಂತಾಗುತ್ತದೆ. ಆಮೇಲೆ ನಿಮಗೆ ಬೇಕಾಗುವ ದರವನ್ನು ಪಡೆದು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಮಾರಾಟ ಮಾಡಬಹುದು. 

Written by - Ranjitha R K | Last Updated : Mar 13, 2023, 03:17 PM IST
  • ದಿನೇ ದಿನೇ ಹೊಸ ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಡುತ್ತಿದೆ.
  • ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ.
  • ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕಾಗುತ್ತದೆ.
ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕು ಹಳೆಯ ಫೋನ್ ಅನ್ನು ಬೇಕಾದ ದರಕ್ಕೆ ಮಾರಬಹುದು!  title=

ಬೆಂಗಳೂರು : ದಿನೇ ದಿನೇ ಹೊಸ ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಡುತ್ತಿದೆ. ಸ್ಮಾರ್ಟ್‌ಫೋನ್ ಹಳೆಯದಾಗುತ್ತಿದ್ದಂತೆ ಅದನ್ನು ಮಾರಾಟ ಮಾಡಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುವವರು ಹಲವರು. ಆದರೆ, ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ ತಾನು ಅಂದುಕೊಂಡ ಬೆಲೆ ಸಿಗುತ್ತದೆಯೇ ಇಲ್ಲವೇ ಎನ್ನುವುದೇ ಪ್ರಶ್ನೆಯಾಗಿರುತ್ತದೆ. ನಿಮಗೂ ಕೂಡಾ ಹಳೆ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಯೋಚನೆಯಿದ್ದರೆ, ಭಯ ಪಡಬೇಕಾಗಿಲ್ಲ. ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕಾಗುತ್ತದೆ.  ನಿಮ್ಮ ಫೋನ್ ಹೊಚ್ಚ ಹೊಸದರಂತಾಗುತ್ತದೆ. ಆಮೇಲೆ ನಿಮಗೆ ಬೇಕಾಗುವ ದರವನ್ನು ಪಡೆದು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಮಾರಾಟ ಮಾಡಬಹುದು. 

ಟ್ಯಾಂಪರ್ಡ್  ಗ್ಲಾಸ್ : 
ಇತ್ತೀಚಿನ ದಿನಗಳಲ್ಲಿ ಸ್ಟ್ರಾಂಗ್ ಟೆಂಪರ್ಡ್ ಗ್ಲಾಸ್‌ಗಳು ಮಾರುಕಟ್ಟೆಯಲ್ಲಿ  20 ರಿಂದ 100  ರೂಪಾಯಿ ಬೆಲೆಗೆ ಲಭ್ಯವಿದೆ. ಇದನ್ನು ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಗೆ ಹಾಕುವ ಮೂಲಕ ಗರಿಷ್ಠ ಪ್ರೊಟೆಕ್ಷನ್ ಪಡೆಯಬಹುದು. ಸ್ಮಾರ್ಟ್‌ಫೋನ್‌ನ  ಡಿಸ್ಪ್ಲೇಯನ್ನು ರಕ್ಷಿಸಲು ಮತ್ತು ಹಳೆಯ ಸ್ಮಾರ್ಟ್ ಫೋನ್ ಅನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಕಾದರೆ ಈ ವಿಧಾನವು ಸಹಾಯಕ್ಕೆ ಬರುತ್ತದೆ.  

ಇದನ್ನೂ ಓದಿ : ಮಾರುತಿ ಆಲ್ಟೊ 800 ದರದಲ್ಲಿಯೇ ಸಿಗುತ್ತೆ ಅದಕ್ಕಿಂತ ಹಲವು ಪಟ್ಟು ಉತ್ತಮ ಕಾರ್

ಸ್ಮಾರ್ಟ್ಫೋನ್  ಬಾಡಿ ಸ್ಕಿನ್  :
ಸ್ಮಾರ್ಟ್‌ಫೋನ್ ಹಳೆಯದಾಗಿದ್ದರೆ, ಅದರ ಬಾಡಿ ಹೊಸದರಂತೆ ಹೊಳಪು ಉಳಿಸಿಕೊಂಡಿರುವುದಿಲ್ಲ. ಹೀಗಾದಾಗ ಅದನ್ನು ಖರೀದಿಸುವುದು ಕೂಡಾ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ ಬಾಡಿ ಸ್ಕಿನ್  ಹಾಕುವ ಮೂಲಕ, ಹಳೆಯ ಸ್ಮಾರ್ಟ್ಫೋನ್ ಅನ್ನು ಹೊಸದರಂತೆ ಮಾಡಬಹುದು. ಇದೀಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಬಾಡಿ ಸ್ಕಿನ್ ಲಭ್ಯವಿದ್ದು, ಸ್ಮಾರ್ಟ್ ಫೋನ್ ಗಾತ್ರಕ್ಕೆ ಅನುಗುಣವಾಗಿ ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರ ಬೆಲೆ 50 ರಿಂದ ₹ 100 ರೂಪಾಯಿಯಷ್ಟಿರುತ್ತದೆ. ಆದ್ದರಿಂದ ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಈ ಬಾಡಿ ಸ್ಕಿನ್ ಅನ್ನು  ಫೋನ್ ಗೆ ಹಾಕಬಹುದು. ಫೋನ್ ಬಾಡಿ ಸ್ಕಿನ್  ಹಾಕಿದ ಬಳಿಕ ಫೋನ್ ಖರೀದಿಸುವ ವ್ಯಕ್ತಿಯ ಬಳಿ ಹೆಚ್ಚು ಹಣಕ್ಕಾಗಿ ಬೇಡಿಕೆ ಇಡಬಹುದು.  

ಇದನ್ನೂ ಓದಿ : Big Saving Days Sale: ಕೇವಲ ₹599ಗೆ ಖರೀದಿಸಿ ಈ ₹10,699 ಸ್ಮಾರ್ಟ್‌ಫೋನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News