Blood Groupಗೆ ಸಂಬಂಧಿಸಿದ ಈ ಸಂಶೋಧನಾ ವರದಿ ನಿಮಗೂ ತಿಳಿದಿರಲಿ
Blood Group - ನಿಮ್ಮ ಬ್ಲಡ್ ಗ್ರೂಪ್ ಯಾವುದು? ಏಕೆಂದರೆ coronavirus ಬ್ಲಡ್ ಗ್ರೂಪ್ ನೋಡಿ ದಾಳಿ ಇಡುತ್ತಿದೆ. ಹೀಗಂತ ನಾವು ನಿಮಗೆ ಹೆದರಿಸುತ್ತಿಲ್ಲ. ಚೀನಾದಲ್ಲಿ ನಡೆದ ಕ್ಲಿನಿಕಲ್ ರಿಸರ್ಚ್ ವೊಂದು ಹೀಗೆಯೇ ಹೇಳುತ್ತಿದೆ.
ನವದೆಹಲಿ: Health Tips - ನಿಮ್ಮ ಬ್ಲಡ್ ಗ್ರೂಪ್ (Blood Groups) ಯಾವುದು? ಏಕೆಂದರೆ coronavirus ಬ್ಲಡ್ ಗ್ರೂಪ್ ನೋಡಿ ದಾಳಿ ಇಡುತ್ತಿದೆ. ಹೀಗಂತ ನಾವು ನಿಮಗೆ ಹೆದರಿಸುತ್ತಿಲ್ಲ. ಚೀನಾದಲ್ಲಿ ನಡೆದ ಕ್ಲಿನಿಕಲ್ ರಿಸರ್ಚ್ ವೊಂದು ಹೀಗೆಯೇ ಹೇಳುತ್ತಿದೆ. ಈ ಕುರಿತು ರಿಸರ್ಚ್ ಮಾಡಿರುವ ಚೈನಾ ಸಂಶೋಧಕರು A ಬ್ಲಡ್ ಗ್ರೂಪ್ ಜನರಿಗೆ ಈ ವೈರಸ್ ನ ಅಪಾಯ ಹೆಚ್ಚು ಎಂದು ಹೇಳಿದ್ದರೆ, O ಬ್ಲಡ್ ಗ್ರೂಪ್ ಜನರಿಗೆ ಸ್ವಲ್ಪ ಅಪಾಯ ಕಡಿಮೆ ಎಂದಿದ್ದಾರೆ. ಚೀನಾದ ಸುಮಾರು 2173 ಜನರ ಮೇಲೆ ಈ ಸಂಶೋಧನೆಯನ್ನು ನಡೆಸಲಾಗಿದ್ದು, ಚೀನಾದಲ್ಲಿ ನಡೆದ ಇಂತಹ ಮೊದಲನೆಯ ಅಧ್ಯಯನ ಇದಾಗಿದೆ. ಈ ಅಧ್ಯಯನವನ್ನು ವುಹಾನ್ ನ ರೆನಿಯನ್ ಆಸ್ಪತ್ರೆ, ಜಿನಿಂತಾನ ಆಸ್ಪತ್ರೆ ಹಾಗೂ ಶೇನ್ ಜೇನ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ಚೀನಾದ ರಿಸರ್ಚ್ ಮ್ಯಾಗಜೀನ್ ಆಗಿರುವ MedRxiv ನಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ. ಚೀನಾದ ಪ್ರತಿಷ್ಠಿತ ವೃತ್ತ ಪತ್ರಿಕೆಯಾಗಿರುವ ಗ್ಲೋಬಲ್ ಟೈಮ್ಸ್ ನಲ್ಲಿಯೂ ಕೂಡ ಈ ಅಧ್ಯಯನ ಪ್ರಕಟಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ವುಹಾನ್ ನ ಸೆಂಟ್ ಮೈಕಲ್ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ್ ಚೌಬೆ, ಇಂತಹ ಒಂದು ಅಧ್ಯಯನ ನಡೆಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಶಂಕಿತರು ಎ ಬ್ಲಡ್ ಗ್ರೂಪ್ ನವರಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಶೇಕಡಾವಾರು ಹೇಳುವುದಾದರೆ ಪ್ರತಿ 100 ಶಂಕಿತರಲ್ಲಿ ಶೇ.37ರಷ್ಟು ಎ ಗ್ರೂಪ್ ಹೊಂದಿದ ಜನರಿಗೆ ಕೊರೊನಾ ವೈರಸ್(Covid-19) ಅಂಟಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಬ್ಲಡ್ ಗ್ರೂಪ್ B ಹಾಗೂ ಬ್ಲಡ್ ಗ್ರೂಪ್ AB ಹೊಂದಿರುವವರ ಶರೀರ ಕೊರೊನಾ ವೈರಸ್ ಪ್ರತಿ ಯಾವುದೇ ವಿಶೇಷ ವ್ಯವಹಾರ ಹೊಂದಿರದೆ ಇರುವುದು ಗಮನಕ್ಕೆ ಬಂದಿರುವುದಾಗಿ ಅಧ್ಯಯನ ಹೇಳಿದೆ. ಆದರೆ, ಬ್ಲಡ್ ಗ್ರೂಪ್ O ಹೊಂದಿರುವ ಜನರು ಕೊರೊನಾ ದಾಳಿಗೆ ಕಡಿಮೆ ತುತ್ತಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ-Coronavirus New Double Mutant Wave In India: ಭಾರತದಲ್ಲಿ ಡಬಲ್ ರೂಪಾಂತರಿ ಕೊರೊನಾ ಅಲೆ, ಎಷ್ಟು ಅಪಾಯಕಾರಿ?
ಆದರೆ ಭಾರತೀಯ ವೈದ್ಯರು ಈ ಅಧ್ಯಯನದ ಕುರಿತು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪೋಲೋ ಆಸ್ಪತ್ರೆಯ ಹಿಮೆಟೋ ಓಂಕಾಲಾಜಿ ವಿಭಾಗದ ವೈದ್ಯರಾಗಿರುವ ಡಾ.ಗೌರವ್ ಖಾರಯಾ, ವಿಶೇಷ ಬ್ಲಡ್ ಗ್ರೂಪ್ ನ ರೋಗಿಗಳು ಒಂದು ವಿಶೇಷ ರೋಗ ಪ್ರತಿ ಸಸೆಪ್ಟಿಬಲ್ ಆಗಿರುವುದು ಕೆಲ ಪ್ರಕರಣಗಳಲ್ಲಿ ಗಮನಿಸಲಾಗಿದೆ ಎಂದಿದ್ದಾರೆ. ಉದಾಹರಣೆಗಾಗಿ ಸಿಕಿಲ್ ಸೆಲ್ ಇರುವವರು ಹೆಚ್ಚಿನವರು O ಬ್ಲಡ್ ಗ್ರೂಪ್ ನವರಾಗಿರುತ್ತಾರೆ. ಆದರೆ, ಕೊರೊನಾ ಒಂದು ನೂತನ ಕಾಯಿಲೆಯಾಗಿದ್ದು, ಚೀನಾದಲ್ಲಿ ನಡೆದ ಅಧ್ಯಯನದ ಸ್ಯಾಂಪಲ್ ಸೈಜ್ ತುಂಬಾ ಚಿಕ್ಕದಾಗಿದೆ. ಹೀಗಾಗಿ ಇಂತಹ ಒಂದು ನಿರ್ಣಯಕ್ಕೆ ಬರುವುದು ಉಚಿತವಲ್ಲ. ಒಂದು ವೇಳೆ ಇದ್ದರೂ ಕೂಡ ಈ ರೋಗಕ್ಕೆ ಲಸಿಕೆ ನೀಡುವ ವೇಳೆ ಎಲ್ಲ ಬ್ಲಡ್ ಗ್ರೂಪ್ ನ ಜನರ ಮೇಲೆ ಲಸಿಕೆ ಸಮನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದರೆ.(Immunity)
ಇದನ್ನೂ ಓದಿ-Turmeric for TB : ನಿಮಗೆ ಗೊತ್ತಿದೆಯಾ ಟಿಬಿ ರೋಗಕ್ಕೂ ರಾಮಬಾಣ ಅಡುಗೆ ಮನೆ ಅರಿಶಿನ
ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ NMDCಯ ಆಯುರ್ವೇದ ಆಸ್ಪತ್ರೆಯ ಮಾಜಿ ವೈದ್ಯಕೀಯ ಅಧಿಕಾರಿ ವೈದ್ಯ DM ತ್ರಿಪಾಠಿ A ಬ್ಲಡ್ ಗ್ರೂಪ್ ರಿಸೆಪ್ಟರ್ ಆಗಿದ್ದು, 'O' ಬ್ಲಡ್ ಗ್ರೂಪ್ ಯೂನಿವರ್ಸಲ್ ಡೋನರ್ ಆಗಿದ್ದು, ಇಬ್ಬರಿಗೂ ಕೂಡ ಯಾವುದೇ ಆತಂಕ ಇಲ್ಲ. ಆದರೆ, ವಾಸ್ತವಿಕವಾಗಿ ಕೊರೊನಾ ಸಂಬಂಧ ಯಾವುದೇ ಬ್ಲಡ್ ಗ್ರೂಪ್ ಜೊತೆ ಇಲ್ಲ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯ ಜೊತೆಗೆ ನೇರ ಸಂಬಂಧ ಹೊಂದಿದೆ. ಬ್ಲಡ್ ಗ್ರೂಪ್ ನೋಡಿ ಇದು ದಾಳಿ ನಡೆಸುವುದಿಲ್ಲ. ಹೆಚ್ಚಿನ ವಯಸ್ಸು ಇರುವವರಿಗೆ ಇಮ್ಯೂನಿಟಿ ತುಂಬಾ ಕಡಿಮೆಯಾಗಿರುತ್ತದೆ ಹೀಗಾಗಿ ಇದು ವಯಸ್ಕರಲ್ಲಿ ಹೆಚ್ಚು ರಿಸ್ಕಿ ಆಗಿದೆ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.